ಏಡಿಯಿಂದೇನು ಆರೋಗ್ಯಕ್ಕೆ ಲಾಭ?

By Web DeskFirst Published Sep 22, 2018, 4:14 PM IST
Highlights

ಸಮುದ್ರ ಆಹಾರದ ಪಟ್ಟಿಯಲ್ಲಿ ಏಡಿ ಮೊದಲು ಆಯ್ಕೆ ಮಾಡುವ ಆಹಾರ. ರುಚಿಕರ ಆಹಾರವಾದ ಇದರಲ್ಲಿ ಆರೋಗ್ಯಕರ ಫ್ಯಾಟ್, ಪೋಷಕಾಂಶ ಮತ್ತು ಖನಿಜಾಂಶಗಳು ಅಧಿಕವಾಗಿರುತ್ತದೆ. ಅದರಲ್ಲೂ ಕಣ್ಣಿನ ಆರೈಕೆ ಮತ್ತು ಹೃದಯ ಸಂಬಂಧಿಸಿದ ಕಾಯಿಲೆ ದೂರ ಮಾಡಬಲ್ಲದು. 

ವಾರದಲ್ಲಿ ಎರಡು-ಮೂರು ಸಲವಾದರೂ ಏಡಿ ತಿನ್ನಲು ಡಯಟ್ ತಜ್ಞರು ಶಿಫಾರಸು ಮಾಡುತ್ತಾರೆ. ಮನುಷ್ಯನ ಆರೋಗ್ಯಕ್ಕೆ ಅನಗತ್ಯ ಕೊಬ್ಬು ಸೇರದಂತೆ ಮಾಡಿ, ಅಗತ್ಯ ಪೋಷಕಾಂಶಗಳನ್ನು ಒದಗಿಸಬಲ್ಲ ಏಡಿಯನ್ನು ಆಹಾರದ ಶೇ.48ರಷ್ಟು ಸೇವಿಸಿದರೂ, ದೇಹದ ಮೇಲೆ ಯಾವುದೇ ದುಷ್ಪರಿಣಾಮವೂ ಬೀರುವುದಿಲ್ಲ. 

ಈ ಏಡಿಯಲ್ಲಿ ಏನಿದೆ? ಏನಿಲ್ಲ?

ಏಡಿಯಲ್ಲಿ ಕ್ಯಾಲ್ಸಿಯಮ್, ಕಬ್ಬಿಣಾಂಶ, ಫ್ಯಾಟ್,  ಪೋಷಕಾಂಶಗಳು, ವಿಟಮಿನ್ ಎ, ಸಿ ಮತ್ತು ಬಿ ಹೊಂದಿದೆ. ಸರಿಸುಮಾರು ಮನುಷ್ಯನ ದೇಹಕ್ಕೆ ಬೇಕಾಗುವ ಎಲ್ಲಾ ಅಂಶಗಳೂ ಈ ಸಮುದ್ರದ ಆಹಾರದಲ್ಲಿದೆ.

ಆರೋಗ್ಯಕ್ಕೇನು ಲಾಭ?

  • ದೇಹದ ತೂಕ ಕಡಿಮೆ ಮಾಡುತ್ತದೆ.
  • ಸ್ವಲ್ಪ ಪ್ರಮಾಣದಲ್ಲಿ ಕ್ಯಾಲೋರಿ ಹೊಂದಿದ್ದು, ಗುಡ್ ಫ್ಯಾಟ್ ಆದ ದೇಹಕ್ಕೆ ಅತ್ಯಗತ್ಯ. 
  • ದೇಹಕ್ಕೆ ದುಷ್ಪರಿಣಾಮ ಬೀರುವಂಥ ಯಾವುದೇ ಅಂಶಗಳು ಇದರಲ್ಲಿಲ್ಲ.
  • ದೃಷ್ಟಿ ಸಾಮಾರ್ಥ್ಯ ಹೆಚ್ಚಿಸುತ್ತದೆ.
  • ಏಡಿಯಲ್ಲಿ ವಿಟಮಿನ್ ಎ ಅಧಿಕವಾಗಿದ್ದು, ಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ ಹಾಗು ಕಣ್ಣಿನ ಪೊರೆ ಆಗುವುದನ್ನು ತಪ್ಪಿಸುತ್ತದೆ.
  • ಜೀವಕೋಶಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ
  • ಏಡಿಯಲ್ಲಿ ಸೆಲೆನಿಯಮ್ ಖನಿಜಗಳು ಹೆಚ್ಚಿರುತ್ತದೆ. ಥೈರಾಡ್ ಅಂಗಗಳನ್ನು ರಕ್ಷಿಸುವುದಲ್ಲದೆ, ಜೀವಕೋಶಗಳನ್ನು ಕಾಪಾಡುತ್ತದೆ.
  • ಹೃದಯ ಕಾಯಿಲೆ ದೂರ
  • ಕೆಟ್ಟ ಕೊಬ್ಬು ಹೃದಯಘಾತ ಸಂಭವಿಸಲು ಸಹಾಯ ಮಾಡುತ್ತದೆ.
  • ಏಡಿಯಲ್ಲಿರುವ ಸೆಲೆನಿಯಮ್ ಮತ್ತು ಕಾಪರ್ ಅಂಶಯಿರುವುದರಿಂದ ದೇಹದ ಕೆಟ್ಟ ಕೊಬ್ಬು ಕರಗಿಸುತ್ತದೆ.
  • ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಹೆಚ್ಚಾಗಿ ಜ್ವರ ಮತ್ತು ಅನಾರೋಗ್ಯ ಕಾಡುತ್ತಿರುವವರು ಏಡಿಯನ್ನು ಸೇವಿಸಬೇಕು.
  • ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. 
  • ನರಗಳ ಸಮಸ್ಯೆ ಹೊಂದಿದ್ದರೆ ಇದನ್ನು ಸೇವಿಸಬೇಕು. ಇದರಲ್ಲಿ ಝಿಂಕ್ ಮತ್ತು ಓಮೇಗಾ 3 ಫ್ಯಾಟೀ ಆ್ಯಸಿಡ್ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
  • ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
  • ವಿಟಮಿನ್ ಬಿ2 ಚರ್ಮಕ್ಕೆ ಕಾಂತಿ ಹೆಚ್ಚಿಸಿ, ಮೂಡವೆಗೆ ಪರಿಹಾರವಾಗುತ್ತದೆ.
  • ಕ್ಯಾನ್ಸರ್ ಹರಡದಂತೆ ಹಾಗು ಹೆಚ್ಚಾಗದಂತೆ ತಡೆಯುತ್ತದೆ.
click me!
Last Updated Sep 22, 2018, 4:14 PM IST
click me!