Future Prediction : 100 ವರ್ಷದಲ್ಲಿ ಬದಲಾಗಲಿದೆ ನಮ್ಮ ದೇಹ

By Suvarna NewsFirst Published Feb 3, 2023, 3:05 PM IST
Highlights

ನಮ್ಮ ದೇಹದಲ್ಲಿ ಸಾಕಷ್ಟು ರಹಸ್ಯ ಅಡಗಿದೆ. ವಿಜ್ಞಾನಿಗಳು ನಮ್ಮ ದೇಹದ ಒಂದೊಂದು ಅಂಗದ ಬಗ್ಗೆಯೂ ಅಧ್ಯಯನ ನಡೆಸುತ್ತಲೇ ಇರುತ್ತಾರೆ. ಮನುಷ್ಯನ ಮುಂದಿನ ದಿನಗಳು ಹೇಗಿರಲಿದೆ, ಆತನ ದೇಹದಲ್ಲಿ ಯಾವೆಲ್ಲ ಬದಲಾವಣೆಯಾಗ್ಬಹುದು ಎಂದು ಈಗ ತಜ್ಞರು ಅಂದಾಜಿಸಿದ್ದಾರೆ. 
 

ನಮ್ಮ ದೇಹದ ಬಗ್ಗೆ ನಾವು ತಿಳಿಯೋದು ಸಾಕಷ್ಟಿದೆ. ನಮ್ಮ ದೇಹ ಮೃದುವಾಗಿರುತ್ತದೆ. ನಮ್ಮ ದೇಹದ ಕೆಲ ಅಂಗಗಳು ನಿರಂತರವಾಗಿ ಬೆಳವಣಿಗೆ ಹೊಂದುತ್ತಿರುತ್ತವೆ. ನಮ್ಮ ದೇಹದ ಬಗ್ಗೆ ನಿರಂತರ ಸಂಶೋಧನೆಗಳು ನಡೆಯುತ್ತಿರುತ್ತವೆ. ಮುಂದಿನ ದಿನಗಳಲ್ಲಿ ನಮ್ಮ ದೇಹ ಹೆಚ್ಚು ದೃಢವಾಗುತ್ತದೆ. ಇದ್ರಿಂದ ಅಪಘಾತದಲ್ಲಿ ದೇಹಕ್ಕೆ ಹಾನಿಯಾಗುವುದು ಕಡಿಮೆ ಎಂದು ಇತ್ತೀಚಿನ ಸಂಶೋಧನೆಯೊಂದು ಹೇಳಿದೆ. ಶಾರ್ಕ್ ಮೀನಿನ ದೇಹದಲ್ಲಿ ಕಾರ್ಟಿಲೆಜ್ಗಳು ನಿರಂತರವಾಗಿ ಹೆಚ್ಚುತ್ತಿರುವಂತೆಯೇ, ಭವಿಷ್ಯದಲ್ಲಿ ನಮ್ಮ ದೇಹದಲ್ಲೂ ಇಂಥ ಬದಲಾವಣೆ ಕಾಣಬಹುದು. ನಮ್ಮ ಮೂಳೆಗಳು ಹೆಚ್ಚು ಹೊಂದಿಕೊಳ್ಳುತ್ತವೆ ಮತ್ತು ಬಲವಾಗುತ್ತವೆ. ಹೆಚ್ಚಿನ ಕಾರ್ಟಿಲೆಜ್ ನಿಂದಾಗಿ ಗಾಯ ಕಡಿಮೆಯಾಗುತ್ತದೆ ಎಂದು ನರವಿಜ್ಞಾನಿ ಡೀನ್ ಬರ್ನೆಟ್ ಹೇಳಿದ್ದಾರೆ. 

ಬದಲಾಗಲಿದೆ ನಮ್ಮ ಹಲ್ಲು (Tooth) : ನಮ್ಮ ಹಲ್ಲು ಕೊಕ್ಕಿನಂತೆ ಆಗಲಿದೆ ಎನ್ನುತ್ತಾರೆ ಶೆಫೀಲ್ಡ್ ವಿಶ್ವವಿದ್ಯಾನಿಲಯದ ಜೀವಶಾಸ್ತ್ರಜ್ಞ ಗರೆಥ್ ಫ್ರೇಸರ್. ಹಿಂದಿನಿಂದ ಆಗ್ತಿರುವ ಬದಲಾವಣೆ ಪರಿಗಣಿಸಿದ ಅವರು, ಮುಂದಿನ ದಿನಗಳಲ್ಲಿ ಹಲ್ಲುಗಳು ಸೇರಲಿವೆ. ಅದು ಬೇರೆ ಬೇರೆಯಾಗಿ ಹುಟ್ಟುವುದಿಲ್ಲ. ಆಗ ಹಲ್ಲುಗಳು ಪ್ರಬಲವಾಗಲಿದೆ. ನಮ್ಮ ಆಹಾರ (Food) ಮತ್ತು ಪಾನೀಯದಿಂದ ಈ ಬದಲಾವಣೆಯಾಗಲಿದೆ ಎಂದವರು ಹೇಳಿದ್ದಾರೆ.

ಮದುವೆ ಸಂಪ್ರದಾಯ ಆರಂಭವಾಗಿದ್ದು ಯಾವಾಗ? ಅದಕ್ಕೂ ಮುನ್ನ ಏನಾಗ್ತಿತ್ತು…

ಮನುಷ್ಯ ಮೊದಲಿಗಿಂತ ಎತ್ತರ (Height) ವಾಗಲಿದ್ದಾನೆ : ಕಳೆದ 100 ವರ್ಷಗಳಲ್ಲಿ ಮಾನವನ ಎತ್ತರ ಹೆಚ್ಚಾಗಿದೆ. ಇನ್ನು 100 ವರ್ಷಗಳಲ್ಲೂ ಇದೇ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗ್ತಿದೆ. ಅಧ್ಯಯನ (Study) ವೊಂದರ ಪ್ರಕಾರ, ಅಮೆರಿಕದ ಜನರ ಸರಾಸರಿ ಎತ್ತರ 5.7 ಅಡಿ. ಹಿಂದಿನ ವರ್ಷ ಸರಾಸರಿ ಎತ್ತರ ಹೆಚ್ಚಾಗಿದ್ದು 5. 10 ಅಡಿಗೆ ಬಂದು ನಿಂತಿದೆ. ಇದು ಮುಂದುವರೆದರೆ ಇನ್ನು 100 ವರ್ಷಗಳಲ್ಲಿ ವ್ಯಕ್ತಿ ಎತ್ತರ ಎಷ್ಟು ಹೆಚ್ಚಾಗಲಿದೆ ಎಂಬುದನ್ನು ನೀವೇ ಊಹಿಸಿ.

ಬಲವಾಗಲಿದೆ ಶ್ವಾಸಕೋಶ : ಹಾರ್ವರ್ಡ್ ಸಂಶೋಧಕ ಜುವಾನ್ ಎನ್ರಿಕ್ವೆಜ್ ಪ್ರಕಾರ, ಭವಿಷ್ಯದಲ್ಲಿ, ನಮಗೆ ಹೆಚ್ಚು ಆಮ್ಲಜನಕವನ್ನು ಸೆಳೆಯಬಲ್ಲ ಶ್ವಾಸಕೋಶಗಳು ಮತ್ತು ಸ್ನಾಯುಗಳ ಅವಶ್ಯಕತೆಯಿದೆ. ಯಾಕೆಂದ್ರೆ ಮನುಷ್ಯ ಮಂಗಳಗ್ರಹದಲ್ಲಿ ವಾಸಿಸಲಿದ್ದಾನೆ.

ಉದ್ದವಾಗಲಿದೆ ಬೆರಳು, ಉಗುರು : ಡೀನ್ ಬರ್ನೆಟ್ ಪ್ರಕಾರ, ಎತ್ತರ ಹೆಚ್ಚಾದರೆ, ಅದು ಪ್ರತಿಯೊಂದು ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಬೆರಳುಗಳು ಉದ್ದವಾಗುತ್ತವೆ. ಬೆರಳ ತುದಿಗಳ ನಿಖರತೆ ಹೆಚ್ಚಾಗಲಿದೆ. ಇದು ಟೈಪಿಂಗ್ ಹಾಗೂ ಟಚ್ ಸ್ಕ್ರೀನ್ ಬಳಕೆಗೆ ಸಹಾಯವಾಗಲಿದೆ. ಇದಲ್ಲದೆ ಯಾವುದೇ ವಸ್ತುವನ್ನು ನೀವು ಗಟ್ಟಿಯಾಗಿ ಹಿಡಿದುಕೊಳ್ಳಬಹುದು ಎನ್ನುತ್ತಾರೆ ತಜ್ಞರು. 

ಕಂಪ್ಯೂಟರಂತಾಗಲಿದೆ ಮೆದುಳು : ನಾವು ಪ್ರತಿ ದಿನ ಅನೇಕ ವಿಷ್ಯಗಳನ್ನು ಕಲಿಯುತ್ತೇವೆ. ಮುಂದಿನ ದಿನಗಳಲ್ಲಿ ನಾವು ಎದುರಿಸುವ ಸಮಸ್ಯೆ ಕೂಡ ಹೆಚ್ಚಾಗಲಿದೆ. ಹೆಚ್ಚಿನ ಮಾಹಿತಿಯನ್ನು ನಿಭಾಯಿಸುವ ಮೂಲಕ ಮೆದುಳು ಉತ್ತಮಗೊಳ್ಳಲಿದೆ. ಕಂಪ್ಯೂಟರ್ ನಂತೆ ಎಲ್ಲ ವಿಷ್ಯವನ್ನು ವಿಶ್ಲೇಷಿಸಲು ಮತ್ತು ಸಂಗ್ರಹಿಸಲು ಸಾಧ್ಯವಾಗುತ್ತದೆ. ಅನೇಕ ವಿಷ್ಯಗಳನ್ನು ನಾವು ಸುಲಭವಾಗಿ ನೆನಪಿಟ್ಟುಕೊಳ್ಳಬಹುದು. ಆದ್ರೆ ಇದು ಸಕಾರಾತ್ಮಕ ಪ್ರಭಾವ ಬೀರಲಿದೆಯೇ ಅಥವಾ ನಕಾರಾತ್ಮಕವಾಗಲಿದೆಯೇ ಎಂಬುದು ತಿಳಿದಿಲ್ಲ.

ಚುರುಕಾಗಲಿದೆ ಕಣ್ಣು, ಕಿವಿ :  ಆನುವಂಶಿಕ ಕಾಯಿಲೆಗಳು ಕಡಿಮೆಯಾಗುತ್ತವೆ. ಶ್ರವಣ ಸಾಮರ್ಥ್ಯ ಹೆಚ್ಚುತ್ತದೆ. ಕುರುಡುತನ ಕಡಿಮೆಯಾಗಲಿದೆ. ತಂತ್ರಜ್ಞಾನದಿಂದ ಕಣ್ಣು ಮತ್ತು ಕಿವಿಗಳ ಅಂಗವಿಕಲರಿಗೆ ಹೊಸ ಜೀವನ ಸಿಗುತ್ತದೆ. ಅಂಧರಿಗೆ ವರವಾಗುವ ಕಣ್ಣುಗಳನ್ನು ಈಗಾಗಲೇ ಜರ್ಮನ್ ವಿಜ್ಞಾನಿಗಳು ತಯಾರಿಸುತ್ತಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಮಾತ್ರವಲ್ಲ, ಅಮೆರಿಕದಲ್ಲೂ ಇದೆ ನೀರಿನ ಬರ!

ಹೆಚ್ಚಾಗಲಿದೆ ಅಲರ್ಜಿ : ಆನುವಂಶಿಕ ಕಾಯಿಲೆ ಕಡಿಮೆಯಾದ್ರೂ ವಾತಾವರಣ ಹದಗೆಟ್ಟಿರುವ ಕಾರಣ ಅಲರ್ಜಿ ಸಮಸ್ಯೆ ಜಾಸ್ತಿಯಾಗಲಿದೆ. ಕೀಟಗಳು, ರೋಗಕಾರಕಗಳು, ಬ್ಯಾಕ್ಟೀರಿಯಾ ಮತ್ತು ಸೋಂಕು ಹೆಚ್ಚಾಗಲಿದೆ. ಗ್ಲೋಬಲ್ ಬ್ರೈನ್ ಇನ್‌ಸ್ಟಿಟ್ಯೂಟ್‌ನಲ್ಲಿ ಎವಲ್ಯೂಷನರಿ ಆಂಥ್ರೊಪಾಲಜಿಯಲ್ಲಿ ಸಂಶೋಧಕರಾದ ಕ್ಯಾಡೆಲ್ ಲಾಸ್ಟ್ ಅವರ ಪ್ರಕಾರ, ಮಾನವರು ಕ್ರಮೇಣ ಲೈಂಗಿಕ ಪ್ರಬುದ್ಧತೆಯನ್ನು ಸಾಧಿಸುತ್ತಾರೆ. ಜೈವಿಕ ಸಂತಾನೋತ್ಪತ್ತಿ ವಿಳಂಬವಾಗುತ್ತದೆ. ನಿಧಾನವಾಗಿ ಜೀವನ ನಡೆಸುವ ಜೊತೆಗೆ ತುಂಬಾ ವಯಸ್ಸಾದ್ಮೇಲೆ ಸಾವನ್ನಪ್ಪುತ್ತಾರಂತೆ.

ಮತ್ತಷ್ಟು ಹೆಚ್ಚಾಗಲಿದೆ ತೂಕ : ನೂರು ವರ್ಷಗಳನ್ನು ಗಮನಿಸಿದ್ರೆ ಇದು ಸ್ಪಷ್ಟವಾಗುತ್ತದೆ. 33 ವರ್ಷಗಳಲ್ಲಿ ಎಲ್ಲ ದೇಶದಲ್ಲೂ ಬೊಜ್ಜು ಹೆಚ್ಚಾಗಿದೆ. ಇದ್ರಿಂದ ಮುಂದಿನ ದಿನಗಳಲ್ಲಿ ಬೊಜ್ಜು ಮತ್ತಷ್ಟು ಹೆಚ್ಚಾಗಲಿದೆ ಎಂಬುದು ಸ್ಪಷ್ಟವಾಗುತ್ತದೆ. 
 

click me!