
ಇತ್ತೀಚೆಗೆ ಎಐ ಬಳಕೆ ಹೆಚ್ಚಾದ ಬಳಿಕ ಈಗ ಪ್ರತಿಯೊಂದು ಕ್ಷೇತ್ರದಲ್ಲೂ ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪನಿಗಳಿಂದ ಹಿಡಿದು ಸಣ್ಣಪುಟ್ಟ ಬ್ಯುಸಿನೆಸ್ ನಲ್ಲಿ ಎಐ ಆಕ್ರಮಿಸಿದೆ. ಹೀಗಾಗಿ ಒಂದು ಕಾಲದಲ್ಲಿ ತಂಬಾ ಡಿಮ್ಯಾಂಡ್ ಇದ್ದ ಡೇಟಾ ಎಂಟ್ರಿ, ಎಕ್ಸೆಲ್, ಕೋಡಿಂಗ್, ಕಾಂಟೆಂಟ್ ರೈಟಿಂಗ್, ಕಸ್ಟಮರ್ ಸಪೋರ್ಟ್ನಂತಹ ಹಲವು ಕೆಲಸಗಳಲ್ಲಿ ಎಐ ಅಕ್ರಮಿಸಿ ಆಗಿದೆ. ಅಂದರೆ ಅಲ್ಲಿ ಕೆಲಸ ಮಾಡುತ್ತಿರುವವರೆಲ್ಲ ಈಗ ಅವರಿಗೆ ಕೆಲಸವೇ ಇಲ್ಲದಂತಾಗಿದೆ. ನೀವು ಭವಿಷ್ಯದಲ್ಲಿ ನಿಮ್ಮ ಉದ್ಯೋಗ ಕಳೆದುಕೊಳ್ಳಬಾರದು ಎಂದರೆ ಈ ಕೆಳಗಿನ ಸ್ಕಿಲ್ ಕಲಿತುಕೊಳ್ಳುವುದು ಅವಶ್ಯವಾಗಿದೆ.
ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಪ್ರತಿ ಉದ್ಯೋಗಿಗೂ ಈ ಒಂದು ಭಯ ಇದೆ. ಭವಿಷ್ಯದಲ್ಲಿ ನಮ್ಮ ಉದ್ಯೋಗವನ್ನೂ ಎಐ ಕಸಿದುಕೂಳ್ಳಲಿದೆಯೇ? ಎಂಬ ಆತಂಕದಲ್ಲೇ ಉದ್ಯೋಗಿಗಳು ಕೆಲಸ ಮಾಡುವಂತಾಗಿದೆ ಏಕೆಂದರೆ ಇಂದು ಎಐ ಯಾವ ವೇಗದಲ್ಲಿ ಎಲ್ಲ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿದೆ ಎಂದರೆ ದಿನ ಬೆಳಗ್ಗೆ ಎದ್ದರೂ ಯಾವುದಾದರೂ ಎಐ ಸುದ್ದಿ ನಮಗೆ ಬಿದ್ದೇಬಿಳುತ್ತಿದೆ. ಸಣ್ಣಪುಟ್ಟ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದವರು, ಆಸ್ಪತ್ರೆಗಳಲ್ಲಿ ಡಾಟಾ ಎಂಟ್ರಿ, ಟೈಪಿಂಗ್, ಬರೆವಣಿಗೆ, ಫೋಟೋಗ್ರಫಿ, ಸಾಫ್ಟ್ವೇರ್ ಇಂಜಿನಿಯರಿಂಗ್, ಕೋಡಿಂಗ್.. ಈಗ ಎಲ್ಲದರಲ್ಲೂ ಎಐ ಬಂದು ಕುಳಿತಿದೆ. ನೀವು ಮಾಡಬೇಕಾದ ಕೆಲಸ ಎಐ ಕಬಳಿಸಿದೆ.
ಈಗ ಇದನ್ನೇ ನಂಬಿ ಬದುಕುತ್ತಿದ್ದ ಉದ್ಯೋಗಿಗಳ ಪಾಡೇನು? ಭವಿಷ್ಯದಲ್ಲಿ ಯಾವ ಕೆಲಸ ಮಾಡಿ ಬದುಕಬೇಕು? ಹೀಗೆಲ್ಲ ಯೋಚನೆಗಳು ಉದ್ಯೋಗಿಗಳನ್ನು ಕಾಡುತ್ತಿದೆ. ಆದರೆ ಮನುಷ್ಯನಿಗೆ ಸ್ಕಿಲ್, ಕಲಿಯುವ ಹಂಬಲವೊಂದಿದ್ದರೆ ಯಾವ ಎಐ ಬಂದರೂ ಉದ್ಯೋಗ ಕಸಿಯಲಾಗದು. ಎಐ ನಮ್ಮ ಉದ್ಯೋಗ ಕಸಿಯಲಿದೆಯೇ ಎಂದು ಭಯ, ಆತಂಕ ಪಡುವ ಬದಲು ನಾವು ಸ್ವಲ್ಪ ಬುದ್ಧಿವಂತಿಕೆಯಿಂದ ಯೋಚಿಸಿದರೆ ಎಐ ನಮ್ಮ ಶತ್ರುವಲ್ಲ ಬದಲಾಗಿ ಅತ್ಯುತ್ತಮ ಸಹಾಯಕನನ್ನಾಗಿಸಿಕೊಳ್ಳಬಹುದು. ಅಂದರೆ ನಿಮ್ಮ ಉದ್ಯೋಗ, ಭವಿಷ್ಯ ಶಾಶ್ವತವಾಗಿ ಸುರಕ್ಷಿತವಾಗಿರಬೇಕೆಂದರೆ ಯಂತ್ರಗಳು ಎಂದಿಗೂ ಸ್ವಂತವಾಗಿ ಕಲಿಯಲಾಗದ ಅಥವಾ ಮಾಡಲು ಸಾಧ್ಯವಾಗದ ಸ್ಕಿಲ್ಗಳನ್ನ ನಾವು ಕಲಿತುಕೊಳ್ಳಬೇಕಾಗುತ್ತದೆ. ಅಂತಹ ಕೆಲಸಗಳು ಯಾವವು? ಹೇಗೆ ಕಲಿಯಬಹುದು ಎಂಬ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.
ಎಐನಿಂದಾಗಿ ನಿಮ್ಮ ಉದ್ಯೋಗ ಕಳೆದುಹೋಗುತ್ತದೆ ಎಂಬ ಭಯ ಬೇಡ. ಅದರ ಬದಲಾಗಿ ನಿಮ್ಮ ಕೌಶಲ್ಯ ಅಥವಾ ಹೊಸ ಸ್ಕಿಲ್ ಕಲಿಯುವ ಮೂಲಕ ಅಪ್ಗ್ರೇಡ್ ಆಗಿ. ಈ ಸ್ಕಿಲ್ ಕಲಿಯುವುದರಿಂದ ಎಐ ನಿಮ್ಮ ಮುಟ್ಟಲು ಸಾಧ್ಯವಿಲ್ಲ.
ಪ್ರಾಂಪ್ಟ್ ಎಂಜಿನಿಯರಿಂಗ್, ಎಐ ಅನ್ನು ಸರಿಯಾದ ರೀತಿ ಬಳಸುವ ಕಲೆಯನ್ನ ಕಲಿಯಿರಿ. ಕಂಪ್ಯೂಟರ್ ಸೈನ್ಸ್ನಲ್ಲಿ ಒಂದು ಜನಪ್ರಿಯ ಮಾತಿದೆ. ಅದೇನೆಂದರೆ 'ಎಐ ನಿಮ್ಮ ಕೆಲಸವನ್ನು ಕಸಿದುಕೊಳ್ಳುವುದಿಲ್ಲ, ಎಐ ಚಲಾಯಿಸಬಲ್ಲ ವ್ಯಕ್ತಿಯನ್ನು ಅದು ತೆಗೆದುಕೊಳ್ಳುತ್ತದೆ! ಅಂದರೆ ನಿಮಗೆ ಎಐ ಸರಿಯದ ಬಳಕೆ ಗೊತ್ತಿದ್ದರೆ ಎಐ ನಿಮ್ಮನ್ನ ಇನ್ನಷ್ಟು ದೊಡ್ಡ ಉದ್ಯೋಗ, ಜವಾಬ್ದಾರಿ, ಗಳಿಕೆಗೆ ಕಾರಣವಾಗುತ್ತದೆ. ನೀವು ಕಾಂಟೆಂಟ್ ರೈಟರ್ ಆಗಿದ್ದರೆ, ಡಿಸೈನರ್, ಡೇಟಾ ಅನಾಲಿಸ್ಟ್ ಆಗಿದ್ದರೆ ಎಐ ಗೆ ಹೆದರುವ ಬದಲು ಅವುಗಳ ಸಾಮೀಪ್ಯ ಬೆಳೆಸಿಕೊಳ್ಳಿ. ಅಂದರೆ ChatGPT, Gemini ಇತರೆ ಎಐ ಟೂಲ್ಗಳನ್ನೇ ಬಳಸಿಕೊಂಡು ಸರಿಯಾದ ಔಟ್ಪುಟ್ ಹೊರತೆಗೆಯುವ ಕಲೆ ಕರಗತ ಮಾಡಿಕೊಳ್ಳಿ. ಎಐ ಸಹಾಯದಿಂದ ಹತ್ತೇ ನಿಮಿಷದಲ್ಲಿ ಒಂದು ಗಂಟೆಯ ಮಾಡಬೇಕಿದ್ದ ಕೆಲಸ ಮುಗಿಸಿದಾಗ ಕಂಪನಿಯು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ.
ಯಂತ್ರಗಳು ನಾವು ಕೊಡುವ ದತ್ತಾಂಶದ ಮೂಲಕ ಕೆಲಸ ಮಾಡುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ ತಕ್ಷಣ ಏನು ಮಾಡಬೇಕು ಎಂಬುದು ಅವುಗಳಿಗೆ ಸ್ವಂತವವಾಗಿ ನಿರ್ಧರಿಸಲು ಸಾಧ್ಯವಿಲ್ಲ.
ಯಂತ್ರಗಳು ದತ್ತಾಂಶದ ಮೂಲಕ ಕಲಿಸಿದಂತೆ ಮಾಡುತ್ತವೆ. ವಿಚಿತ್ರ ಅಥವಾ ಹೊಸ ಬಿಕ್ಕಟ್ಟಿನ ಸಂದರ್ಭದಲ್ಲಿ ತಕ್ಷಣ ಏನು ಮಾಡಬೇಕೆಂದು ಅವುಗಳಿಗೆ ಸ್ವಂತವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಇದನ್ನೇ 'Critical Thinking' ಅನ್ನೋದು ಅಂದ್ರೆ ಯಾವುದೇ ತುರ್ತು ಸಮಸ್ಯೆಗೆ ತಕ್ಷಣ ಪರಿಹಾರ ಹುಡುಕುವುದು ಒಂದು ಕಲೆ. ಈ ಕಲೆ ಕರಗತವಾಗಿದ್ದೇ ಆದರೆ ಎಐ ಎಷ್ಟೇ ಮುಂದುವರಿದರೂ ನಿಮ್ಮ ಕೆಲಸ ಕಸಿದುಕೊಳ್ಳಲಾಗದು. ಯಾವುದೇ ಒಂದು ಕಂಪನಿಯು ದೊಡ್ಡ ವ್ಯವಹಾರ ಬಿಕ್ಕಟ್ಟು ಎದುರಾದಾಗ ಅಂತಹ ವೇಳೆ ಯುವದೇ ಎಐ ಬಳಸಿ ಸಲಹೆ ಪಡೆಯುವುದಿಲ್ಲ ಎಂಬುದು ಗಮನಿಸಬೇಕು. ಏಕೆಂದರೆ ಅಂತಹ ವೇಳೆ ಎಐನಿಂದ ಹೊರಗೆ ಯೋಚಿಸುವ, ಹೊಸ ಮಾರ್ಗ, ಪರಿಹಾರ ಹುಡುಕುವ ಸಮರ್ಥ ವ್ಯಕ್ತಿ ಬೇಕು.
ನೀವು ಒಬ್ಬ ಗ್ರಾಹಕನ್ನು ನೋಡಿಕೊಳ್ಳುತ್ತಿರಲಿ ಅಥವಾ ಒಂದು ಟೀಂ ಮುನ್ನಡೆಸುತ್ತಿರಲಿ ಇಂಥ ವೇಳೆ ಭಾವನೆಗಳು ಮತ್ತು ಪರಸ್ಪರ ತಿಳಿವಳಿಕೆ ಬಹಳ ಮುಖ್ಯ. ಇದು ಯಾಂತ್ರಿಕ ಅಥಾವ ಎಐ ಸಲಹೆಗಿಂತ ಬಹಳ ಮುಖ್ಯವಾದುದ್ದು. ಎದುರಿಗಿರುವ ಒಬ್ಬ ವ್ಯಕ್ತಿಯ ಅಥವಾ ಗ್ರಾಹಕನ ಮನಸ್ಥಿತಿ ಗುರುತಿಸುವುದು, ಆ ವ್ಯಕ್ತಿ ಹೇಳಲಾಗದ ಸಮಸ್ಯೆ, ತೊಂದರೆಗಳನ್ನ ಅರ್ಥ ಮಾಡಿಕೊಂಡು ಮಾತುಕತೆ ನಡೆಸುವುದು ಒಂದು ಕಲೆಯಾಗಿದೆ. ಇದನ್ನ ಯಾವುದೇ ರೊಬೊಟ್ ಅಥವಾ ಅಲ್ಗರಿದಮ್ ಕೂಡ ಮಾನವ ಭಾವನೆಗಳನ್ನ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆಫೀಸ್ನಲ್ಲಿ ಉತ್ತಮ ಸಂವಹನಕಾರ, ಸಹಾನುಭೂತಿಯುಳ್ಳ ಸಹೋದ್ಯೋಗಿಯಾಗಿರುವುದು ಯಾವಾಗಲೂ ನಿಮ್ಮನ್ನು ಇತರರಿಗಿಂತ ವಿಭಿನ್ನ, ವಿಶೇಷ ವ್ಯಕ್ತಿಯಾಗಿಸುತ್ತದೆ. ಇದರಿಂದ ನೀವು ಕೆಲಸ ಕಳೆದುಕೊಳ್ಳುವ ಸಾಧ್ಯತೆ ತೀರಾ ಕಡಿಮೆ.
ಕಾಲ ಸಾಕಷ್ಟು ಬದಲಾಗಿದೆ, ಮುಂದೆ ಹೋಗಿದೆ. ಹಿಂದಿನಂತ ಒಮ್ಮೆ ಕಲಿತು ಮರೆತುಬಿಡುವ ಕಾಲ ಇದಲ್ಲ. ಪ್ರತಿದಿನವೂ ಹೊಸ ಹೊಸ ಟೆಕ್ನಾಲಜಿ, ಆವಿಷ್ಕಾರಗಳು ಆಗುತ್ತಲೇ ಇರುತ್ತವೆ. ಯಾವಾಗಲೂ ನಮ್ಮನ್ನು ನಾವು ಅಪ್ಡೇಟ್ ಮಾಡುತ್ತಲೇ ಇರಬೇಕು, ಪ್ರತಿಯೊಂದನ್ನು ಕಲಿಯುವ ಹಂಬಲವಿರಬೇಕು. ಪದವಿ ಡಿಗ್ರಿ ಒಂದನ್ನೇ ಹಿಡ್ಕೊಂಡು ಬದುಕುವ ಕಾಲ ಇದಲ್ಲ. ಅದರ ಜೊತೆ ಜೊತೆಗೆ ಭವಿಷ್ಯದ ದೃಷ್ಟಿಯಿಂದ ಸ್ಕಿಲ್ಗಳನ್ನ ವೃದ್ಧಿಸಿಕೊಳ್ಳುತ್ತ ಅಪ್ಡೇಟ್ ಆಗುತ್ತಲೇ ಇರಬೇಕು. ಇದರಿಂದ ಮುಂದಿನ ಎಲ್ಲ ಹೊಸ ಸವಾಲುಗಳಿಗೆ ನಿಮ್ಮ ಸಿದ್ಧಗೊಳಿಸಲು ಸಾಧ್ಯವಾಗುತ್ತದೆ. ಅಯ್ಯೋ ಅದರಲ್ಲಿ ನನಗೆ ಆಸಕ್ತಿ ಇಲ್ಲ, ಅದು ನನ್ನಿಂದಾಗಲ್ಲ, ನನ್ನ ಆಸಕ್ತಿಯ ವಿಷಯ ಅದಲ್ಲ.. ಹೀಗೆ ಹೇಳುತ್ತಾ ಹೋದರೆ ಹಿಂದೆ ಬಿಳುತ್ತೀರಿ. ಕೆಲಸವೂ ಕಳೆದುಹೋಗುತ್ತದೆ. ಹೀಗಾಗಿ ಸದಾ ಹೊಸದನ್ನು ಕಲಿಯುತ್ತಲೇ ಇರಿ. ನಿಮ್ಮಲ್ಲಿ ಸ್ಕಿಲ್ ಇದ್ದರೆ ಎಐ ನಿಮ್ಮ ಕೆಲಸ ಕಳೆದುಕೊಳ್ಳುವ ಬದಲು ನಿಮ್ಮ ಅಸಿಸ್ಟೆಂಟ್ ಆಗಿ ಸಾಥ್ ಕೊಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.