ಸಕ್ಕರೆ ಕಾಯಿಲೆ ಬಗ್ಗೆ ಇದ್ದ ಭಯಾನಕ ಸುಳ್ಳು ಬಯಲು!

By Web DeskFirst Published Sep 9, 2018, 7:37 PM IST
Highlights

ಸಕ್ಕರೆ ಕಾಯಿಲೆ ಅಥವಾ ಮಧುಮೇಹದ ಹೆಸರು ಕೇಳಿದರೆ ಭಾರತೀಯರು ಬೆಚ್ಚಿ ಬೀಳುವ ಸ್ಥತಿ ನಿರ್ಮಾಣವಾಗಿ ಅನೇಕ ವರ್ಷಗಳೆ ಕಳೆದು ಹೋದವು. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಅತಿ ಹೆಚ್ಚಿನ ಪ್ರಮಾಣದಲ್ಲಿಯೂ ಇದೆ. ಸಿಹಿ ಪದಾರ್ಥ ಹೆಚ್ಚಿಗೆ ತಿಂದರೆ ಮಧುಮೇಹಕ್ಕೆ ತುತ್ತಾಗಬೇಕಾಗುತ್ತದೆ ಎಂಬುದು ಜನರಲ್ ಮಾತು. ಆದರೆ ಸಕ್ಕರೆ ಕಾಯಿಲೆಗೆ ಕಾರಣವಾಗುವ ಅಸಲಿ ಅಂಶಗಳೇ ಬೇರೆ.. ಯಾವುದು ಅಂತೀರಾ? 

ಸಕ್ಕರೆ ಕಾಯಿಲೆ ಬಗ್ಗೆ ಹಲವಾರು ಬಗೆಯಲ್ಲಿ ಬರೆಯಲಾಗಿದೆ. ಮಾನವನಿಗೆ ವಯಸ್ಸಾದಂತೆ ಪ್ರಕೃತಿ ನೀಡುವ ಕೊಡುಗೆಯಲ್ಲಿ ಇದು ಒಂದು!

1. ಸಿಹಿ ಹೆಚ್ಚು ತಿನ್ನುವುದರಿಂದ ಸಕ್ಕರೆ ಕಾಯಿಲೆ ಬರಲ್ಲ:  ಹೆಚ್ಚು ಹೆಚ್ಚು ಸಿಹಿ ತಿಂದರೆ ಸಕ್ಕರೆ ಕಾಯಿಲೆಗೆ ತುತ್ತಾಗಬೇಕಾಗುತ್ತದೆ ಎಂದು ಹಲವರು ಹೇಳುವುದನ್ನು ಕೇಳಿದ್ದೇವೆ. ಆದರೆ ಸತ್ಯವೇ ಬೇರೆ.. ಒಂದು ವೇಳೆ ವ್ಯಕ್ತಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರೆ ಆತ ಸಿಹಿ ತಿನ್ನುವುದನ್ನು ನಿಲ್ಲಿಸಬೇಕು ವಿನಾ ಕಾಯಿಲೆ ಬರುವ ಮುನ್ನವೇ ಅಲ್ಲ!

2. ಸಕ್ಕರೆ ಎಂದರೇನು? ಸಕ್ಕರೆ ಎಂದರೇ ನಾವು ನೇರವಾಗಿ ತಿನ್ನುವ ಸಕ್ಕರೆ ಎಂದು ಭಾವಿಸಬಾರದು. ಸಕ್ಕರೆ ಅಂಶ ಸಾಮಾನ್ಯವಾಗಿ ತರಕಾರಿ, ಹಣ್ಣುಗಳಲ್ಲಿ ಇರುತ್ತದೆ. ಟೀ, ಕಾಫಿ ಮತ್ತು ಕೆಲ ಪಾನೀಯಗಳಿಗೂ ಸಕ್ಕರೆಯನ್ನು ಸೇರಿಸಲಾಗಿರುತ್ತದೆ. ಇನ್ನು ಊಟ ಮತ್ತು ಕೇಕ್ ನಲ್ಲಿಯೀ ಸಕ್ಕರೆ ಪ್ರಮಾಣ ಇದ್ದೇ ಇರುತ್ತದೆ. 

ಮಧುಮೇಹಕ್ಕೆ ಮದ್ದು ಮಾವಿನ ಎಲೆ

3. ಮಧುಮೇಹ ಮತ್ತು ಸಕ್ಕರೆ: ಮಧುಮೇಹದಲ್ಲಿ ಟೈಪ್ 1 ಮತ್ತು ಟೈಪ್ 2 ಎಂದು ಎರಡು ವಿಭಾಗ ಮಾಡಿಕೊಳ್ಳಲಾಗಿದೆ.  ಇನ್ಸುಲಿನ್ ಉತ್ಪಾದಿಸುವ ಜೀವಕೋಶಗಳೂ ನಾಶವಾಗುತ್ತಿರುತ್ತವೆ ಇನ್ನೊಂದು ಬಗೆಯಲ್ಲಿ ಮೇದೋಜೀರಕ ಗ್ರಂಥಿ ಉತ್ಪಾದಿಸುವ ಇನ್ಸುಲಿನ್ ಅನ್ನು ದೇಹ ಬಳಸಿಕೊಳ್ಳುವುದರಲ್ಲಿ ವಿಫಲವಾಗುತ್ತದೆ. ಇಲ್ಲಿ ಒಂದು ಅಂಶ ಸ್ಪಷ್ಟ ಮಾಡಲೇಬೇಕು.. ಸಕ್ಕರೆ ತಿನ್ನುವುದಕ್ಕೂ ಇದಕ್ಕೂ ಯಾವ ಸಂಬಂಧ ಇಲ್ಲ.

4. ಟೈಪ್ ಟು ಡಯಾಬೀಟಿಸ್:  ಕೊಬ್ಬು ಅಥವಾ ಬೊಜ್ಜು ತುಂಬಿಕೊಳ್ಳುವುದು ಈ ಬಗೆಯ ಡಯಾಬಿಟಿಸ್ ಗೆ ಕಾರಣವಾಗುತ್ತದೆ. ಜಂಕ್ ಫುಡ್ ಸೇವನೆ ಪ್ರಮುಖ ಕಾರಣ ಆಗುತ್ತದೆ. ಜಂಕ್ ಫುಡ್ ನಲ್ಲಿ ಅಡಗಿರುವ ಸಕ್ಕರೆ ರೋಗಕ್ಕೆ ಕಾರಣವಾಗಬಹುದು. 

ಮೂಲವ್ಯಾಧಿಗೆ ಮದ್ದಾಗುವ ಮೂಲಂಗಿ ಮತ್ಯಾವುದಕ್ಕೆ ಮದ್ದು?

5. ಮಧುಮೇಹಿಗಳು ಸಕ್ಕರೆ ತಿನ್ನಬಹುದುದೆ? ಸಕ್ಕರೆ ಕಾಯಿಲೆ ಇದೆ ಎಂದ ಮಾತ್ ರಕ್ಕೆ ಸಕ್ಕರೆಯನ್ನು ಮಸಂಪೂರ್ಣವಾಗಿ ತ್ಯಜಿಸಬೇಕು ಎಂದೇನೂ ಇಲ್ಲ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಸರಿದೂಗಿಸಿಕೊಂಡು ಹೋಗಲು ತಕ್ಕಷ್ಟು ಪದಾರ್ಥ ಬೇಕಾಗುತ್ತದೆ. ವೖದ್ಯರ ಸಲಹೆ ಮೇರೆಗೆ ಯಾವ ಯಾವ ಪದಾರ್ಥ ತೆಗೆದುಕೊಳ್ಳಬಹುದು ಎಂದು ಸಲಹೆ ಪಡೆದುಕೊಳ್ಳಬಹುದು.

6. ಎಷ್ಟು ಸಕ್ಕರೆ ಸೇವಿಸಬೇಕು? ನಾರ್ಮಲ್ ಬಿಎಂಐ ಹೊಂದಿರುವ ವಯಸ್ಕ ವ್ಯಕ್ತಿ 6 ಟೀ ಸ್ಪೂನ್ ಅಂದರೆ 25 ಗ್ರಾಂ ಸಕ್ಕರೆ ಸೇವಿಸಬೇಕು ಎಂದು ವಿರ್ಶವ ಆರೋಗ್ಯ ಸಂಸ್ಥೆಯೇ ಹೇಳಿದೆ.

ಸ್ತನದ ಗಾತ್ರ ಹೆಚ್ಚಳಕ್ಕೆ ನಿಸರ್ಗದತ್ತ 8 ಟಿಪ್ಸ್

7. ಸಕ್ಕರೆ ಅಡಗಿರುವ ಇತರೆ ಮೂಲಗಳು: ಸಂಸ್ಕರಿಸಿದ ಆಹಾರ ಪದಾರ್ಥಗಳಿಂದಲೇ ಅತಿ ಹೆಚ್ಚಿನ ಸಕ್ಕರೆ ಅಂಶ ನಮ್ಮ ದೇಹ ಸೇರುತ್ತದೆ. ಒಂದು ಸೋಡಾದಲ್ಲಿ 10 ಟೀ ಸ್ಪೂನ್ ಸಕ್ಕರೆ ಅಂಶ ಇರಬಹುದು. ಕೆಚಪ್ ನಲ್ಲಿ ಸಕ್ಕರೆ ಅಂಶ ಇರುತ್ತದೆ. ಜ್ಯೂಸ್, ಊಟ, ಜಂಕ್ ಫುಡ್ ಗಳಲ್ಲಿಯೂ ಸಕ್ಕರೆ ಅಂಶ ಅಡಗಿದ್ದು ಮಿತಿ ಮೀರದಂತೆ ನೋಡಿಕೊಳ್ಳಬೇಕಾಗುತ್ತದೆ.

8. ಸಲಹೆ: ಸಂಸ್ಕರಿಸಿದ ಆಹಾರ ಮತ್ತು ಪಾನೀಯಗಳನ್ನು ಬಳಕೆ ಮಾಡಿಕೊಳ್ಳುವುದರ ಮೇಲೆ ನಿಯಂತ್ರಣ ಹೇರಿಕೊಳ್ಳಬೇಕು. ಪೌಷ್ಟಿಕಾಂಶಕ್ಕೆ ಕೊರತೆಯಾಗದಂತಹ ರೀತಿಯಲ್ಲಿ ಆಹಾರ ಸೇವನೆ ಮಾಡುವ ಜಾಣ್ಮೆ ನಮ್ಮ ಬಳಿಯಲ್ಲಿಯೇ ಇದೆ.

click me!