
ಗದ್ದೆ ಬದಿಯಲ್ಲಿ ರಾಶಿ ರಾಶಿ ಬಿಡೋ ತುಂಬೆ ಕುಯ್ಯುವುದೇ ಒಂದು ಸಂಭ್ರಮ. ಬಟ್ಟಲು ತುಂಬಾ, ಶಿವ ಲಿಂಗಕ್ಕೆ ಅರ್ಚನೆ ಮಾಡಿದರೆ ಸಿಗೋ ಖುಷಿ ಅಷ್ಟಿಷ್ಟಲ್ಲ. ಹಳ್ಳಿಗಳಲ್ಲಿ ಕಂಡ್ ಕಂಡಲ್ಲಿ ಇರುವ, ನಗರಗಳಲ್ಲಿ ಕಷ್ಟ ಪಟ್ಟು ಬೆಳೆಸಬೇಕಾದ ಈ ತುಂಬೆಯಲ್ಲಿ ಸಾಕಷ್ಟು ಔಷಧೀಯ ಗುಣಗಳೂ ಇವೆ. ಯಾವ ಔಷಧೀಯ ಗುಣಗಳಿವೆ ಇದರಲ್ಲಿ?
-ತುಂಬೆ ಎಲೆ ರಸಕ್ಕೆ ಕಾಳುಮೆಣಸಿನ ಪುಡಿ ಸೇರಿಸಿ ಸೇವಿಸಿದರೆ ಆಗಾಗ ಕಾಡೋ ಜ್ವರ ಅತ್ಯುತ್ತಮ ಔಷಧಿಯಾಗಬಲ್ಲದು.
- ಚೆನ್ನಾಗಿ ಒಣಗಿಸಿದ ತುಂಬೆ ಗಿಡವನ್ನು ಪುಡಿ ಮಾಡಿ, ಕಷಾಯ ಮಾಡಿಕೊಂಡು ದೇಹದ ಮೇಲಿನ ಗಾಯವನ್ನು ತೊಳೆದರೆ, ಆ್ಯಂಟಿ ಸೆಪ್ಟಿಕ್ ಕ್ರೀಮ್‌ನಂತೆ ಕಾರ್ಯ ನಿರ್ವಹಿಸುತ್ತದೆ.
-ತುಂಬೆ ಎಲೆ ಪೇಸ್ಟ್ ಮಾಡಿ, ಅಲರ್ಜಿಯಾದೆಡೆ ಹಚ್ಚಿದರೆ ಉತ್ತಮ ಔಷಧಿ.
-ಪಿರಿಯಡ್ಸ್‌ನಲ್ಲಿ ಅತೀವ ರಕ್ತ ಸ್ರಾವವಾಗುತ್ತಿದ್ದರೆ, ತುಂಬೆ ಎಲೆ ಪೇಸ್ಟ್‌ನೊಂದಿಗೆ ನಿಂಬೆರಸ, ಎಳ್ಳೆಣ್ಣೆ ಸೇರಿಸಿ, ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
-ಬೇಯಿಸಿದ ಬಿಳಿ ತುಂಬೆಯನ್ನು ಅನ್ನದೊಂದಿಗೆ ಸೇವಿಸಿದರೆ, ವೈಟ್ ಜಿಸ್ಚಾರ್ಜ್ ಸಮಸ್ಯೆಗೆ ಮದ್ದು.
-ಎಷ್ಟು ನೀರು, ಜ್ಯೂಸ್ ಕುಡಿದರೂ ದಾಹ ಕಡಿಮೆಯಾಗದೇ ಹೋದಲ್ಲಿ, ತುಂಬಿ ಹೂವಿನ ಕಷಾಯ ಮಾಡಿಕೊಂಡು, ಆಗಾಗ ಕುಡಿಯುತ್ತಿದ್ದರೆ ಸಮಸ್ಯೆ ನಿವಾರಣೆಯಾಗುತ್ತದೆ.
-ಜೇನು ತುಪ್ಪದೊಂದಿಗೆ ತುಂಬೆ ಹೂ ರಸ ಕುಡಿಸಿದರೆ, ಮಕ್ಕಳ ಹೊಟ್ಟೆ ಹುಳ ತೊಲಗುತ್ತದೆ.
-ತುಂಬೆಯ ಬೇರಿನೊಂದಿಗೆ ನೀರಲ್ಲಿ ಕುದಿಸಿದ ಕಷಾಯವನ್ನು ಸೈಂಧವ ಲವಣದೊಂದಿಗೆ ಕುಡಿದರೆ, ಜೀರ್ಣ ಶಕ್ತಿ ಹೆಚ್ಚುತ್ತದೆ.
-ತುಂಬೆ ಗಿಡವನ್ನು ಒಣಿಗಿಸಿ, ಅದರ ಪುಡಿ ಕಷಾಯವನ್ನು ಆಗಾಗ ಸೇವಿಸುತ್ತಿದ್ದರೆ, ರಕ್ತ ಶುದ್ಧಿಯಾಗುತ್ತದೆ.
ಮನೆ ಮದ್ದಿನ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.