
ಪ್ರೀತಿ ಎನ್ನೋದು ಒಂದು ಸುಂದರ ಅನುಭವ. ಅದು ಪ್ರತಿಯೊಬ್ಬರ ಜೀವನದಲ್ಲಿ ಆಗುವಂತಹದ್ದು. ಅದರಲ್ಲಿದ್ದಾಗ ಅದರ ಮದುರ ಅನುಭೂತಿಗಳು ಸುಂದರ ಎನಿಸುತ್ತವೆ. ಆದರೆ ಅನೇಕ ಕಾರಣಗಳಿಂದ ಪ್ರೀತಿಯಲ್ಲಿ ಬಿರುಕು ಮೂಡಿದ್ರೆ ಆಗುವ ನೋವು ಸಹಿಸಲು ಕಷ್ಟಸಾಧ್ಯವಾಗಿರುತ್ತೆ. ಇಂತಹ ಸಂದರ್ಭದಲ್ಲಿ ಎದುರಿಸುವ ನೋವು ನರಕ ಯಾತನೆಯಾಗಿರುತ್ತದೆ. ಆದ್ರೆ ಹೃದಯ ಛಿದ್ರ ಮಾಡುವ ಬ್ರೇಕ್ ಅಪ್ ಕೂಡ ಒಳ್ಳೆಯದಂತೆ.
*ಎಚ್ಚರಿಕೆಯ ಕರೆ ಗಂಟೆ : ಇದು ಮತ್ತೊಮ್ಮೆ ಇಂತಹ ಮೋಸದ ಜಾಲಕ್ಕೆ ಬೀಳದೇ ಎಚ್ಚರಿಕೆಯಿಂದ ಮುಂದುವರಿಯಲು ಪಾಠವಾಗುತ್ತದೆ
*ಹಲವು ಪಾಠಗಳನ್ನು ಬ್ರೇಕ್ ಅಪ್ ಜೀವನದ ಬಗ್ಗೆ ಕಲಿಸುತ್ತದೆ
*ನೀವು ಒಂಟಿಯಾಗಿ ಖುಷಿ ಪಡೋದನ್ನು ಕಲಿಯಲು ಇದೊಂದು ಅವಕಾಶ
*ತಾಳ್ಮೆ ಪರೀಕ್ಷೆಗೆ ಒಂದು ಉತ್ತಮ ಅವಕಾಶವಾಗುತ್ತದೆ
*ಮುಂದಿನ ಸಂಬಂಧದ ಬಗ್ಗೆ ತಯಾರಿಗೆ ಸಮಯಾವಕಾಶ ಲಭ್ಯವಾಗುತ್ತದೆ.