ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆ ಮೇಲೆ ಔಷಧಿ ನಿಯಂತ್ರಣ ಪ್ರಾಧಿಕಾರ ದಾಳಿ!

By Web DeskFirst Published Dec 19, 2018, 7:27 PM IST
Highlights

ಅನಾರೋಗ್ಯಕಾರಿ ರಾಸಾಯನಿಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ಔಷಧಿ ನಿಯಂತ್ರಣ ಪ್ರಾಧಿಕಾರ ಜಾನ್ಸನ್ ಆ್ಯಂಡ ಜಾನ್ಸನ್ ಸಂಸ್ಥೆಯ ಮೇಲೆ ದಾಳಿ ಮಾಡಿದೆ. ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯ ಬೇಬಿ ಪೌಡರ್ ನಲ್ಲಿ ಅನಾರೋಗ್ಯಕಾರಿ ರಾಸಾಯನಿಕ ಅಂಶ ಇದೆ ಎಂಬ ಆರೋಪ ಕೇಳಿ ಬಂದಿದೆ.

ನವದೆಹಲಿ(ಡಿ.19): ಅನಾರೋಗ್ಯಕಾರಿ ರಾಸಾಯನಿಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ಔಷಧಿ ನಿಯಂತ್ರಣ ಪ್ರಾಧಿಕಾರ ಜಾನ್ಸನ್ ಆ್ಯಂಡ ಜಾನ್ಸನ್ ಸಂಸ್ಥೆಯ ಮೇಲೆ ದಾಳಿ ಮಾಡಿದೆ.

ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯ ಬೇಬಿ ಪೌಡರ್ ನಲ್ಲಿ ಅನಾರೋಗ್ಯಕಾರಿ ರಾಸಾಯನಿಕ ಅಂಶ ಇದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಸಂಸ್ಥೆಯ ಮೇಲೆ ದಾಳಿ ಮಾಡಿ ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಯಿತು.

ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್ ನಲ್ಲಿ ಕ್ಯಾನ್ಸರ್ ತರಬಲ್ಲ ಅಂಶಗಳಿವೆ ಎಂಬ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಸಂಸ್ಥೆ, ಬೇಬಿ ಪೌಡರ್ ನಲ್ಲಿ ಮಕ್ಕಳಿಗೆ ಹಾನಿಯಾಗುವ ಯಾವುದೇ ಅಂಶವಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಈ ಕುರಿತು ಈಗಾಗಲೇ ಹಲವು ಹಂತದ ಸಂಶೋಧನೆಗಳು ನಡೆದಿವೆ ಎಂದು ತಿಳಿಸಿದೆ.
 

click me!