ಸಿಹಿಯಾದ ಜೇನು ಬೊಜ್ಜು ಕರಗಿಸುವುದರೊಂದಿಗೆ ರೋಗಗಳನ್ನು ಶಮನ ಮಾಡುತ್ತದೆ..!

By Suvarna Web DeskFirst Published Mar 6, 2018, 4:13 PM IST
Highlights

ಜೇನುತುಪ್ಪವು ಹೂವುಗಳಿಂದ ಕೀಟಗಳು ಸಂಗ್ರಹಿಸಿ ದೊರೆಯುವಂತಹ ವಿಶೇಷವಾದ ಔಷಧಿಯ ಗುಣವನ್ನು ಹೊಂದಿರುವ ದ್ರವ್ಯವಾಗಿದೆ. ಈ ದ್ರವ್ಯದ ಔಷಧೀಯ ಗುಣಗಳ ಬಗ್ಗೆ ಹೆಚ್ಚಾಗಿ ಜನರಲ್ಲಿ ಅರಿವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಇದರ ಮೇಲೆ ಜನರ ಒಲವು ಹೆಚ್ಚಿದೆ. ಇದರ ಆರೋಗ್ಯಕಾರಿ ಗುಣಗಳ ಬಗ್ಗೆಯೂ ಅರಿವು ಮೂಡುತ್ತಿದೆ.

ಹಲವು ಔಷಧಗಳೊಂದಿಗೆ ಇದನ್ನು ಅನುಪಾತವಾಗಿ ಉಪಯೋಗಿಸಲಾಗುತ್ತದೆ.  ಆದರೆ ಇದನ್ನು ಬಿಸಿ ಪದಾರ್ಥಗಳೊಂದಿಗೆ ಉಪಯೋಗಿಸಬಾರದು. ಅಲ್ಲದೇ ಬಿಸಿ ಮಾಡಿಯೂ ಕೂಡ ಇದನ್ನು ಉಪಯೋಗಿಸುವುದರಿಂದ ಯಾವುದೇ ರೀತಿಯಾದ ಪ್ರಯೋಜನವಿಲ್ಲ.

ಜೇನುತುಪ್ಪದ ಉಪಯೋಗ

*20 ಮಿಲಿ ಜೇನುತುಪ್ಪವನ್ನು 2 ಲೀಟರ್ ನೀರಿಗೆ ಬೆರೆಸಿ ಆ ನೀರನ್ನು ದಿನನಿತ್ಯ ಸೇವಿಸಿದರೆ ಬೊಜ್ಜು ಕರಗಿ ನೀಳಕಾಯ ನಿಮ್ಮದಾಗುತ್ತದೆ.

*ಜೇನುತುಪ್ಪವನ್ನು ತುಳಸಿ ರಸದೊಂದಿಗೆ ಸೇವಿಸಿದರೆ ಕೆಮ್ಮು, ನೆಗಡಿ ಶಮನವಾಗುತ್ತದೆ.

*ಒಂದು ಚಮಚ ಜೇನುತುಪ್ಪವನ್ನು ಅರ್ಧ ಚಮಚ ಬೆಟ್ಟದ ನೆಲ್ಲಿಕಾಯಿಯ ಪುಡಿಯೊಂದಿಗೆ ರಾತ್ರಿ ಹೊತ್ತು ಸೇವಿಸಿದರೆ ಕಣ್ಣಿನ ದೃಷ್ಟಿ ವೃದ್ಧಿಸುತ್ತದೆ.

*ಜೇನನ್ನು ಬಾಳೆಹಣ್ಣಿನೊಂದಿಗೆ ಸೇವಿಸಿದರೆ ಅದು ಬಲವನ್ನು ವೃದ್ಧಿಸುತ್ತದೆ

*ರಾತ್ರಿ ಮಲಗುವಾಗ ಮೊಡವೆಗಳಿಗೆ ಜೇನನ್ನು ಲೇಪಿಸಿ ಬೆಳಗ್ಗೆ ತೊಳೆದರೆ  ಮೊಡವೆ ನಿವಾರಣೆಯಾಗುತ್ತದೆ

*ಜೇನನ್ನು ಗಾಯಗಳಿಗೂ ಕೂಡ ಲೇಪಿಸಬಹುದಾಗಿದೆ

click me!