11 ವರ್ಷಗಳ ನಂತರದ ಚಮತ್ಕಾರ, ಫೆಬ್ರವರಿ 2026 ಅನ್ನು 'ಪರ್ಫೆಕ್ಟ್ ಮಂತ್' ಅಂತಾ ಹೇಳ್ತಿರೋದೇಕೆ?

Published : Feb 02, 2026, 04:56 PM IST
Perfect February 2026

ಸಾರಾಂಶ

Perfect February 2026: Why the Viral Calendar is Going Viral 2026ರ ಫೆಬ್ರವರಿ ತಿಂಗಳು ಭಾನುವಾರದಂದು ಪ್ರಾರಂಭವಾಗಿ ಶನಿವಾರದಂದು ಕೊನೆಗೊಳ್ಳುತ್ತದೆ, ಇದು ಕ್ಯಾಲೆಂಡರ್ ವಿನ್ಯಾಸಕ್ಕೆ ಸಂಪೂರ್ಣವಾಗಿ ಹೊಂದಿಕೊಂಡಿದೆ.

ಬೆಂಗಳೂರು (ಫೆ.2): ಸೋಶಿಯಲ್‌ ಮೀಡಿಯಾದಲ್ಲಿ 'ಪರ್ಫೆಕ್ಟ್ ಫೆಬ್ರವರಿ' (Perfect February) ಎಂಬ ಪದ ಅತಿ ಹೆಚ್ಚು ಸದ್ದು ಮಾಡುತ್ತಿರುವುದನ್ನು ನೀವು ನೋಡಿರಬಹುದು. ಇದು ರಜೆಗಳ ಕುರಿತಾದ ಸುದ್ದಿಯಲ್ಲ ಅಥವಾ ಯಾವುದೋ ಅಪರೂಪದ ಖಗೋಳ ಘಟನೆಯೂ ಅಲ್ಲ. ಆದರೂ ಜನ ಮಾತ್ರ ಈ ಬಗ್ಗೆ ಭಾರಿ ಚರ್ಚೆ ಮಾಡುತ್ತಿದ್ದಾರೆ.

ಹಾಗಾದರೆ ಏನಿದು ಪರ್ಫೆಕ್ಟ್ ಫೆಬ್ರವರಿ? ಅಸಲಿ ವಿಷಯ ಇಲ್ಲಿದೆ

2026ರ ಫೆಬ್ರವರಿ ತಿಂಗಳು ಒಂದು ಭಾನುವಾರದಿಂದ (ಫೆಬ್ರವರಿ 1) ಆರಂಭವಾಗಿ, ಶನಿವಾರದಂದು (ಫೆಬ್ರವರಿ 28) ಕೊನೆಗೊಳ್ಳುತ್ತದೆ. ಇದು ಕ್ಯಾಲೆಂಡರ್‌ನ ಚೌಕಟ್ಟಿನಲ್ಲಿ ಅಚ್ಚುಕಟ್ಟಾಗಿ ಹೊಂದಿಕೊಳ್ಳುತ್ತದೆ. ಅಂದರೆ, ಯಾವುದೇ ದಿನಗಳು ಮುಂದಿನ ಸಾಲಿಗೆ ಚೆಲ್ಲಾಪಿಲ್ಲಿಯಾಗದೆ, ನಿಖರವಾಗಿ ನಾಲ್ಕು ಸಾಲುಗಳಲ್ಲಿ (4x7 ಗ್ರಿಡ್) ಇಡೀ ತಿಂಗಳು ಮುಕ್ತಾಯವಾಗುತ್ತದೆ. ಇದನ್ನೇ ಇಂಟರ್ನೆಟ್ ಲೋಕವು 'ಅತ್ಯಂತ ಶಿಸ್ತುಬದ್ಧ ತಿಂಗಳು' ಎಂದು ಕರೆಯುತ್ತಿದೆ.

ಈ ತಿಂಗಳಲ್ಲಿ ಪ್ರತಿ ವಾರದ ದಿನವೂ ಸರಿಯಾಗಿ ನಾಲ್ಕು ಬಾರಿ ಬರುತ್ತದೆ (4 ಭಾನುವಾರ, 4 ಸೋಮವಾರ... ಇತ್ಯಾದಿ). ಇಂತಹ ಅಚ್ಚುಕಟ್ಟಾದ ಜೋಡಣೆಯನ್ನು ನೋಡುವುದೇ ಒಂದು ರೀತಿ ಖುಷಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

11 ವರ್ಷಗಳ ನಂತರ ಮತ್ತೆ ಪರ್ಫೆಕ್ಟ್‌ ಫೆಬ್ರವರಿ

"ಪರ್ಫೆಕ್ಟ್ ಫೆಬ್ರವರಿ" ಕುರಿತಾದ ಈ ಕ್ರೇಜ್ ಇವತ್ತಿನದಲ್ಲ. 2015ರಲ್ಲಿ '@smartereveryday' ಎಂಬ ಬಳಕೆದಾರರು ಎಕ್ಸ್ (ಟ್ವಿಟರ್) ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದರು. "ಫೆಬ್ರವರಿ 1 ಭಾನುವಾರ ಬಂದಿರುವುದರಿಂದ ಈ ತಿಂಗಳು ಕ್ಯಾಲೆಂಡರ್‌ನಲ್ಲಿ ನಾಲ್ಕು ಸಾಲುಗಳಿಗೆ ಸರಿಯಾಗಿ ಹೊಂದಿಕೊಳ್ಳುತ್ತಿದೆ. ಇದು ಮತ್ತೆ ಸಂಭವಿಸುವುದು 2026ರಲ್ಲಿ ಮಾತ್ರ" ಎಂದು ಅವರು ಅಂದೇ ಬರೆದಿದ್ದರು. ಈಗ 11 ವರ್ಷಗಳ ನಂತರ ಅವರ ಮಾತು ನಿಜವಾಗಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌

ಈ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಈ ಬಗ್ಗೆ ಹತ್ತಾರು ಮೀಮ್ಸ್ ಮತ್ತು ಕಮೆಂಟ್‌ಗಳು ಹರಿದಾಡುತ್ತಿವೆ. ಒಬ್ಬ ಯೂಸರ್‌, 'ಫೆಬ್ರವರಿ ತಿಂಗಳು ಎಷ್ಟೊಂದು ಸಮತೋಲನವಾಗಿದೆ, ಜೀವನವೂ ಹೀಗೆ ಅಚ್ಚುಕಟ್ಟಾಗಿದ್ದರೆ ಎಷ್ಟು ಚೆನ್ನ!' ಎಂದು ಬರೆದಿದ್ದಾರೆ.

"ಫೆಬ್ರವರಿ 2026 ಒಂದು ಪರ್ಫೆಕ್ಟ್ ಆಯತದಂತಿದೆ. ನಾನು ನೋಡಿದ ಅತ್ಯಂತ ತೃಪ್ತಿದಾಯಕ ಕ್ಯಾಲೆಂಡರ್ ಇದು' ಎಂದು ಮತ್ತೊಬ್ಬರು ಬರೆದಿದ್ದಾರೆ. 'ಒಂದು ವೇಳೆ ಜನವರಿಯಲ್ಲಿ ನಾನು ಅಂದುಕೊಂಡ ಡಯಟ್ ಅಥವಾ ಕೆಲಸಗಳು ಫೇಲ್ ಆಗಿದ್ದರೆ ಪರವಾಗಿಲ್ಲ, ಹೊಸದಾಗಿ ಆರಂಭಿಸಲು ಫೆಬ್ರವರಿ ಅತ್ಯಂತ ಪರ್ಫೆಕ್ಟ್ ತಿಂಗಳು!' ಎಂದು ಕೆಲವರು ತಮಾಷೆ ಮಾಡಿದ್ದಾರೆ.

ಮುಂದಿನ ವರ್ಷ ಪರ್ಫೆಕ್ಟ್‌ ಫೆಬ್ರವರಿಯಂತೆ!

ಆದರೆ ಇಲ್ಲೂ ಒಂದು ಸಣ್ಣ ವಿವಾದವಿದೆ. ನಮ್ಮ ದೇಶದಲ್ಲಿ ಅಥವಾ ಅಮೇರಿಕಾದಂತಹ ದೇಶಗಳಲ್ಲಿ ವಾರವು ಭಾನುವಾರದಿಂದ ಆರಂಭವಾಗುತ್ತದೆ. ಆದರೆ ಬ್ರಿಟನ್ ಸೇರಿದಂತೆ ಸುಮಾರು 160 ದೇಶಗಳಲ್ಲಿ ವಾರವು ಸೋಮವಾರದಿಂದ ಆರಂಭವಾಗುತ್ತದೆ. ಹಾಗಾಗಿ, ಅವರಿಗೆ ಇದು ಅಚ್ಚುಕಟ್ಟಾಗಿ ಕಾಣಿಸುವುದಿಲ್ಲ. ಅವರ ಪ್ರಕಾರ "ಪರ್ಫೆಕ್ಟ್ ಫೆಬ್ರವರಿ" ಅಂದರೆ ಅದು ಸೋಮವಾರದಿಂದ ಆರಂಭವಾಗಬೇಕು. ಅಂತಹ ಘಟನೆ ಮುಂದಿನ ವರ್ಷ ಅಂದರೆ 2027ರಲ್ಲಿ ನಡೆಯಲಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Karna Serial: ಛೇ ಇದೇನಾಗ್ತಿದೆ ಇಲ್ಲಿ? ಕರ್ಣನ ಹೊಗಳಿ ಹೊಗಳಿ, ತನ್ನ ಹಳ್ಳ ತಾನೇ ತೋಡಿಕೊಳ್ತಾಳಾ ನಿಧಿ?
ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸ್ಟೋರ್ ಮಾಡುವುದು ಹೇಗೆ ? ಈ 5 ಟಿಪ್ಸ್ ಫಾಲೋ ಮಾಡಿ