
ಮಗುವಿನ ಜನನದ ಹಿಂದಿನ ಕಥೆ ಹೇಳಿಸ ನೆಟ್ಟಿಗರ ಮನ ಗೆದ್ದಿದ್ದಾರೆ ಈ ದಂಪತಿ. ಮಗುವಿನ ಹುಟ್ಟಿಗೆ ಇಷ್ಟು ಸಿರಿಂಜ್ ಹೇಗೆ ಕಾರಣವೆಂಬುದನ್ನೂ ವಿವರಿಸಿದ್ದು, ಎಂಥವರ ಕಣ್ಣಲ್ಲೂ ನೀರು ಬರುವಂತೆ ಮಾಡುತ್ತದೆ.
4 ವರ್ಷಗಳ ಪ್ರಯತ್ನಕ್ಕೆ ಜೀವನವಿಡೀ ಸಂತೋಷ ಪಡುವಂಥ ಸಂತಸದಲ್ಲಿದ್ದಾರೆ ಈ ದಂಪತಿ. ಆದರೆ, ಆ ಸಂತೋಷಕ್ಕಾಗಿ ಅವರ ಅನುಭವಿಸಿದ ನೋವು ಅಷ್ಟಿಷ್ಟಲ್ಲ. 4 ವರ್ಷಗಳಲ್ಲಿ 7 ಬಾರಿ ಗರ್ಭ ಕಟ್ಟಲು ಯತ್ನಿಸಿ, 3 ಬಾರಿ ಗರ್ಭಪಾತವಾಗಿದೆ ಈ ಮಗುವಿನ ತಾಯಿಗೆ. ನಂತರ 1616 ಸಿರಿಂಜ್ ಬಳಸಿದ ನಂತರ ಈ ಮಗು ಈ ಸುಂದರ ಪ್ರಪಂಚವನ್ನು ನೋಡಿದೆ. 'ವಿಟ್ರೊ ಫರ್ಟೆಲೈಸೇಷನ್' (ಐವಿಫ್) ಹಾಗೂ'ಐಯುಐ' ಚಿಕಿತ್ಸೆ ಮೂಲಕ ಈ ದಂಪತಿ, ಮುದ್ದಾದ ಮಗುವಿಗೆ ಜನ್ಮ ನೀಡಿದ್ದು, ಆ ಸಿರಿಂಜ್‌ಗಳನ್ನು ಮಗುವಿನ ಸುತ್ತ ಹೃದಯ ಆಕಾರದಲ್ಲಿ ಜೋಡಿಸಿ ಫೋಟೋ ತೆಗೆದಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದು, 55 ಸಾವಿರೇ ಶೇರ್ ಆಗಿದ್ದು, 70 ಸಾವಿರ ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.