ಮದುವೆ ಆದ್ಮೆಲೇ ಜೀವನವೇ ಮುಗಿದು ಹೋಯ್ತಾ? ಮಹಿಳೆಯರೇ ನೀವು ಬಾಸ್ ಆಗೋದ್ಯಾವಾಗ?

By Sushma Hegde  |  First Published Aug 19, 2023, 11:48 AM IST

ಅನೇಕ ಯುವತಿಯರು ತುಂಬಾ ಜಾಣೆಯರು ಇರ್ತಾರೆ. ಹಾಗೂ ಜೀವನದಲ್ಲಿ ತುಂಬಾ ಕನಸು ಕಂಡಿರ್ತಾರೆ. ಏನೇನೋ ಸಾಧನೆ ಮಾಡುವ ಹಂಬಲ ಹೊಂದಿರುತ್ತಾರೆ. ಆದರೆ ಮದುವೆ ಅನ್ನೋದು ಎಲ್ಲದಕ್ಕೂ ಫುಲ್ ಸ್ಟಾಪ್ ಇಡುತ್ತೆ. ಈಗ್ಲೂ ಕಾಲ ಮಿಂಚಿಲ್ಲ, ಯುವತಿಯರೇ ನೀವು ಕೆಲವು ಟಿಪ್ಸ್ ಫಾಲೋ ಮಾಡಿದ್ರೇ ನಿಮ್ಮ ಗುರಿಯತ್ತ ಸಾಗಬಹುದು.


ಅನೇಕ ಯುವತಿಯರು ತುಂಬಾ ಜಾಣೆಯರು ಇರ್ತಾರೆ. ಹಾಗೂ ಜೀವನದಲ್ಲಿ ತುಂಬಾ ಕನಸು ಕಂಡಿರ್ತಾರೆ. ಏನೇನೋ ಸಾಧನೆ ಮಾಡುವ ಹಂಬಲ ಹೊಂದಿರುತ್ತಾರೆ. ಆದರೆ ಮದುವೆ ಅನ್ನೋದು ಎಲ್ಲದಕ್ಕೂ ಫುಲ್ ಸ್ಟಾಪ್ ಇಡುತ್ತೆ. ಈಗ್ಲೂ ಕಾಲ ಮಿಂಚಿಲ್ಲ, ಯುವತಿಯರೇ ನೀವು ಕೆಲವು ಟಿಪ್ಸ್ ಫಾಲೋ ಮಾಡಿದ್ರೇ ನಿಮ್ಮ ಗುರಿಯತ್ತ ಸಾಗಬಹುದು.

ಒಬ್ಬ ಯುವತಿಗೆ ಮದುವೆಯ ನಂತರ ಅನೇಕ ಸವಾಲಿನ ಕೆಲಸಗಳು ಶುರುವಾಗುತ್ತವೆ. ಮನೆ, ಗಂಡ ಹಾಗೂ ಮಗುವನ್ನು ಮತ್ತು ಕೆಲಸದ ಜವಾಬ್ದಾರಿಗಳನ್ನು ಸಮಾನವಾಗಿ ನಿಭಾಯಿಸುವುದು. ಕಷ್ಟ ಆಗುತ್ತೆ. ಇದರಿಂದ ಅವರು ತಮ್ಮ ಗುರಿಗಳನ್ನು ಮರೆಯುತ್ತಾರೆ. ಕೆಲಸ ಮಾಡುವ ಮಹಿಳೆಯರು ಎಲ್ಲಾ ಕೆಲಸಗಳನ್ನು ಸಂಘಟಿತ ರೀತಿಯಲ್ಲಿ ಮಾಡಬೇಕು ಹಾಗೂ ತಮ್ಮ ಜವಾಬ್ದಾರಿಗಳನ್ನು ಡಿವೈಡ್ ಮಾಡಬೇಕು. ಇದರಿಂದ ಎಲ್ಲಾ ಕೆಲಸಗಳನ್ನು ಪೂರ್ಣ ಆಗುತ್ತವೆ. ಈ ಟಿಪ್ಸ್ ಫಾಲೋ ಮಾಡಿದ್ರೆ ನೀವು ಎಲ್ಲರಂರೆ ಆಫೀಸ್‌ಗೆ ಕೆಲಸಕ್ಕೆ ಹೋಗಬಹುದು. ಅಥವಾ ನಿಮ್ಮ ಗುರಿಯ ಕಡೆ ಗಮನ ಕೊಡಬಹುದು.

Tap to resize

Latest Videos

ಶಾರ್ಟ್ ಕಟ್‍ಗಳು ಇರಲಿ

ಜೀವನದಲ್ಲಿ ಕೆಲವು ಶಾರ್ಟ್ ಕಟ್‍ಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಉದಾಹರಣೆಗೆ ಬೆಳಗಿನ ತಿಂಡಿಗಾಗಿ ರಾತ್ರಿ ತರಕಾರಿಗಳನ್ನು ಕಟ್ ಮಾಡಿ ಇಟ್ಟುಕೊಳ್ಳಿ, ಇದರಿಂದ ಬೆಳಗಿನ ನಿಮ್ಮ ಕೆಲಸ ಕಮ್ಮಿ ಆಗಲಿದೆ. ಆಗ ಒತ್ತಡವು ಕಮ್ಮಿಯಾಗಿ ನಿಮ್ಮ ಇತರ ಕೆಲಸದ ಕಡೆ ಗಮನ ಕೊಡಬಹುದು. 

ಮರುದಿನದ ಯೋಜನೆ

ದಿವವೂ ರಾತ್ರಿ ಮಲಗುವ ಮುನ್ನ ಮರುದಿನದ ಯೋಜನೆಗಳನ್ನು ಹಾಕಿಕೊಳ್ಳಬೇಕು. ನಾಳೆ ಮನೆಯಲ್ಲಿ ಕೆಲಸ ಹೇಗೆ ಬೇಗ ಮುಗಿಸಬೇಕು. ಹಾಗೂ ನಾಳೆ ನನ್ನ ವೃತ್ತಿಯ ಕಡೆ ಹೇಗೆ ಗಮನ ಕೊಡಬೇಕು ಎಂಬ ಬಗ್ಗೆ ಪ್ಲಾನ್ ಮಾಡಬೇಕು. ಇದರಿಂದ ಕೆಲಸಗಳನ್ನು ಒತ್ತಡವಿಲ್ಲದೆ ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬಹುದು. ನೀವೂ ವಿಶ್ರಾಂತಿ ಪಡೆಯಬಹುದು. ಆಫೀಸ್‌ನಲ್ಲಿ ಕೆಲಸದಿಂದ ಕೆಲವು ನಿಮಿಷ ವಿರಾಮ ತೆಗೆದುಕೊಳ್ಳುವುದು ಉತ್ತಮ. ಮುಖ್ಯ. ಈ ವೇಳೆ ಹತ್ತಿರವಿರುವ ಜನರೊಂದಿಗೆ ಮಾತನಾಡಿ, ಒಂದು ಕಪ್ ಕಾಫಿ ಕುಡಿಯಿರಿ. ಇದು ಒತ್ತಡ ಕಮ್ಮಿ ಮಾಡುತ್ತದೆ

ಬೆಕ್ಕು ಅಪಶಕುನ ಅಲ್ಲ, ಅದು ಮನೆಗೆ ಲಕ್; ಎಷ್ಟೆಲ್ಲಾ ಸಮಸ್ಯೆ ದೂರವಾಗುತ್ತೆ ಗೊತ್ತಾ..?

 

ಸಮಯ ಹೊಂದಾಣಿಕೆ

ಇನ್ನು ಕೆಲಸ ಮಾಡುವ ತಾಯಂದಿರಿಗೆ ಟೈಂ ಮ್ಯಾನೇಜ್ ಮಾಡುವುದು ತುಂಬಾ ಮುಖ್ಯ. ಅಮ್ಮಂದಿರು ತಮ್ಮ ದಿನದ ಸರಿಯಾದ ವೇಳಾಪಟ್ಟಿಯನ್ನು ಮಾಡಿಕೊಳ್ಳಬೇಕು. ಇದರಿಂದ ಎಲ್ಲವೂ ಸಮಯಕ್ಕೆ ಅನುಗುಣವಾಗಿ ಆಗುತ್ತದೆ. ಜೀವನದಲ್ಲಿ ಹೊಂದಾಣಿಕೆ ಇದ್ದರೆ ಎಲ್ಲವೂ ಸಾಧ್ಯ. ನೀವು ಮನೆ ಹಾಗೂ ಮಕ್ಕಳ ನಡುವೆಯೂ ಕೆಲಸ ಮಾಡಬಹುದು. ಅಥವಾ ನಿಮ್ಮ ಗುರಿಯ ಕಡೆ ಗಮನ ಕೊಡಬಹುದು.

click me!