Karanataka ಮೊದಲ ಸಿಎಂ ಕೆ.ಸಿ. ರೆಡ್ಡಿ ಎಷ್ಟು ವಿದ್ಯಾವಂತರಾಗಿದ್ದರು? ಹಳ್ಳಿಹೈದ ಸಿಎಂ ಆಗಿದ್ದೇಗೆ?

Published : Nov 15, 2026, 04:34 PM IST
KC Reddy

ಸಾರಾಂಶ

ಕರ್ನಾಟಕದ (ಮೈಸೂರು ರಾಜ್ಯದ) ಮೊದಲ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರ ಜೀವನ ಪಯಣವೇ ಒಂದು ರೋಚಕ ಇತಿಹಾಸ. ಕೋಲಾರದ ಸಣ್ಣ ಹಳ್ಳಿಯಿಂದ ಬಂದ ಕೆ.ಸಿ. ರೆಡ್ಡಿ ಎಷ್ಟು ವಿದ್ಯಾವಂತರಾಗಿದ್ದರು? ಸ್ವಾತಂತ್ರ್ಯ ಹೋರಾಟದ ಮೂಲಕ ಮುಖ್ಯಮಂತ್ರಿ ಗಾದಿಗೇರಿದ್ದು ಹೇಗೆ? ಸಂಪೂರ್ಣ ವಿವರ ಇಲ್ಲಿದೆ.

ಭಾರತ ಸ್ವತಂತ್ರಗೊಂಡಾಗ ಈ ಪ್ರಾತಾಂತ್ಯದ ಅಂದರೆ ಅವತ್ತಿನ ಮೈಸೂರು ರಾಜ್ಯದ (ಇಂದಿನ ಕರ್ನಾಟಕ) ಮೊದಲ ಮುಖ್ಯ ಮಂತ್ರಿಯಾಗಿ ಕೆ.ಸಿ.ರೆಡ್ಡಿ ಚುಕ್ಕಾಣೆ ಹಿಡಿದರು. ಇವರ ಪೂರ್ಣ ಹೆಸರು ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿ (ಕೆ.ಸಿ. ರೆಡ್ಡಿ). ಇವರು 1902ರ ಮೇ 4ರಂದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕ್ಯಾಸಂಬಳ್ಳಿ ಎಂಬ ಸಣ್ಣ ಹಳ್ಳಿಯ ಕೃಷಿ ಕುಟುಂಬದಲ್ಲಿ ಜನಿಸಿದರು. ಹಾಗಾದರೆ ಮೊದಲ ಸಿಎಂ ವಿದ್ಯಾಭ್ಯಾಸ ಏಷ್ಟು? ಹಳ್ಳಿಹೈದ ಸಿಎಂ ಆಗಿದ್ದೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಬೆಂಗಳೂರಿನಲ್ಲಿ ಓದು!

ಆ ಕಾಲದಲ್ಲಿ ಹಳ್ಳಿಗಳಲ್ಲಿ ಶಿಕ್ಷಣದ ಸೌಲಭ್ಯವೇ ಇರಲಿಲ್ಲ. ಆದರೂ, ಶಿಕ್ಷಣದ ಮಹತ್ವ ಅರಿತಿದ್ದ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕೋಲಾರ ಮತ್ತು ಬೆಂಗಳೂರಿನಲ್ಲಿ ಪೂರೈಸಿದರು. ಅಂದಿನ ಕಾಲದ ಉನ್ನತ ವಿದ್ಯಾರ್ಹತೆ (B.A., B.L.) ಪಡೆದಿದ್ದರು. ಹಳ್ಳಿಯಿಂದ ಬಂದು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡಿದರು. ಕಲಾ ವಿಭಾಗದಲ್ಲಿ ಪದವಿ ಮುಗಿಸಿ, ನಂತರ ಕಾನೂನು ಪದವಿ ಪಡೆದರು. 1920ರ ದಶಕದಲ್ಲಿಯೇ ಕಾನೂನು ಪದವೀಧರರಾಗುವ ಮೂಲಕ ಆ ಕಾಲದ ಅತ್ಯಂತ ಉನ್ನತ ವಿದ್ಯಾವಂತರ ಸಾಲಿಗೆ ಸೇರಿದರು.

ಹೋರಾಟಕ್ಕಿಳಿದ ಕೆ.ಸಿ.ರೆಡ್ಡಿ!

ವಕೀಲಿಕೆ ಬಿಟ್ಟು ರೈತರ ಪರ ಹೋರಾಟಕ್ಕೆ ಧುಮುಕಿದ್ದು, ಕಾನೂನು ಪದವಿ ಮುಗಿಸಿದ ನಂತರ ಅವರಿಗೆ ದೊಡ್ಡ ವಕೀಲರಾಗಿ ಕೈತುಂಬಾ ಹಣ ಗಳಿಸುವ ಅವಕಾಶವಿತ್ತು. ಆದರೆ, ಬ್ರಿಟಿಷ್ ಆಳ್ವಿಕೆಯಲ್ಲಿ ರೈತರು ಮತ್ತು ಸಾಮಾನ್ಯ ಜನರು ಅನುಭವಿಸುತ್ತಿದ್ದ ಕಷ್ಟಗಳನ್ನು ಕಂಡು ವಕೀಲಿಕೆಯ ಬದಲು ಸಮಾಜ ಸೇವೆ ಮತ್ತು ರಾಜಕೀಯವನ್ನು ಆರಿಸಿಕೊಂಡರು. ರೈತರ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು 'ಜನವಾಣಿ' ಎಂಬ ಪತ್ರಿಕೆಯನ್ನು ಸಹ ನಡೆಸಿದರು.

ರಾಜಕೀಯ ಪ್ರವೇಶ ಮತ್ತು 'ಪ್ರಜಾ ಪಕ್ಷ' ಸ್ಥಾಪನೆ!

1930ರಲ್ಲಿಯೇ 'ಪ್ರಜಾ ಪಕ್ಷ' ಎಂಬ ರಾಜಕೀಯ ಪಕ್ಷವನ್ನು ಕಟ್ಟುವ ಮೂಲಕ ಗ್ರಾಮೀಣ ಭಾಗದ ಜನರಿಗೆ ರಾಜಕೀಯ ಶಕ್ತಿ ತುಂಬಿದರು. 1937ರಲ್ಲಿ ಈ ಪಕ್ಷವು ಕಾಂಗ್ರೆಸ್ ಜೊತೆ ವಿಲೀನಗೊಂಡಿತು. ನಂತರ ಇವರು ಮೈಸೂರು ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿ, ಎರಡು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಮೈಸೂರು ಚಲೋ' ಚಳವಳಿ ಮತ್ತು ಸಿಎಂ ಪಟ್ಟ (1947)

1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದರೂ, ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ರಚನೆಯಾಗಿರಲಿಲ್ಲ. ಆಗ ಕೆ.ಸಿ. ರೆಡ್ಡಿ ಅವರ ನೇತೃತ್ವದಲ್ಲಿ ಐತಿಹಾಸಿಕ 'ಮೈಸೂರು ಚಲೋ' ಚಳವಳಿ ನಡೆಯಿತು. ಇವರನ್ನು ಬಂಧಿಸಿ ಜೈಲಿಗೂ ಹಾಕಲಾಯಿತು. ಚಳವಳಿಯ ತೀವ್ರತೆಗೆ ಮಣಿದ ಮಹಾರಾಜರು ಜವಾಬ್ದಾರಿ ಸರ್ಕಾರ ರಚನೆಗೆ ಒಪ್ಪಿದರು. 1947ರ ಅಕ್ಟೋಬರ್ 25ರಂದು ಕೆ.ಸಿ. ರೆಡ್ಡಿ ಅವರು ಮೈಸೂರು ರಾಜ್ಯದ (ಇಂದಿನ ಕರ್ನಾಟಕ) ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, 1952ರವರೆಗೆ ರಾಜ್ಯವನ್ನು ಮುನ್ನಡೆಸಿದರು.

ಮುಖ್ಯಮಂತ್ರಿಯಾದ ನಂತರದ ಸಾಧನೆಗಳು!

ಸಾಮಾನ್ಯ ಹಳ್ಳಿಯಿಂದ ಬಂದು ಸಿಎಂ ಆದ ಇವರು, ಆಧುನಿಕ ಕರ್ನಾಟಕದ ಕೈಗಾರಿಕಾ ಮತ್ತು ಆಡಳಿತಾತ್ಮಕ ಅಡಿಪಾಯ ಹಾಕಿದರು. ಬೆಂಗಳೂರಿನಲ್ಲಿ ವಿಧಾನಸೌಧ ನಿರ್ಮಾಣಕ್ಕೆ 1951ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದು ಇವರೇ (ನಂತರ ಕೆಂಗಲ್ ಹನುಮಂತಯ್ಯನವರು ಇದನ್ನು ಪೂರ್ಣಗೊಳಿಸಿದರು). ನಂತರದ ದಿನಗಳಲ್ಲಿ ಕೇಂದ್ರ ಸಚಿವರಾಗಿ ಮತ್ತು ಮಧ್ಯಪ್ರದೇಶದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮನುಷ್ಯನಿಗೆ ಮನುಷ್ಯನ ಸಾಮೀಪ್ಯ ಬೇಕಾಗಿದೆ: ನಗರಗಳಲ್ಲಿ ಶುರುವಾಗಿದೆ ವಿಚಿತ್ರ ಟ್ರೆಂಡ್!
India’s One Day Capital: ಕೇವಲ ಒಂದು ದಿನ ಮಾತ್ರ ಭಾರತದ ರಾಜಧಾನಿಯಾಗಿದ್ದ ನಗರ ಯಾವುದು ನಿಮಗೆ ಗೊತ್ತಾ?