ಫಾರಿನ್ ಭಾಷೆ ಸಲೀಸಾಗಿ ಮಾತಾಡ್ಬೇಕಾ? ಹಾಗಾದ್ರೆ ಕುಡಿಯಿರಿ!

By Web DeskFirst Published 9, Sep 2018, 11:45 AM IST
Highlights

ಜನರು ಕಡಿಮೆ ಪ್ರಮಾಣದ ಮದ್ಯ ಕುಡಿದಾಗ ಅವರಿಗೆ ತಿಳಿಯದಂತೆ ಸ್ಪಷ್ಟವಾಗಿ ಮಾತನಾಡಬಲ್ಲರು ಎನ್ನಲಾಗಿದೆ. ಕುಡಿದಾಗ ವಿದೇಶಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಾರೆ ಎಂದು ವರದಿಯೊಂದು ಹೇಳಿದೆ.  

ಬೆಂಗಳೂರು (ಸೆ. 09): ಸಾಮಾನ್ಯವಾಗಿ ಯಾವುದೇ ವಿದೇಶಿ ಭಾಷೆಯನ್ನು  ಉಚ್ಚರಿಸುವುದು ಸ್ವಲ್ಪ ಕಷ್ಟಕರ. ಆದರೆ ಮದ್ಯ/ ಆಲ್ಕೋಹಾಲ್ ಕುಡಿದು ಪ್ರಯತ್ನಿಸಿದರೆ ಸ್ಪಷ್ಟವಾಗಿ ಹಾಗೂ ನಿರರ್ಗಳವಾಗಿ ಮಾತನಾಡಬಹುದು ಎಂದು ಸಮೀಕ್ಷೆಯೊಂದು ಹೇಳಿದೆ.

ಒಂದು ಲೋಟ ಬಿಯರ್ ಅಥವಾ ವೈನ್ ಕುಡಿದು ವಿದೇಶಿ ಭಾಷೆ ಮಾತನಾಡಿದಲ್ಲಿ ಹೆದರಿಕೆ ಅಥವಾ ಭಯ ಉಂಟಾಗದೆ ಸರಾಗವಾಗಿ ಮಾತನಾಡಬಹುದು ಎಂದಿದೆ ಸಮೀಕ್ಷೆ. ಬ್ರಿಟಿಷ್ ಮತ್ತು ಡಚ್ ಸಂಶೋಧನಾಕಾರರು ಮಾಡಿದ ಪ್ರಯೋಗ ‘ಜರ್ನಲ್ ಆಫ್‌ಸೈಕೋಫಾ ರ್ಮಾಕೊಲಜಿ’ಯಲ್ಲಿ ಪ್ರಕಟವಾಗಿದ್ದು, ಅದರಲ್ಲಿ ಜನರು ಕಡಿಮೆ ಪ್ರಮಾಣದ ಮದ್ಯ ಕುಡಿದಾಗ ಅವರಿಗೆ ತಿಳಿಯದಂತೆ ಸ್ಪಷ್ಟವಾಗಿ ಮಾತನಾಡಬಲ್ಲರು ಎಂದಿದೆ.

ಜರ್ಮನಿ ಮೂಲದ 50 ಜನರನ್ನು ನೆದರ್‌ಲ್ಯಾಂಡ್‌ನಲ್ಲಿ ಸಮೀಕ್ಷೆಗೆ ಒಳಪಡಿಸಲಾಗಿತ್ತು. ತರಗತಿಯಲ್ಲಿ ಅವರಿಗೆ ಡಚ್ ಭಾಷೆಯಲ್ಲಿ ಪಾಠ ಮಾಡಲಾಗುತ್ತಿತ್ತು. ಅಲ್ಲಿ ಪರೀಕ್ಷೆ ವೇಳೆ ಪ್ರತಿಯೊಬ್ಬರಿಗೂ 2 ನಿಮಿಷ ಸಂದರ್ಶನ ಮಾಡಲಾಗುತ್ತಿತ್ತು. ಆ ಸಂದರ್ಶನಕ್ಕೂ ಮೊದಲು ಕೆಲವರು ನೀರು ಕುಡಿದರೆ, ಅರ್ಧಕ್ಕೂ ಹೆಚ್ಚು ಜನರು ಮದ್ಯ ಕುಡಿಯುತ್ತಿದ್ದರು.

ಆ ವೇಳೆ ಅಲ್ಕೋಹಾಲ್ ಸೇವಿಸಿ ಸಂದರ್ಶನಕ್ಕೆ ತೆರಳಿದವರ ಜರ್ಮನಿ ಮೂಲದವರು ಡಚ್ ಭಾಷೆಯನ್ನು ಹೆಚ್ಚು ಸ್ಪಷ್ಟವಾಗಿ ಮಾತನಾಡಿದ್ದರು.ಆದರೆ ಹೆಚ್ಚು ಪ್ರಮಾಣದ ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರಕ ಮಾತ್ರವಲ್ಲದೆ, ಅತಿ ಯಾದ ಆತ್ಮವಿಶ್ವಾಸದಿಂದಾಗಿ ಎಡವಟ್ಟಾಗುವ ಸಾಧ್ಯತೆಯೇ ಹೆಚ್ಚು.  

-ಸಮೀಕ್ಷಾ ವರದಿ

Last Updated 9, Sep 2018, 10:27 PM IST