
ಹಲವು ನಟಿಯರು ತಮ್ಮ ಕರಿಯರ್ ಉತ್ತುಂಗದಲ್ಲಿ ಎಚ್ಚರಿಕೆಯಿಂದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಫಿಟ್ನೆಸ್, ಬ್ಯೂಟಿ ಕುರಿತು ಹೆಚ್ಚಿನ ಗಮನಹರಿಸುತ್ತಾರೆ. ಉತ್ತಮ ಸಿನಿಮಗಳ ಮೂಲಕ ಮತ್ತಷ್ಟು ಯಶಸ್ಸು ಸಂಪಾದಿಸುತ್ತಾರೆ. ಆದರ ಯಶಸ್ಸಿನ ಅಲೆಯಲ್ಲೇ ದಿಢೀರ್ ಯೂ ಟರ್ನ್ ಪಡೆದ ನಟಿಯರೂ ಇದ್ದಾರೆ. ಹಲವರು ಯಶಸ್ಸಿನ ಉತ್ತುಂಗದಲ್ಲಿ ಮದುವೆಯಾಗಿ ಸಿನಿಮಾದಿಂದ ದೂರವಾಗಿದ್ದಾರೆ. ಆದರೆ ಇಲ್ಲೊಬ್ಬ ಬಾಲಿವುಡ್ ನಟಿ ಯಶಸ್ಸಿನ ಅಲೆಯಲ್ಲಿರುವಾಗಲೇ ಬೌದ್ಧ ಸನ್ಯಾಸಿಯಾಗಿ ದೀಕ್ಷೆ ಪೆಡದು ಅಚ್ಚರಿ ಮೂಡಿಸಿದ್ದರು. ಇದೀಗ ಈ ನಟಿ ಕಳೆದ ಹಲವು ವರ್ಷಗಳಿಂದ ಬೌದ್ಧ ಸನ್ಯಾಸಿಯಾಗಿ ಹಲವು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿದ್ದಾರೆ. ಈ ನಟಿ ಬೇರೆ ಯಾರು ಅಲ್ಲ, ಬರ್ಖಾ ಮದನ್.
ಸಿನಿಮಾ, ಬ್ಯೂಟಿ ಸ್ಪರ್ಧೆ, ಸಿನಿಮಾ ನಿರ್ಮಾಣ, ಟಿವಿ ಧಾರವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರೀತಿಗಳಿಸಿದ್ದ ಬರ್ಖಾ ಮದನ್, ಇದೀಗ ಬೌದ್ಧ ಸನ್ಯಾಸಿ. ಕಳೆದ ಒಂದು ದಶಕಗಿಂದ ಬರ್ಖಾ ಮದನ್ ಬಾಲಿವುಡ್, ಸಿನಿಮಾ, ಸಿರೀಯಲ್, ಬ್ಯೂಟಿ ಎಲ್ಲವನ್ನು ತೊರದು ಸನ್ಯಾಸಿಯಾಗಿದ್ದಾರೆ. ಟಿಬೆಟಿಯನ್ ಬೌದ್ಧ ಸನ್ಯಾಸಿಯಾಗಿ ದೀಕ್ಷೆ ಪಡೆಯುವಾಗ ತನ್ನ ಬರ್ಖಾ ಮದನ್ ಹೆಸರನ್ನು ಗ್ಯಾಲ್ಟೆನ್ ಸಮ್ಟೆನ್ ಎಂದು ಬದಲಿಸಿಕೊಂಡಿದ್ದಾರೆ.
ಪಂಜಾಬಿ ಮೂಲದ ಬರ್ಖಾ ಮದನ್, 1994ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಐಶ್ವರ್ಯ ರೈ, ಸುಶ್ಮಿತಾ ಸೇನ್ ಜೊತೆ ಬರ್ಖಾ ಮದನ್ ಕೂಡ ಹೆಜ್ಜೆ ಹಾಕಿದ್ದರು. ಬಳಿಕ ಟೂರಿಸಂ ಇಂಡಿಯಾ ಬ್ಯೂಟಿ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿಕೊಂಡ ಮದನ್, ನೇರವಾಗಿ ಬಾಲಿವುಡ್‌ನಲ್ಲಿ ಅವಕಾಶ ಪಡೆದಿದ್ದರು. ಅಕ್ಷಯ್ ಕುಮಾರ್ ಜೊತೆ 1996ರಲ್ಲಿ ಕಿಲಾಡಿಯೋಂಕ ಕಿಲಾಡಿ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಡಚ್ ಸಿನಿಮಾದಲ್ಲೂ ಕಾಣಿಸಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಕಲಾವಿದೆಯಾಗಿ ಹೊರಹೊಮ್ಮಿದ್ದರು.
2003ರಲ್ಲಿ ರಾಮ್ ಗೋಪಾಲ್ ವರ್ಮಾ ಅವರ ಭೂತ್ ಸಿನಿಮಾದಲ್ಲಿ ಪ್ರೇತವಾಗಿ ಕಾಣಿಸಿಕೊಂಡ ಬರ್ಕಾ ಮದನ್ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೇ ವೇಳೆ ಸಿನಿಮಾ ನಿರ್ಮಾಣದಲ್ಲಿ ಕೈಹಾಕಿದ್ದರು. ಇತ್ತ ಟಿವಿ ಧಾರವಾಹಿ , ಇತರ ಶೋ ಸೇರಿ 20ಕ್ಕೆ ಹೆಟ್ಟು ಟಿವಿ ಶೋಗಳಲ್ಲಿ ಸಕ್ರಿಯರಾಗಿದ್ದರು.
ಟಿವಿ ಶೋ, ಸಿನಿಮಾ, ನಿರ್ಮಾಣ ಸೇರಿದಂತ ಹಲವು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಬರ್ಖಾ ಮದನ್ 2012ರಲ್ಲಿ ಬೌದ್ಧ ಧರ್ಮದಲ್ಲಿ ಪ್ರಭಾವಿತರಾಗಿದ್ದರು. ದಲೈ ಲಾಮಾ ಫಾಲೋವರ್ ಆಗಿದ್ದ ಮದನ್, ಬೌದ್ಧ ಸನ್ಯಾಸಿಯಾಗಿ ದೀಕ್ಷೆ ಸ್ವೀಕರಿಸಿದ್ದರು. ಕಳೆದ 14 ವರ್ಷಗಳಿಂದ ಬೌದ್ಧ ಸನ್ಯಾಸಿಯಾಗಿ ಟಿಬೇಟಿಯನ್ ಭಾಗದಲ್ಲಿದ್ದಾರೆ. ಹಲವು ಭಾರಿ ಮದನ್ ತಾವು ತೆಗೆದುಕೊಂಡು ಅತ್ಯುತ್ತಮ ನಿರ್ಧಾರ ಇದು ಎಂದು ಹೇಳಿಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.