
ಪಾತ್ರೆ ತೊಳೆಯೋದು, ಮನೆ ಕ್ಲೀನ್ ಮಾಡೋದು, ಬಾತ್ ರೂಂ ಶುಚಿಗೊಳಿಸುವುದು ಸೇರಿದಂತೆ ಇಡೀ ಮನೆಯನ್ನು ಗುಡಿಸಿ, ಒರೆಸಿ ಶುಚಿಯಾಗಿಡುವುದು ಅತೀ ದೊಡ್ಡ ಸವಾಲು. ವಾರದ ಒಂದು ದಿನ ಇದಕ್ಕೆ ಮೀಸಲಿಡಬೇಕು. ಇನ್ನು ಪ್ರತಿ ದಿನದ ಕೆಲಸ ಬೇರೆ. ಇದೀಗ ಮನೆ ಕ್ಲೀನ್ ಮಾಡಲು ಚಿಂತೆ ಮಾಬೇಕಿಲ್ಲ. ಪಾತ್ರೆ ಸೇರಿದಂತೆ ಇಡೀ ಮನೆಯನ್ನು ಎಐ ರೋಬೋಟಿಕ್ ಶುಚಿ ಮಾಡಿಕೊಡುತ್ತೆ. ಕೇವಲ 3000 ರೂಪಾಯಿಗೆ ಇಡೀ ಮನೆಯನ್ನು ಕ್ಲೀನ್ ಮಾಡಲಿದೆ. ಜಸ್ಟ್ ಬುಕ್ ಮಾಡಿದರೆ ಸಾಕು, ಎಐ ರೋಬೋಟ್ ಮನೆಗೆ ಬಂದು ಕ್ಲೀನ್ ಮಾಡಲಿದೆ.
ಮನೆಯ ಕೆಲಸಗಳು ಹಾಗೂ ಸ್ವಚ್ಚತೆ ಇದೀಗ ರೋಬೋಟ್ ಮಾಡಲಿದೆ. ಅಮೆರಿಕದ ಸ್ಟಾರ್ಟ್ಅಪ್ ಟೌ ರೊಬೋಟಿಕ್ ಸಂಸ್ಥೆ ಈ ರೋಬೋಟ್ ಅಭಿವೃದ್ಧಿ ಮಾಡಿದೆ. ಟೌ ರೋಬೋಟಿಕ್ ನೇರವಾಗಿ ಮನೆಗೆ ಆಗಿಸಿ ಶುಚಿಗೊಳಿಸಲಿದೆ. ಮಾನವಾಕೃತಿಯ ರೋಬೋಟಿಕ್ ಮನೆಗೆ ಬಂದು ಸ್ಕಾನ್ ಮಾಡಿ ಎಲ್ಲಾ ಕೆಲಸ ಮಾಡಲಿದೆ. ಈಗಾಗಲೇ ಅಮೆರಿಕದಲ್ಲಿ ಟೌ ರೋಬೋಟಿಕ್ ಈ ರೋಬೋಟಿಕ್ ಸೇವೆ ಆರಂಭಿಸಿದೆ.
ಟೌ ರೋಬೋಟಿಕ್ ಸಿಇಒ ಅಲೆಕ್ಸಾಂಡರ್ ಈ ಕುರಿತು ಸಂಚಸ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಈ ಕುರಿತ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಅಮೆರಿಕದಲ್ಲಿ ಡ್ರೈವರ್ ಲೆಸ್ ಕಾರಿನ ಮೂಲಕ ಈ ರೋಬೋಟ್ ಬುಕ್ ಮಾಡಿದ ಮನೆಗೆ ಆಗಮಿಸಲಿದೆ. ಕಾರಿನಿಂದ ಇಳಿದು ನೇರವಾಗಿ ಮನೆಗೆ ಬಂದು ಕೆಲಸ ಆರಂಭಿಸಲಿದೆ. ಮನೆಯ ಕೆಲಸಗಳ ಕುರಿತು ಬುಕಿಂಗ್ ಮಾಡುವಾಗ ಮೊದಲೇ ಸೂಚನೆ ನೀಡಬೇಕು. ಪಟ್ಟಿ ಕಳುಹಿಸಬೇಕು. ಈ ಪಟ್ಟಿಗೆ ಅನುಗುಣವಾಗಿ ರೋಬೋಟ್ ಕೆಲಸ ಆರಂಭಿಸಲಿದೆ. ಕೆಲಸದ ಪಟ್ಟಿ ಹಾಗೂ ಇಡೀ ಮನೆಯನ್ನು ರೋಬೋಟಿಕ್ ಸ್ಕ್ಯಾನ್ ಮಾಡಿ ಕೆಲಸ ಮಾಡಲಿದೆ.
ಅಲೆಕ್ಸಾಂಡರ್ ಹಂಚಿಕೊಂಡ ವಿಡಿಯೋದಲ್ಲಿ ರೋಬೋ ಕಾರಿನಿಂದ ಇಳಿದು ತನ್ನ ಸಾಮಾಗ್ರಿಗಳನ್ನು ಹಿಡಿದು ಮನೆಗೆ ತೆರಳುತ್ತಿದೆ. ಬಳಿಕ ಮನೆ ಸ್ಕ್ಯಾನ್ ಮಾಡಲಿದೆ. ಬಳಿಕ ಕೆಲಸ ಆರಂಭಿಸಲಿದೆ. ಪಟ್ಟಿ ನೀಡಿದಂತೆ ಒಂದೊಂದೆ ಕೆಲಸಗಳನ್ನು ಆರಂಭಿಸುವ ವಿಡಿಯೋವನ್ನು ಕಂಪನಿ ಸಿಇಒ ಹಂಚಿಕೊಂಡಿದ್ದಾರೆ.
ಟೌ ರೋಬೋಟಿಕ್ ಲಾಂಚ್ ಮಾಡಿರುವ ರೋಬೋ ಮನೆಗೆ ಬಂದು ಶುಚಿಗೊಳಿಸುವ ಚಾರ್ಜ್ ಕಡಿಮೆ. ಪ್ರತಿ ಗಂಟೆಗೆ 3000 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ವಿಶೇಷ ಅಂದರೆ ಒಂದರಿಂದ 2 ಗಂಟೆಯಲ್ಲಿ ಇಡೀ ಮನೆಯ ಕೆಲಸಗಳನ್ನು ಈ ರೋಬೋ ಪೂರ್ಣಗೊಳಿಸಲಿದೆ. ಒಂದು ಸೆಕೆಂಡ್ ವಿಶ್ರಾಂತಿ ಪಡೆಯದೇ ಕೆಲಸ ಮಾಡಲಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.