ರುಚಿಯಾದ, ಹಣ್ಣಾಗಿರುವ ಪ್ರೆಶ್ ಕಲ್ಲಂಗಡಿ ಆರಿಸೋದು ಹೇಗೆ? ಇಲ್ಲಿವೆ ಸಿಂಪಲ್‌ ಟಿಪ್ಸ್

Published : Mar 11, 2025, 03:09 PM ISTUpdated : Mar 11, 2025, 03:10 PM IST
ರುಚಿಯಾದ, ಹಣ್ಣಾಗಿರುವ ಪ್ರೆಶ್ ಕಲ್ಲಂಗಡಿ ಆರಿಸೋದು ಹೇಗೆ? ಇಲ್ಲಿವೆ ಸಿಂಪಲ್‌ ಟಿಪ್ಸ್

ಸಾರಾಂಶ

ಬೇಸಿಗೆಯಲ್ಲಿ ಸಿಗುವ ಕಲ್ಲಂಗಡಿ ಹಣ್ಣನ್ನು ಖರೀದಿಸುವಾಗ ಅದರ ಮೇಲ್ಭಾಗದ ಚುಕ್ಕೆ, ಬಣ್ಣ, ತೂಕ, ಶಬ್ದ ಮತ್ತು ಹಳದಿ ಬಣ್ಣವನ್ನು ಗಮನಿಸಬೇಕು. ಇವುಗಳನ್ನು ಗಮನದಲ್ಲಿಟ್ಟುಕೊಂಡು ಕಲ್ಲಂಗಡಿ ಖರೀದಿಸಿದರೆ ಸಿಹಿಯಾದ ಹಣ್ಣು ನಿಮ್ಮದಾಗುತ್ತದೆ.

ಬೇಸಿಗೆ ಆರಂಭವಾಗಿದ್ದು, ಮಾರುಕಟ್ಟೆಗೆ ಕಲ್ಲಂಗಡಿ ಎಂಟ್ರಿ ನೀಡಿದೆ. ಬಿಸಿಲಿನ ಬೇಗೆ ಕಡಿಮೆ ಮಾಡಿಕೊಳ್ಳಲು ಜನರು ಆಯ್ಕೆ ಮಾಡಿಕೊಳ್ಳುವ ಹಣ್ಣು ಕಲ್ಲಂಗಡಿ. ಕೆಲ ದಿನಗಳಿಂದ ಕೃತಕಬಣ್ಣ ಸೇರಿಸಿ ಕಲ್ಲಂಗಡಿ ಮಾರಾಟ ಮಾಡಲಾಗ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಹಾಗಾಗಿ ಕಲ್ಲಂಗಡಿ ಖರೀದಿಸುವಾಗ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕ. ಆದ್ರೆ ಕಲ್ಲಂಗಡಿ ಮೇಲ್ಭಾಗ ಒರಟು ಆಗಿರೋದರಿಂದ ರುಚಿಯಾದ ಹಣ್ಣು ಪತ್ತೆ ಮಾಡೋದು ಸ್ವಲ್ಪ ಕಷ್ಟವಾಗುತ್ತದೆ. ಇಂದಿನ ಈ ಲೇಖನದಲ್ಲಿ ರುಚಿಯಾಗಿರೋ ಮತ್ತು ಫ್ರೆಶ್ ಕಲ್ಲಂಗಡಿ ಆಯ್ಕೆ ಮಾಡೋದು ಹೇಗೆ ಅಂತ ನೋಡೋಣ ಬನ್ನಿ. 

1.ಮೇಲ್ಭಾಗದ ಚುಕ್ಕೆ ಗಮನಿಸೋದು 
ಕಲ್ಲಂಗಡಿ ಹಣ್ಣಿನ ಮೇಲೆ ತಿಳಿ ಹಸಿರು ಮತ್ತು ಗಾಢ ಹಸಿರು ಬಣ್ಣದ ಲೈನ್‌ಗಳಿರುತ್ತವೆ. ಈ ಲೈನುಗಳೆಲ್ಲವೂ ಸಂಧಿಸುವ ಸ್ಥಳ ಅಂದ್ರೆ ತುತ್ತತುದಿಯನ್ನು ಸೂಕ್ಷ್ಮವಾಗಿ ಗಮನಿಸಿ. ಈ ಲೈನುಗಳ ಸಂಧಿಸುವ ಬಿಂದು ಚಿಕ್ಕ ಮತ್ತು ಒಣಗಿರಬೇಕು. ಹಾಗೆ ತುದಿಯ ಅಂಚಿನ ಬಳ್ಳಿಯೂ ಕೈಗೆ ಸಿಗುವಂತಿರಬೇಕು. ಈ ರೀತಿಯಾಗಿರುವ ಹಣ್ಣು ಬಳ್ಳಿಯಲ್ಲಿ ಪೂರ್ಣವಾಗಿ ಪಕ್ವವಾಗಿದೆ ಎಂದರ್ಥ. 

ಕೆಲವು ಹಣ್ಣುಗಳನ್ನು ಅವಧಿಗೆ ಮುಂಚೆಯೇ ಕೀಳಲಾಗಿರುತ್ತದೆ. ಆಗ ಕಲ್ಲಂಗಡಿಯನ್ನು ಜೋರಾಗಿ ಬಳ್ಳಿಯಿಂದ ಎಳೆಯಲಾಗಿರುತ್ತದೆ. ಹಾಗಾದಾಗ ಅಂಚಿನಲ್ಲಿ ನಿಮಗೆ ಬಳ್ಳಿ ಶೇಷ ಸಿಗಲ್ಲ. ಹಾಗೆ ತಿಳಿ ಹಸಿರು ಮತ್ತು ಗಾಢ ಹಸಿರು ಬಣ್ಣದ ಲೈನ್‌ ಸೇರುವ ಬಿಂದು ದೊಡ್ಡದಾಗಿರುತ್ತದೆ. 

2.ಕಲ್ಲಂಗಡಿ ಬಣ್ಣ
ಸಂಪೂರ್ಣವಾಗಿ ಪಕ್ವವಾಗಿರುವ ಕಲ್ಲಂಗಡಿಯ ಮೇಲ್ಭಾಗ ಗಾಢವಾದ ಹಸಿರು ಬಣ್ಣ ಹೊಂದಿರುತ್ತವೆ. ಮಸುಕಾದ ಅಥವಾ ತಿಳಿ ಹಸಿರು ಬಣ್ಣದ ಲೈನುಗಳನ್ನು ಹೊಂದಿರುವ ಹಣ್ಣನ್ನು ಅವಧಿಗೆ ಮುನ್ನವೇ ಕಟಾವು ಮಾಡಿ, ಗೋದಾಮಿನಲ್ಲಿರಿಸಿ ಹಣ್ಣು ಮಾಡಲಾಗಿರುತ್ತದೆ. 

3.ತೂಕ ಗಮನಿಸಿ
ಪಕ್ವವಾಗಿರುವ ಕಲ್ಲಂಗಡಿ ಹಣ್ಣು ತೂಕವನ್ನು ಹೊಂದಿರುತ್ತದೆ. ಪಕ್ಷವಾದ ಕಲ್ಲಂಗಡಿ ಹೆಚ್ಚು ನೀರಿನಂಶ ಹೊಂದಿರುವ ಕಾರಣ ತೂಕವಾಗಿರುತ್ತದೆ. ಕಲ್ಲಂಗಡಿ ಗಾತ್ರದಲ್ಲಿ ಚಿಕ್ಕದಾಗಿದ್ರೂ ತೂಕವನ್ನು ಹೊಂದಿದ್ರೆ ಅದು ಫ್ರೆಶ್ ಆಗಿದೆ ಎಂದು ತಿಳಿದುಕೊಳ್ಳಬೇಕು. ಖರೀದಿ ವೇಳೆ ಹಣ್ಣನ್ನು ಕೈಯಲ್ಲಿ ಹಿಡಿದುಕೊಂಡು ಅಂದಾಜು ತೂಕ ಲೆಕ್ಕ ಹಾಕಬಹುದು. ಹಣ್ಣಾದ ಕಲ್ಲಂಗಡಿ ಗಟ್ಟಿಯಾಗಿರುತ್ತದೆ. 

4. ಕಲ್ಲಂಗಡಿ ಟ್ಯಾಪ್ ಮಾಡಿ
ಕಲ್ಲಂಗಡಿಯ ಪಕ್ವತೆಯನ್ನು ಪರೀಕ್ಷಿಸಲು ಅತ್ಯಂತ ಹಳೆಯ ತಂತ್ರವೆಂದರೆ ಅದನ್ನು ನಿಧಾನವಾಗಿ ಟ್ಯಾಪ್ ಮಾಡುವುದು. ಮಾಗಿದ ಕಲ್ಲಂಗಡಿಯಿಂದ ಟೊಳ್ಳಾದ  ಶಬ್ದ ಕೇಳುತ್ತದೆ. ಪರಿಪೂರ್ಣವಾಗಿ ಹಣ್ಣಾಗದ ಕಲ್ಲಂಗಡಿ ಮೇಲೆ ಟ್ಯಾಪ್ ಮಾಡಿದಾಗ ಹೆಚ್ಚು ಶಬ್ದ ಕೇಳಿಸಲ್ಲ. ಟೊಳ್ಳಾದ ಶಬ್ದವು ಕಲ್ಲಂಗಡಿ ನೀರಿನಿಂದ ತುಂಬಿದೆ ಮತ್ತು ಪಕ್ವವಾಗಿದ ಎಂಬದನ್ನು ಸೂಚಿಸುತ್ತದೆ. 

ಇದನ್ನೂ ಓದಿ: ನಟಿ ಮೃಣಾಲ್​ ಹೀಗಾ ಕಲ್ಲಂಗಡಿ ತಿನ್ನೋದು? ವಿಡಿಯೋ ನೋಡಿ ಯುವಕರ ಬಾಯಲ್ಲಿ ನೀರು!

5.ಹಳದಿ ಬಣ್ಣ
ಬಳ್ಳಿಯಲ್ಲಿಯೇ ಕಲ್ಲಂಗಡಿ ಹಣ್ಣು ಆಗಿದ್ರೆ, ತುಂಬಾ ಸಮಯದವರೆಗೆ ನೆಲದ ಮೇಲೆಯೇ ಇರುತ್ತದೆ. ಹಾಗಾಗಿ ಕಲ್ಲಂಗಡಿ ಒಂದು ಭಾಗ ತಿಳಿ ಹಳದಿ ಬಣ್ಣಕ್ಕೆ ಬದಲಾಗುತ್ತಿರುತ್ತದೆ. ಇದು ಸಹ ಕಲ್ಲಂಗಡಿಯ ಪಕ್ವತೆಯನ್ನು ತೋರಿಸುತ್ತದೆ. ಬಿಳಿ ಅಥವಾ ಸಂಪೂರ್ಣವಾಗಿ ಹಸಿರು ಬಣ್ಣದ್ದಾಗಿದ್ದರೆ ಅದು ಹಣ್ಣಾಗಿರಲ್ಲ ಎಂದರ್ಥ. 

6. ನಯವಾದ, ಕಲೆಯಿಲ್ಲದ ಸಿಪ್ಪೆಯನ್ನು ಹುಡುಕಿ
ನಯವಾದ ಸಿಪ್ಪೆ ಮತ್ತು ಗೀರುಗಳಿಲ್ಲದ ಕಲ್ಲಂಗಡಿ ಹಣ್ಣಾಗುವ ಸಾಧ್ಯತೆ ಹೆಚ್ಚು. ಸಣ್ಣಪುಟ್ಟ ಕಲೆಗಳು ಪರವಾಗಿಲ್ಲ, ಆದರೆ ದೊಡ್ಡ ಮಾರ್ಕ್ ಅಥವಾ ಮೃದುವಾದ ಕಲೆಗಳು ಇದ್ರೆ ಅದನ್ನು ಬಳ್ಳಿಯಿಂದ ಬೇರ್ಪಡಿಸಿ ತುಂಬಾ ಸಮಯವಾಗಿದೆ ಎಂದರ್ಥ.

ಇದನ್ನೂ ಓದಿ: ಕಲ್ಲಂಗಡಿ ಹಣ್ಣು ಫ್ರಿಡ್ಜ್‌ನಲ್ಲಿಟ್ಟು ತಿನ್ನೋ ಅಭ್ಯಾಸವಿದ್ಯಾ? ಆರೋಗ್ಯಕ್ಕೆಷ್ಟು ಕೆಟ್ಟದ್ದು ಗೊತ್ತಿರ್ಲಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮನೀಶ್ ಮಲ್ಹೋತ್ರಾ ಟಿಶ್ಯೂ ಸೀರೆಯಲ್ಲೆ ಆಲಿಯಾ ಭಟ್ ಗ್ಲಾಮರ್: ಮದುವೆ ಸೀಸನ್‌ನ ಹೊಸ ಟ್ರೆಂಡ್!
ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!