
ಸೂಪರ್ ಫುಡ್ ಮೊಟ್ಟೆ ಹೊಟ್ಟೆಗೇಕೆ ಬೇಕು?
ಮೊಟ್ಟೆ ಆರೋಗ್ಯಕಾರಿ ಎಂಬುವುದು ಎಲ್ಲರಿಗೂ ಗೊತ್ತು. ಇದರಲ್ಲಿ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಲಭ್ಯ. ಕೊಲೆಸ್ಟರಾಲ್ ಅಧಿಕವಿದ್ದರೂ, ಇದು ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಅಷ್ಟಲ್ಲದೇ ಇದರಿಂದೇನು ಲಾಭವಿದೆ ಗೊತ್ತಾ?
- ದಿನಕ್ಕೊಂದು ಮೊಟ್ಟೆ ತಿನ್ನುವುದರಿಂದ ವ್ಯಕ್ತಿಗೆ ಅಗತ್ಯವಾದ ಶೇ.18ರಷ್ಟು ಪೋಷಕಾಂಶಗಳು ಸಿಗುತ್ತವೆ. ಇದು ಹೃದಯದ ಆರೋಗ್ಯವನ್ನೂ ಹೆಚ್ಚಿಸುತ್ತದೆ.
- ರಕ್ತ ಸಂಚಾರ ಸುಗಮವಾಗುವಂತೆ ಮಾಡಬಲ್ಲ ಮೊಟ್ಟೆ ತಿಂದರೆ ಪಾರ್ಶ್ವವಾಯುವನ್ನೂ ಶೇ.26ರಷ್ಟು ತಡೆಯುತ್ತದೆ. ಅಲ್ಲದೇ ಶೇ.10 ರಕ್ತ ಹೆಪ್ಪುಗಟ್ಟುವಿಕೆಯನ್ನೂ ನಿಯಂತ್ರಿಸಬಲ್ಲದು.
- ವಿಟಮಿನ್, ಮಿನರಲ್ಸ್, ಫಾಸ್ಪೋಲಿಪಿಡ್ಸ್ ಮತ್ತು ಕ್ಯಾರೊಟಿನಾ ಅಂಶಗಳು ಮೊಟ್ಟೆಯಲ್ಲಿದ್ದು, ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ.
- ಮಧುಮೇಹ ಇರೋರು ಸಿಕ್ಕಾಪಟ್ಟೆ ಪಥ್ಯ ಮಾಡಬೇಕು. ಇದರಿಂದ ಅಗತ್ಯ ಪೋಷಕಾಂಶಗಳು ಅವರ ದೇಹಕ್ಕೆ ಹೋಗುವುದಿಲ್ಲ. ಆದರೆ, ಮೊಟ್ಟೆ ಈ ಸಮಸ್ಯೆಯನ್ನು ಹೋಗಲಾಡಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.