ಸ್ಯಾನಿಟರಿ ಪ್ಯಾಡ್ ಆರ್ಡರ್ ಮಾಡಿದ್ದನ್ನು ಗೌಪ್ಯವಾಗಿ ಪ್ಯಾಕ್ ಮಾಡಿದ್ದಕ್ಕೆ ಮಹಿಳೆ ಆಕ್ರೋಶ, ಆನ್‌ಲೈನಲ್ಲಿ ಚರ್ಚೆ

Published : Apr 07, 2026, 05:42 PM IST
sanitary pads

ಸಾರಾಂಶ

ಇನ್ಸ್ಟಾಮಾರ್ಟ್‌ನಲ್ಲಿ ಆರ್ಡರ್ ಮಾಡಿದ ಸ್ಯಾನಿಟರಿ ಪ್ಯಾಡ್ ಅನ್ನು ಗೌಪ್ಯವಾಗಿ ಪ್ಯಾಕ್ ಮಾಡಿದ್ದಕ್ಕೆ ಮಹಿಳೆಯೊಬ್ಬರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. ಈ ಘಟನೆಯು ಆನ್‌ಲೈನ್‌ನಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದ್ದು, ಕೆಲವರು ಇದನ್ನು ಗೌಪ್ಯತೆಯ ಗೌರವವೆಂದರೆ, ಇತರರು ಮುಟ್ಟಿನ ಬಗೆಗಿನ ಕೀಳರಿಮೆಯ ಸಂಕೇತವೆಂದು ವಾದಿಸಿದ್ದಾರೆ.

ಮುಟ್ಟಿನ ಸಮಯದಲ್ಲಿ ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್ ಅನ್ನು ಇನ್ಸ್ಟಾಮಾರ್ಟ್ ನಲ್ಲಿ ಆರ್ಡರ್ ಮಾಡಿದಾಗ ಅದನ್ನು ಯಾರಿಗೂ ಕಾಣದಂತೆ ಪ್ಯಾಕ್ ಮಾಡಿ ಕೊಟ್ಟಿರುವುದು ಈಗ ಚರ್ಚೆಯ ಕೇಂದ್ರಬಿಂದುವಾಗಿದೆ. ಸಂಹಿತಾ ಎಂಬ ಮಹಿಳೆಯೊಬ್ಬರು ನ್ಯಾಪ್‌ಕಿನ್ ಅನ್ನು ಆನ್‌ ಲೈನ್ ನಲ್ಲಿ ಆರ್ಡರ್ ಮಾಡಿದರು. ಇದನ್ನು ಚೆನ್ನಾಗಿ ಪ್ಯಾಕ್ ಮಾಡಿ ಕೊಡಲಾಗಿತ್ತು. ಇದಕ್ಕೆ ಅವರು ಹೇ ಇನ್ನಾದರೂ ಮುಂದೆ ಬನ್ನಿ. ನನಗೆ ಈ ಬಗ್ಗೆ ನಾಚಿಕೆ ಆಗುವುದಿಲ್ಲ ನೀವ್ಯಾಕೆ ನಾಚಿಕೆಯಿಂದ ಈ ರೀತಿ ಕವರ್ ಮಾಡಿದ್ದೀರಿ? ಇದು ನಾನು ಇಂದು ಇನ್ಸ್ಟಾಮಾರ್ಟ್ ನಲ್ಲಿ ಆರ್ಡರ್ ಮಾಡಿದ ಸ್ಯಾನಿಟರಿ ಪ್ಯಾಡ್ ಆದರೆ ಯಾಕೆ? ಎಂದು ಪ್ರಶ್ನಿಸಿ ಕವರ್ ಮಾಡಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಇವರ ಈ ಟ್ವೀಟ್‌ ಗೆ ತರಹೇವಾರಿ ಕಾಮೆಂಟ್‌ಗಳು, ಚರ್ಚೆಗಳು ನಡೆದಿದೆ. ಕೆಲವರು ಇದನ್ನು ಸರಿ ಎಂದರೆ. ಇನ್ನು ಕೆಲವರು ಇನ್ನೂ ಜನರ ಮನಸ್ಸಿನಲ್ಲಿ ಇದರ ಬಗ್ಗೆ ಕೀಳರಿಮೆ ಇದೆ ಎಂದು ಚರ್ಚೆ ಮಾಡಿದ್ದಾರೆ. ನೀವು ಇದರ ಬಗ್ಗೆ ಪ್ರಮೋಷನ್ ಮಾಡುತ್ತಿದ್ದೀರಾ? ಆರ್ಡರ್ ಮಾಡುವ ಮುನ್ನ ನಿಮಗೆ ಚೀಲದಲ್ಲಿ ಪ್ಯಾಕಿಂಗ್ ಬೇಕೆ? ಬೇಡವೇ ಎಂಬ ಆಯ್ಕೆ ಇದೆ ಅದನ್ನು ಒತ್ತಿ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ಕಾಂಡೋಮ್‌ಗಳು ಗೌಪ್ಯವೇಕೆ?

ಸ್ಯಾನಿಟರಿ ಪ್ಯಾಡ್‌ಗಳು, ಕಾಂಡೋಮ್‌ಗಳು, ರೇಜರ್‌ಗಳು, ಲೂಬ್‌ಗಳು, ಇಂಟಿಮೇಟ್ ಮಸಾಜರ್‌ಗಳು ಇತ್ಯಾದಿಗಳನ್ನು ಒಳಗೊಂಡಂತೆ ಎಲ್ಲಾ ನಿಕಟ ವಸ್ತುಗಳಿಗೆ ಇದು ಒಂದು ಶಿಷ್ಟಾಚಾರವಾಗಿದೆ. ಆದರೆ ರೇಜರ್ ಅಥವಾ ಕಾಂಡೋಮ್ ಅನ್ನು ಮರೆಮಾಡಬೇಕೆಂದು ನೀವು ಏಕೆ ಭಾವಿಸುತ್ತೀರಿ? ಎಲ್ಲದಕ್ಕೂ ಅಳುವುದನ್ನು ನಿಲ್ಲಿಸಿ ಎಂದಿದ್ದಾರೆ.

ವಕೀಲರೊಬ್ಬರು ಕಾಮೆಂಟ್ ಮಾಡಿ, ಒಬ್ಬ ಹುಡುಗಿಯಿಂದ ಬರುವುದು ಸ್ವಲ್ಪ ಅನಿರೀಕ್ಷಿತವೆನಿಸಬಹುದು, ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸ್ವಿಗ್ಗಿಯಿಂದ ಆರ್ಡರ್ ಮಾಡಿದ ಎಲ್ಲವೂ ಸಾಮಾನ್ಯವಾಗಿ ಒಂದೇ ರೀತಿಯ ಪ್ಯಾಕೇಜಿಂಗ್‌ನಲ್ಲಿ ಬರುತ್ತದೆ, ಅದು ಸಾಕಷ್ಟು ಪ್ರಮಾಣಿತವಾಗಿದೆ. ಎಲ್ಲವನ್ನೂ ಸಮಸ್ಯೆಯಾಗಿ ಕಾಣುವ ಅಗತ್ಯವಿಲ್ಲ ಅಥವಾ ಮಹಿಳಾ ಕಾರ್ಡ್ ಗೆ ಲಿಂಕ್ ಮಾಡುವ ಅಗತ್ಯವಿಲ್ಲ. ಸಿಗರೇಟ್‌ಗಳಂತಹ ವಸ್ತುಗಳು ಸಹ ಒಂದೇ ರೀತಿ ಪ್ಯಾಕ್ ಮಾಡಲಾಗುತ್ತದೆ.

ನನಗೆ ಪಿರಿಯಡ್ಸ್ ಆಗ್ತಿದೆ ಅಂತ ಹೇಳ್ತಾ  ಇದ್ದೀರಾ?

ನೀವು ಎಲ್ಲರಿಗೂ ನನಗೆ ಪಿರಿಯಡ್ಸ್ ಆಗ್ತಿದೆ ಅಂತ ಹೇಳ್ತಾ ಇರ್ತೀರಾ ಅಲ್ವಾ? ಅವರೂ ಹೇಳಲ್ಲ, ಅದಕ್ಕೇ ಅವರೂ ಅದನ್ನು ಕವರ್ ಮಾಡ್ತಾರೆ. ಅದನ್ನು ಪ್ರಶ್ನಿಸಿದರೆ ನೀವು ಬುದ್ಧಿಜೀವಿ ಆಗುವುದಿಲ್ಲ, ಅವರು ನಿಮ್ಮ ಗೌಪ್ಯತೆಯನ್ನು ಗೌರವಿಸಿದ್ದಕ್ಕೆ ಕೃತಜ್ಞರಾಗಿರಿ ಎಂದು ಮತ್ತೊಬ್ಬರ ಕಮೆಂಟ್‌ ಆಗಿದೆ.

ಅಸಲಿಗೆ ಸಿಟಿಯಲ್ಲಿ ಹೆಣ್ಣು ಮಕ್ಕಳ ಮುಟ್ಟಿನ ಬಗ್ಗೆ ಓಪನ್ ಆಗಿ ಮಾತನಾಡುತ್ತಾರೆ. ಹಳ್ಳಿ ಮತ್ತು ಗ್ರಾಮೀಣ ಪ್ರದೇಶದ ಜನರಲ್ಲಿ ಇನ್ನೂ ಕೂಡ ಮೌಢ್ಯತೆ ಮತ್ತು ಗೌಪ್ಯತೆ ಇದ್ದೇ ಇದೆ. ಬೆರಳಣಿಕೆಯ ಜನರಷ್ಟೇ ಈ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಕೆಲವು ಹೆಣ್ಣು ಮಕ್ಕಳು ಈ ಬಗ್ಗೆ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಅವರಿಗೆ ಇನ್ನೂ ಕೂಡ ಅಂಜಿಕೆ ಇದೆ. ಇನ್ನು ಮೆಡಿಕಲ್‌ಗಳಲ್ಲಿ ನಾವು ಖರೀದಿ ಮಾಡಿದಾಗ ಸಾಮಾನ್ಯವಾಗಿ ಯಾವುದೇ ಮೆಡಿಸಿನ್‌ ಆದರೂ ಅದನ್ನು ಕವರ್ ಮೂಲಕವೇ ಕೊಡುತ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಣ್ಣೆಯೂ ಬೇಡ, ಕುದಿಸೋದು ಬೇಡ: ಬಿರಿಯಾನಿ, ಸಾಂಬಾರ್​ ಸೇರಿ ಘಮಘಮಿಸುವ ಸಾವಿರಾರು ಖಾದ್ಯ ಮಾಡೋದು ಹೀಗೆ
Karna Serial ರೋಚಕ ಟ್ವಿಸ್ಸ್​: ಬಯಲಾಗೇ ಬಿಡ್ತು ಕರ್ಣನ ಜನ್ಮ ರಹಸ್ಯ! ತಿಪ್ಪೆಯಲ್ಲಿ ಸಿಕ್ಕ ಮಗು ಯಾರದ್ದು