
ಬೀದಿ ನಾಯಿ (Stray dogs)ಗಳ ಹಾವಳಿ ಹೆಚ್ಚಾಗ್ತಿದೆ. ಬರೀ ಬೀದಿ ನಾಯಿ ಮಾತ್ರವಲ್ಲ ಸಾಕು ನಾಯಿ ಕೂಡ ದಾಳಿ ಮಾಡಿದ್ದ ವಿಡಿಯೋ ಒಂದು ಎರಡು ದಿನಗಳ ಹಿಂದೆ ಸೋಶಿಯಲ್ ಮೀಡಿಯಾ (social media)ದಲ್ಲಿ ವೈರಲ್ ಆಗಿತ್ತು. ಖಾಲಿ ರಸ್ತೆಯಲ್ಲಿ ಹೋಗಿದ್ದ ನಿಮ್ಮ ಮೇಲೆ ಎಲ್ಲಿಂದಲೂ ಓಡಿ ಬರುವ ನಾಯಿ ಬೆದರಿಸುತ್ತೆ. ಕೆಲವೊಮ್ಮೆ ದಾಳಿ ಕೂಡ ಮಾಡುತ್ತೆ. ಒಂದು ನಾಯಿ ಸಂಭಾಳಿಸೋದೆ ಕಷ್ಟ, ಹಾಗಿರುವಾಗ ಮೂರ್ನಾಲ್ಕು ನಾಯಿ ದಾಳಿ ಮಾಡಿದ್ರೆ ಅದ್ರಿಂದ ತಪ್ಪಿಸಿಕೊಳ್ಳೋದು ಹೇಳಿದಷ್ಟು ಸುಲಭ ಅಲ್ಲ. ಆ ಕ್ಷಣಕ್ಕೆ ಏನು ಮಾಡ್ಬೇಕು ತಿಳಿಯೋದಿಲ್ಲ. ನಾಯಿ ನಿಮ್ಮ ಮೇಲೆ ದಾಳಿ ಮಾಡುತ್ತೆ ಎನ್ನುವ ಸಂದರ್ಭದಲ್ಲಿ ನೀವು ಮಾಡುವ ಕೆಲ ಕೆಲ್ಸ ನಾಯಿಯನ್ನು ಮತ್ತಷ್ಟು ಆಕ್ರಮಣಕಾರಿ ಮಾಡುತ್ತೆ. ನಾಯಿ ನಿಮ್ಮಿಂದ ದೂರ ಹೋಗ್ಬೇಕು ಅಂದ್ರೆ ನೀವು ಕೆಲ ಟಿಪ್ಸ್ ಫಾಲೋ ಮಾಡಿ.
ಕಣ್ಣಲ್ಲಿ ಕಣ್ಣಿಟ್ಟು ನೋಡ್ಬೇಡಿ : ನಾಯಿ ನಿಮ್ಮ ಮೇಲೆ ಆಕ್ರಮಣ ಮಾಡುತ್ತೆ ಎನ್ನುವ ಅನುಮಾನ ಬಂದ್ರೆ ನೀವು ಯಾವುದೇ ಕಾರಣಕ್ಕೂ ನಾಯಿಯ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಪ್ರಯತ್ನ ಮಾಡ್ಬೇಡಿ. ನಾಯಿ ನಿಮ್ಮನ್ನು ದುರುಗುಟ್ಟಿಕೊಂಡು ನೋಡ್ತಿದ್ದರೂ ನೀವು ಅವುಗಳನ್ನು ನೋಡ್ಬೇಡಿ. ನೀವು ಅವುಗಳನ್ನು ನೋಡಿದಾಗ ಅದಕ್ಕೆ ನೀವು ಆಕ್ರಮಣ ಮಾಡ್ಬಹುದು ಎನ್ನುವ ಅನುಮಾನ ಬಂದು ತನ್ನನ್ನು ರಕ್ಷಿಸಿಕೊಳ್ಳಲು ನಿಮ್ಮ ಮೇಲೆ ದಾಳಿ ಮಾಡುತ್ತದೆ.
ಆತ್ಮವಿಶ್ವಾಸ ಮುಖ್ಯ : ನೀವು ನಾಯಿ ಆಕ್ರಮಣ ಮಾಡ್ತಿದ್ದಂತೆ ಕಿರುಚಾಡಬಾರದು. ನಾಯಿ ಕಡಿತವನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ದೃಢವಾದ ಸೂಚನೆ ನೀಡುವುದು. ನಾಯಿಗಳು ಧ್ವನಿ ಸೂಚನೆಗಳಿಗೆ ಬಹಳ ಸೂಕ್ಷ್ಮವಾಗಿರುತ್ತವೆ. ಆತ್ಮವಿಶ್ವಾಸದ ಧ್ವನಿಗಳಿಗೆ ಉತ್ತಮ ಪ್ರತಿಕ್ರಿಯಿ ನೀಡುತ್ವೆ. ನೀವು ಜೋರಾಗಿ ಮತ್ತು ದೃಢವಾದ ಧ್ವನಿಯಲ್ಲಿ ಮಾತನಾಡಲು ಪ್ರಾರಂಭಿಸಿದ್ರೆ ಉದಾಹರಣೆಗೆ ನಿಲ್ಲಿ, ನೋ ಅಂತ ಹೇಳಿದ್ರೆ ಅವು ನಿಮ್ಮ ಆಜ್ಞೆಯನ್ನು ಪಾಲಿಸುವ ಸಾಧ್ಯತೆ ಹೆಚ್ಚು. ಅದೇ ನೀವು ಅದ್ರ ಮೇಲೆ ಕಿರುಚಾಡಿದ್ರೆ, ಕೂಗಾಡಿದ್ರೆ ಅವು ಮತ್ತಷ್ಟು ಆಕ್ರಮಣಕಾರಿ ಆಗ್ಬಹುದು.
ಈ ಕೆಲ್ಸ ಬಹಳ ಮುಖ್ಯ : ನಾಲ್ಕೈದು ನಾಯಿ ಒಂದೇ ಕಡೆ ಕಂಡು ಬಂದಲ್ಲಿ ನೀವು ಆ ದಾರಿ ಬದಲಿಸುವುದು ಸೂಕ್ತ. ಸಾಮಾನ್ಯವಾಗಿ ನಾಯಿ ಆಕ್ರಮಣದ ಮುನ್ಸೂಚನೆ ಮೊದಲೇ ನಿಮಗೆ ಸಿಗುತ್ತದೆ. ನಾಯಿ ವರ್ತನೆಯಲ್ಲಿ ಬದಲಾವಣೆ ಕಂಡು ಬರುತ್ತದೆ. ನಾಯಿ ನಿಮ್ಮನ್ನು ದುರುಗುಟ್ಟಿ ನೋಡ್ಬಹುದು ಇಲ್ಲವೆ ಹಲ್ಲು ಕಡಿಯುವುದು, ಒಂದೇ ಸಮನೆ ಬೊಗಳುವುದು ಮಾಡ್ತಿದ್ದರೆ ಆ ಜಾಗಕ್ಕೆ ಹೋಗುವುದನ್ನು ನೀವು ತಪ್ಪಿಸಿ. ನಾಯಿಗಳಿರುವ ಜಾಗಕ್ಕೆ ಹೋಗ್ತಿದ್ದೀರಿ ಎಂಬುದು ಮೊದಲೇ ತಿಳಿದರೆ ನೀವು ಸಿಳ್ಳೆ ಅಥವಾ ನೀರಿನ ಸ್ಪೇ ಬಾಟಲ್ ಇಟ್ಟುಕೊಳ್ಳಿ. ಜೋರಾಗಿ ಸೀಟಿ ಊದಿದಾಗ ನಾಯಿ ಹೆದರುತ್ತದೆ. ಹಾಗೆ ನೀರನ್ನು ಅವುಗಳ ಮೇಲೆ ಸ್ಪ್ರೇ ಮಾಡಿದಾಗ ನಿಮಗೆ ರಕ್ಷಣೆಗೆ ಕೆಲ ಸಮಯ ಸಿಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.