
ದೀಪಾವಳಿ ಸೇರಿದಂತೆ ಹಿಂದೂ ಹಬ್ಬಗಳಲ್ಲಿ ರಂಗೂಲಿ ಪ್ರಮುಖ.ಹಬ್ಬ ಆಚರಣೆಯಲ್ಲಿ ರಂಗೋಲಿ ಬಿಡಿಸುವುದು ಪ್ರಧಾನ. ಸಾಮಾನ್ಯವಾಗಿ ಅಕ್ಕಿ ಹಿಟ್ಟು, ಬಣ್ಣದ ಪುಡಿ, ಹೂವುಗಳಿಂದ ರಂಗೋಲಿ ಬಿಡಿಸಲಾಗುತ್ತದೆ. ಆದರೆ ಇಲ್ಲಿ ರಂಗೋಲಿ ಬಿಡಿಸಿರುವುದು ಅತೀ ದುಬಾರಿ ಚಿನ್ನ ಹಾಗೂ ವಜ್ರಗಳಿಂದ. ಬರೋಬ್ಬರಿ 6.5 ಕೆಜಿ ಚಿನ್ನ ಹಾಗೂ 380 ಕ್ಯಾರೆಟ್ ಚಿನ್ನ ಬಳಸಿ ಈ ರಂಗೋಲಿ ಬಿಡಿಸಲಾಗಿದೆ. ಇಡೀ ರಂಗೋಲಿಯಲ್ಲಿ ಬಣ್ಣದ ಪುಡಿ, ಅಕ್ಕಿ ಹಿಟ್ಟು ಸೇರಿದಂತೆ ಸಾಂಪ್ರದಾಯಿಕ ರಂಗೋಲಿಗೆ ಬಳಸುವ ಯಾವುದೇ ಸಾಮಾಗ್ರಿ ಬಳಸಿಲ್ಲ. ಇದು ಅತ್ಯಂತ ದುಬಾರಿ ರಂಗೋಲಿ.
ಐಷಾರಾಮಿ ಜೀವನಶೈಲಿಗೆ ಜನಪ್ರಿಯಗೊಂಡಿರುವ ದುಬೈನಲ್ಲಿ ದೀಪಾವಳಿಗೆ ಹಾಕಿದ ರಂಗೋಲಿ ಇದು. ದುಬೈನ ಸಿಟಿ ಸೆಂಟರ್ ಡೇರಾ ಮಾಲ್‌ನಲ್ಲಿ ದೀಪಾಳಿ ಹಬ್ಬಕ್ಕೆ ರಂಗೋಲಿ ಹಾಕಲಾಗಿದೆ. ಅತೀ ಹೆಚ್ಚು ಭಾರತೀಯರು ಇರುವ ದುಬೈ ಸೇರಿದಂತೆ ಅರಬ್ ರಾಷ್ಟ್ರದಲ್ಲಿ ಭಾರತೀಯರು ದೀಪಾವಳಿ ಆಚರಿಸುತ್ತಾರೆ. ದೀಪಾವಳಿ ಹಬ್ಬಕ್ಕೆ ಭಾರತೀಯರು ಸೇರಿದಂತೆ ಎಲ್ಲರನ್ನು ಶಾಪಿಂಗ್ ಮಾಲ್‌ಗೆ ಆಕರ್ಷಿಸಲು ಕೋಟಿ ಕೋಟಿ ರೂಪಾಯಿ ಮೌಲ್ಯದ ರಂಗೋಲಿ ಹಾಕಲಾಗಿದೆ.
ಸಿಟಿ ಸೆಂಟರ್ ದೇರಾ ಶಾಪಿಂಗ್ ಮಾಲ್‌ನಲ್ಲಿ ದಮಾಸ್ (ದುಬೈನ ಅತ್ಯಂತ ಜನಪ್ರಿಯ ಜ್ಯುವೆಲ್ಲರಿ ಶಾಪ್) ಹಾಗೂ ದುಬೈ ಫೆಸ್ಟಿವಲ್ ಹಾಗೂ ರಿಟೇಲ್ ಎಸ್ಟಾಬ್ಲಿಷ್‌ಮೆಂಟ್ ಜಂಟಿಯಾಗಿ ಈ ರಂಗೋಲಿ ಬಿಡಿಸಿದೆ . 213 ವಿಶೇಷ ಚಿನ್ನದ ಆಭರಬಣಗಳನ್ನು ಬಳಸಲಾಗಿದೆ. ಇದರ ತೂಕ ಒಟ್ಟು 6.5 ಕೆಜಿ. ಚಿನ್ನದ ಸರ, ಕುತ್ತಿಗೆ ಆಭರಣ, ಬಳೆ, ಪೆಂಡೆಂಟ್ ಸೇರಿದಂತೆ ಹಲವು ಚಿನ್ನದ ಆಭರಣಗಳನ್ನು ಈ ರಂಗೋಲಿಗೆ ಬಳಸಲಾಗಿದೆ. ದುಬಾರಿ ಬೆಲೆಯ 380 ಕ್ಯಾರೆಟ್ ವಜ್ರಗಳನ್ನು ಅಲಂಕಾರಕ್ಕಾಗಿ ಬಳಸಲಾಗಿದೆ.
ದುಬೈ ಸಿಟಿ ಸೆಂಟರ್ ದೇರಾ ಶಾಪಿಂಗ್ ಮಾಲ್ ಈ ಬಾರಿಯ ದೀಪಾವಳಿಗೆ ವಿಶೇಷ ರಂಗೋಲಿ ಬಿಡಿಸಲು ಮುಂದಾಗಿತ್ತು. ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ರಂಗೋಲಿ ಎಲ್ಲರನ್ನು ಆಕರ್ಷಿಸುವಂತಿರಬೇಕು, ಇದು ದುಬೈ ಐಷಾರಾಮಿತನದ ಕನ್ನಡಿಯಾಗಿರಬೇಕು. ಜೊತೆಗೆ ಅದ್ಧೂರಿತನಕ್ಕೂ ಸಾಕ್ಷಿಯಾಗಬೇಕು ಎಂದು ಸೂಚನೆ ನೀಡಲಾಗಿತ್ತು. ಹೀಗಾಗಿ ದೀಪಾವಳಿ ರಂಗೋಲಿಯನ್ನು ವಜ್ರಾಭರಣಗಳ ಮೂಲಕ ಬಿಡಿಸಲು ಪ್ಲಾನ್ ಮಾಡಲಾಯಿತು. 10 ಕುಶಲಕರ್ಮಿಗಳು ನಿರಂತರ 16 ಗಂಟೆಗಳ ಶ್ರಮಿಸಿ ರಂಗೋಲಿ ಬಿಡಿಸಲಾಗಿದೆ.
ಶಾಪಿಂಗ್ ಮಾಲ್‌ನ ಪ್ರವೇಶದ ಬಳಿ ಈ ರಂಗೋಲಿ ಬಿಡಿಸಲಾಗಿದೆ. ಅತೀ ಹೆಚ್ಚಿನ ಭದ್ರತೆ ಇರುವ ದುಬೈನಲ್ಲಿ ಈ ರಂಗೋಲಿ ಯಾವುದೇ ಅಡ್ಡಿ ಆತಂಕವಿಲ್ಲದೆ ಬಿಡಿಸಲಾಗಿದೆ. ಇದಕ್ಕಾಗಿ ವಿಶೇಷ ಭದ್ರತೆಯನ್ನು ನೀಡಿಲ್ಲ. ಶಾಪಿಂಗ್ ಮಾಲ್‌ನಲ್ಲಿರುವ ಸಿಸಿಟಿವಿಗಳೇ ಇದಕ್ಕೆ ಒದಗಿಸಿರುವ ಭದ್ರತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.