ಮಿಲೇನಿಯಲ್ ಅಮ್ಮ ಕೃತಿ ಬಿಡುಗಡೆ: ತಾಯ್ತನದ ಹಿರಿಮೆ ದೊಡ್ಡದು -ಜೋಗಿ

Published : Aug 03, 2025, 09:18 AM IST
Jogi Meghana sudhindra new book

ಸಾರಾಂಶ

ಮೇಘನಾ ಸುಧೀಂದ್ರ ಅವರ 'ಮಿಲೇನಿಯಲ್ ಅಮ್ಮ' ಕೃತಿಯು ತಾಯ್ತನದ ಸವಾಲುಗಳು, ಹಿರಿಮೆ, ನೋವು-ಸಂಕಟಗಳನ್ನು ಅನಾವರಣಗೊಳಿಸುತ್ತದೆ. ಅವಳಿ ಮಕ್ಕಳ ಹೆರಿಗೆ ಸಮಯದಲ್ಲಿ ಉಂಟಾದ ಎರಡು ತಲೆಮಾರಿನ ಸಂಪ್ರದಾಯಗಳ ತೊಳಲಾಟವನ್ನು ಲೇಖಕಿ ವಿವರಿಸಿದ್ದಾರೆ. 

ಬೆಂಗಳೂರು (ಆ.3): ತಾಯ್ತನದ ಹಿರಿಮೆ ದೊಡ್ಡದು. ಇದಕ್ಕೆ ಮೇಘನಾ ಸುಧೀಂದ್ರ ಅವರು ಸೊಗಸಾಗಿ ಅಕ್ಷರರೂಪ ನೀಡಿದ್ದಾರೆ ಎಂದು ‘ಕನ್ನಡಪ್ರಭ’ ಪುರವಣಿ ಸಂಪಾದಕ ಗಿರೀಶ್‌ರಾವ್‌ ಹತ್ವಾರ್‌ (ಜೋಗಿ) ಅಭಿಪ್ರಾಯಪಟ್ಟರು.

‘ಹರಿವು ಬುಕ್ಸ್‌’ನಿಂದ ಬಸವನಗುಡಿಯ ವಾಡಿಯಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಓದುಗೆ ಸುಗ್ಗಿ’ ಮೂರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೇಘನ ಸುಧೀಂದ್ರ ಅವರ ತಾಯ್ತನದ ಅನುಭವಗಳನ್ನು ಆಧರಿಸಿದ ‘ಮಿಲೇನಿಯಲ್ ಅಮ್ಮ’ ಕೃತಿಯ ಕುರಿತು ಮಾತನಾಡಿದ ಅವರು, ಈ ಕೃತಿಯನ್ನು ಓದಿದರೆ ತಾಯ್ತನ ಎಷ್ಟು ಸವಾಲಿನದು, ತಾಯ್ತನದ ಹಿರಿಮೆ, ನೋವು-ಸಂಕಟ ಏನು ಎನ್ನುವುದು ಪುರುಷನಾಗಿ ನನಗೆ ತಿಳಿಯಿತು ಎಂದು ಅಭಿಪ್ರಾಯಪಟ್ಟರು.

ಲೇಖಕಿ ಮೇಘನಾ ಸುಧೀಂದ್ರ ಮಾತನಾಡಿ, ಅವಳಿ ಮಕ್ಕಳ ಹೆರಿಗೆ ಸಮಯದಲ್ಲಿ ಉಂಟಾದ ಎರಡು ತಲೆಮಾರಿನ ಸಂಪ್ರದಾಯ, ಆಚಾರ-ವಿಚಾರಗಳು ಮತ್ತು ವೈದ್ಯಕೀಯ ಚಿಕಿತ್ಸೆ ನಡುವಿನ ಅಂತರ, ಈ ಎರಡರ ನಡುವಿನ ಆಯ್ಕೆಯ ತೊಳಲಾಟದ ಬಗ್ಗೆ ವಿವರಿಸಿದರು.

ಹೃದಯ ಶಿವ ಅವರ ಕಥೆಗಳ ಸಂಕಲನವಾದ ‘ಸೂಪರ್ ಗಾಡ್ ಸಣ್ಣಯ್ಯ’ ಮತ್ತು ದಾದಾಪೀರ್ ಜೈಮನ್ ಅವರ ಬೆಂಗಳೂರಿನ ಅನುಭವಗಳನ್ನು ಒಳಗೊಂಡ ‘ಜಂಕ್ಷನ್ ಪಾಯಿಂಟ್’ ಕೃತಿಗಳನ್ನು ಸಹ ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ