ಇದು ಟಾಯ್ಲೆಟ್ ವಿಷ್ಯ, ತುಸು ಡೇಂಜರ್ ಶಿಷ್ಯ....

By Web Desk  |  First Published Jul 19, 2019, 3:01 PM IST

ಥೋ ಏನಾಪ್ಪಾ ಇವರು, ಈ ಬಗ್ಗೆಯೂ ಮಾತನಾಡ್ಲಿಕ್ಕೆ, ಸ್ಟಾರ್ಟ್ ಮಾಡಿದ್ದಾರೆ  ಎಂದು ಮೂಗು ಮುರೀಬೇಡಿ. ಸುದ್ದಿ ಓದಿ ನಿರ್ಧರಿಸಿ ನಾವು ಏನು ಹೇಳಲಿಕ್ಕೆ ಹೊರಟಿದ್ದೇವೆ ಎಂದು. ನಿಮ್ಮ ದೇಹದ ಕೊಳಕನ್ನು ಹೊರ ಹಾಕಲೇ ಬೇಕು. ಆದರೆ, ದಿನಕ್ಕೆ ಎಷ್ಟು ಬಾರಿ? ಇಲ್ಲಿದೆ ಆ ವಿಷಯ. 


OMG!ಅಬ್ಬಾ, ಈ ಕೊಳಕು  ವಾಸನೆಯನ್ನು ಸಹಿಸೋದೇ ಕಷ್ಟ. ನಮ್ಮ ದೇಹದ ಮೇಲೆ, ಮನುಷ್ಯನ ಜನುಮದ ಬಗ್ಗೆಯೇ ಹೇಸಿಗೆ ಬರುವಂತೆ ಮಾಡಿಕೊಂಡಿರುತ್ತಾರೆ ಕೆಲವರು. ಅಪರೂಪಕ್ಕೊಮ್ಮೆಯೂ ಕಕ್ಕಸ್ಸಿಗೆ ಹೋಗದೇ, ದೇಗುಲದಂತಿರೋ ದೇಹವನ್ನು ಕೊಳಕು ಮಾಡೋ ಮಂದಿ ಮಧ್ಯೆ ಮಧ್ಯೆ ಇರುತ್ತಾರೆ. ಕಿಕ್ಕಿರಿದು ತುಂಬಿರುವ ಮೆಟ್ರೋ, ಬಿಎಂಟಿಸಿಯಲ್ಲಿ ತಮ್ಮ 'ಪುರು...'ಷ ತೋರಿಸಿ, ಮತ್ತೊಬ್ಬರು ನಿಲ್ಲಲ್ಲಿಕ್ಕೆ ಆಗದಂತ ಪರಿಸ್ಥಿತಿ ಸೃಷ್ಟಿಸುತ್ತಾರೆ. ಅಷ್ಟಕ್ಕೂ ದಿನಕ್ಕೆ ಎಷ್ಟು ಸಾರಿ ಟಾಯ್ಲೆಟ್ಟಿಗೆ ಹೋದರೆ ಆರೋಗ್ಯಕ್ಕೆ ಒಳಿತು? 

ಟಾಯ್ಲೆಟ್ ಹುಡುಕಲು ಮೊಬೈಲ್ ಆ್ಯಪ್‌: ಟೂರಿಸಂ ಐಡಿಯಾ ಟಾಪ್!

Scandianvian Journal of Gastroenterology ಸಂಸ್ಥೆ ನಡೆಸಿದ ಸಂಶೋಧನೆಯ ವರದಿ ಪ್ರಕಾರ ಒಬ್ಬಆರೋಗ್ಯವಂತ ಮನುಷ್ಯ ದಿನಕ್ಕೆ ಮೂರು ಸಲ ಟಾಯ್ಲೆಟ್ಟಿಗೆ ಹೋಗುತ್ತಾನಂತೆ! ಅಚ್ಚರಿ ಏನೆಂದರೆ ಒಂದು ದಿನ ಒಂದು ಸಮಯಕ್ಕೆ ಹೋದರೆ ಮಾರನೇ ದಿನವೂ ಅದೇ ಸಮಯಕ್ಕೆ ಬಹಿರ್ದೆಸೆಗೆ ಹೋಗಬೇಕು ಎಂದು ಮನದ ಅಲಾರಾಂ ಸೂಚಿಸುತ್ತಂತೆ! 

ಹೆಣ್ಣುಮಕ್ಕಳಲ್ಲಿ ಪಿರಿಯಡ್ಸ್ ಟೈಮಲ್ಲಿ ಪ್ರೋಜೆಸ್ಟರಾನ್ ಹಾಗೂ ಇಸ್ಟ್ರೋಜನ್  ಹಾರ್ಮೂನ್ ರಿಲೀಸ್ ಆಗುತ್ತದೆ. ನಾರ್ಮಲ್ ದಿನಗಳಿಗಿಂತ ಹೆಚ್ಚಾಗಿ ಟಾಯ್ಲೆಟ್‌ಗೆ ಹೋಗುವಂತಾಗುತ್ತದೆ. ಇಲ್ಲವೇ ಕೆಲವರಿಗೆ ಮಲಬದ್ಧತೆಯೂ ಕಾಡುವುದಿದೆ. ಇನ್ನು ಕಕ್ಕಸ್ಸಿಗೆ ಹೋಗೋ ಮುನ್ನ ಪುರ್ ಬಿಡೋದು ಒಳ್ಳೇಯದಂತೆ! ಇದು ದೇಹದ ಒತ್ತಡವನ್ನು ಕಡಿಮೆ ಮಾಡುತ್ತದೆ, ಎನ್ನುತ್ತದೆ ಅಧ್ಯಯನ.  ಕಕ್ಕಸಿನ ದುರ್ವಾಸನೆಗೆ ಸೇವಿಸಿದ ಆಹಾರವೇ ಮುಖ್ಯ ಕಾರಣವಂತೆ. ಸಣ್ಣದಾಗಿ ಪುರ್ ಬಿಟ್ಟರೆ, ದೇಹದ ಮೇಲೆ ಬೀಳುವ ಒತ್ತಡ ಕಡಿಮೆಯಾಗೋಲ್ವಂತೆ! ದೊಡ್ಡದಾಗಿ ಬಿಟ್ಟರೆ ಬಾಡಿ ಸ್ಟ್ರೆಸ್ ಫ್ರೀ ಆಗುತ್ತಂತೆ. 

ನಾರ್ಮಲ್ ಪೂಪ್ ಅಂದರೇನು?

Latest Videos

ಯಾವುದೇ ರೀತಿಯ ತೊಂದರೆ ಇಲ್ಲದೇ ಸುಲಭವಾಗಿ ಬಹಿರ್ದೆಸೆಗೆ ಹೋಗುವುದು, ಹಾಗೆ ಹೋದಾಗ ಹೊಟ್ಟೆ ಭಾರ ಕಡಿಮೆ ಆದಂತೆ ಫೀಲ್ ಆದರೆ, ಅದು ಆರೋಗ್ಯದ ಲಕ್ಷಣವಂತೆ. 

ಪಬ್ಲಿಕ್ ಟಾಯ್ಲೆಟ್‌ಗಿಂತಲೂ ATM ಗಲೀಜು!

ಅಬ್‌ನಾರ್ಮಲ್ ಪೂಪ್ ಅಂದರೇನು?

ದಿನಕ್ಕೆ 5-6 ಸಲ ಟಾಯ್ಲೆಟ್‌ಗೆ ಹೋಗುವುದು ಹಾಗೂ ಸಣ್ಣ ಸ್ವಲ್ಪ ಸ್ವಲ್ಪವೇ ಪೂಪ್ ಮಾಡುವುದು ಅಸ್ವಾಭಾವಿಕವಂತೆ. ಕಕ್ಕಸ್ಸು ಮಾಡುವಾಗ ಉರಿ ಅಥವಾ ರಕ್ತ ಕಾಣಿಸಿಕೊಂಡರೆ ತಕ್ಷಣವೇ ವೈದ್ಯರನ್ನು ಭೇಟಿಯಾಗುವುದು ಒಳಿತು. ಅಪರೂಪಕ್ಕೊಮ್ಮೆ ಒಂದೆರಡು ದಿನ ಕಕ್ಕಸ್ಸಿಗೆ ಹೋಗದಿದ್ದರೂ ಪರ್ವಾಗಿಲ್ಲವೆನ್ನುತ್ತಾರೆ ಕೆಲವು ತಜ್ಞರು. ಅಕಸ್ಮಾತ್ ಟಾಯ್ಲೆಟ್ಟಿಗೆ ಹೋಗದಿದ್ದರೂ ಹೊಟ್ಟೆಯುಬ್ಬರ, ನೋವು, ರಗಳೆ ಏನು ಆಗಬಾರದಷ್ಟೇ. ಅಕಸ್ಮಾತ್ ಇಂಥ ಲಕ್ಷಣಗಳು ಕಂಡು ಬಂದರೆ ಆರೋಗ್ಯದ ಲಕ್ಷಣವಲ್ಲ.

ಒಟ್ಟಿನಲ್ಲಿ ಆರೋಗ್ಯವಾಗಿರಲು ಸೂಕ್ತ ಸಮಯಕ್ಕೆ, ಅಗತ್ಯ ಪೌಷ್ಠಿಕ ಆಹಾರ ಹಾಗೂ ದಿನಕ್ಕೆ 3-5 ಲೇಟರ್ ನೀರು ಕುಡಿಯುವದು ಕಡ್ಡಾಯ. 
 

click me!