
ಪ್ರೊಟೀನ್ ದೋಸಾ ಅತ್ಯಂತ ಹೆಚ್ಚು ಪ್ರೊಟೀನ್ ಅಂಶಗಳನ್ನು ಒಳಗೊಂಡಿರುವಂತರ ಬೆಸ್ಟ್ ಬ್ರೇಕ್ ಫಾಸ್ಟ್ ಆಗಿದೆ. ವಿವಿಧ ಕಾಳುಗಳನ್ನು ಹಾಕಿ ತಯಾರು ಮಾಡುವುದರಿಂದ ಆರೋಗ್ಯಕ್ಕೂ ಪೂರಕವಾಗಿರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿಯನ್ನು ಬಳಸದೇ ಇರುವುದರಿಂದ ಡಯಾಬಿಟಿಕ್ ಪೇಶೆಂಟ್’ಗಳೂ ಕೂಡ ತಿನ್ನಲಡ್ಡಿಯಿಲ್ಲ. ಇಂತಹ ಪ್ರೊಟೀನ್ ದೋಸಾ ಮಾಡುವ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ.
ಪ್ರೊಟೀನ್ ದೋಸಾ ಮಾಡುವ ವಿಧಾನ
2 ಕಪ್ ಅಕ್ಕಿ
ಅರ್ಧ ಕಪ್ ಉದ್ದಿನಬೇಳೆ
ಅರ್ಧ ಕಪ್ ತೊಗರಿ ಬೇಳೆ
ಅರ್ಧ ಕಪ್ ಹೆಸರು ಬೇಳೆ
ಅರ್ಧ ಕಪ್ ಕಡಲೇಬೇಳೆ
ಒಂದು ಚಮಚ ಮೆಂತೆ
ಒಂದು ಹಿಡಿ ಅವಲಕ್ಕಿ
ಎಲ್ಲವನ್ನೂ ರಾತ್ರಿ ನೆನೆ ಹಾಕಿ ಬೆಳಗ್ಗೆ ದೋಸೆ ಹಿಟ್ಟಿನ ಹಾಗೆ ರುಬ್ಬಿ ಸಾಮಾನ್ಯ ದೋಸೆ ಮಾಡಿದಂತೆ ಮಾಡಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.