ಡೆಂಗ್ಯೂ ಪೀಡಿತರ ಪಾಲಿಗೆ ಆಪದ್ಭಾಂದವ- ಹಿಟ್ ಪ್ಲೇಟ್‌ಲೆಟ್ ಹೆಲ್ಪ್‌ಲೈನ್

By Isthiyakh Sayed  |  First Published Oct 5, 2018, 6:31 PM IST

ಡೆಂಗ್ಯೂ ವೈರಸ್, ರಕ್ತದಲ್ಲಿರುವ ರಕ್ತಕಣಗಳನ್ನು ನಾಶಮಾಡುವ ಮೂಲಕ ಆಂತರಿಕ ರಕ್ತಸ್ರಾವ ಹಾಗೂ ಇನ್ನಿತರ ಜಟಿಲ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅಂತಹ ಕ್ಲಿಷ್ಟಕರ ಸಂದರ್ಭದಲ್ಲಿ ರೋಗಿಗಳ ಜೀವ ಉಳಿಸಲು ರಕ್ತಕಣ ದಾನಿಗಳ ಅವಶ್ಯಕತೆ ಹಾಗೂ ಲಭ್ಯತೆ ಬಹಳ ಅನಿವಾರ್ಯವಾಗಿರುತ್ತದೆ. ಇಂತಹ ಸನ್ನಿವೇಶದಲ್ಲಿ ಹಿಟ್ ರಕ್ತಕಣ ಸಹಾಯವಾಣಿ- 78 78 78 20 20- ಆಪದ್ಭಾಂದವನಂತಿದೆ.  ಡೆಂಗ್ಯೂ ರೋಗಿಗಳಿಗೆ ರಕ್ತಕಣಗಳ ಅವಶ್ಯಕತೆಯಿದ್ದಾಗ ಈ ಸಹಾಯವಾಣಿಗೆ ಕರೆ ಮಾಡಬಹುದು.


ದೇಶದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಕ್ತ, ರಕ್ತಕಣಗಳು [ಪ್ಲೇಟ್‌ಲೆಟ್] ಮತ್ತು ರಕ್ತಪೂರಣಕ್ಕೆ [Blood Transfusion] ಬೇಡಿಕೆ ಹೆಚ್ಚಾಗಿದೆ.  ಈ ಬೇಡಿಕೆಯನ್ನು ಸಮರ್ಪಕವಾಗಿ ನಿಭಾಯಿಸುವಂತಾಗಲು ಗಾದ್ರೆಜ್ ಹಿಟ್ ಮತ್ತು ಆಪೋಲೋ ಆಸ್ಪತ್ರೆಯು ಜಂಟಿಯಾಗಿ, ರಕ್ತಕಣ ದಾನಿಗಳ ಆನ್‌ಲೈನ್ ಸಮುದಾಯವನ್ನು ಕಟ್ಟಿದೆ.  ಈ ವಿಶಿಷ್ಟವಾದ ವ್ಯವಸ್ಥೆಯು ಇದೀಗ 2 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಡೆಂಗ್ಯೂವಿನಿಂದ ಗಂಭೀರವಾಗಿ ಬಳಲುತ್ತಿರುವ ರೋಗಿಗಳಿಗೆ ಸಕಾಲದಲ್ಲಿ ರಕ್ತಕಣ ಸಿಗುವಂತಾಗಲು 7878782020 ಕಾರ್ಯಮಗ್ನವಾಗಿದೆ.   

Tap to resize

Latest Videos

ರಕ್ತಕಣ ದಾನ ಯಾಕೆ ಮುಖ್ಯ?

ಡೆಂಗ್ಯೂ ವೈರಸ್, ರಕ್ತದಲ್ಲಿರುವ ರಕ್ತಕಣಗಳನ್ನು ನಾಶಮಾಡುತ್ತದೆ. ಪರಿಣಾಮವಾಗಿ ರೋಗಿಯಲ್ಲಿ ಆಂತರಿಕ ರಕ್ತಸ್ರಾವ ಹಾಗೂ ಇನ್ನಿತರ ಸಂಕೀರ್ಣ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಒಂದುವೇಳೆ ರಕ್ತಕಣಗಳು 20,000/cu.mm ಕ್ಕಿಂತ ಕಡಿಮೆಯಾದಲ್ಲಿ, ರೋಗಿಗೆ ತುರ್ತಾಗಿ ರಕ್ತ ವರ್ಗಾವಣೆ ಮಾಡುವ ಅಗತ್ಯವಿರುತ್ತದೆ.  ಈ ಸಂದರ್ಭದಲ್ಲಿ, ರೋಗಿಗಳ ಜೀವ ಉಳಿಸಲು ರಕ್ತಕಣ ದಾನಿಗಳ ಅವಶ್ಯಕತೆ ಹಾಗೂ ಲಭ್ಯತೆ ಬಹಳ ಅನಿವಾರ್ಯವಾಗಿರುತ್ತದೆ. ರಕ್ತದ ಹಾಗೆ ರಕ್ತಕಣಗಳನ್ನು ಬಹಳ ದಿನ ಸಂಗ್ರಹಿಸಿಡಲು ಸಾಧ್ಯವಿಲ್ಲ. ರಕ್ತಕಣಗಳನ್ನು ಬರೇ 5 ದಿನ ಸಂಗ್ರಹಿಸಿಡಬಹುದು. ರಕ್ತಕಣಗಳು ಹಾಗೂ ಅವುಗಳ ದಾನದ ಬಗ್ಗೆಗಿರುವ ಅರಿವಿನ ಕೊರತೆಯು ಪರಿಸ್ಥಿತಿಯನ್ನು ಇನಷ್ಟು ಬಿಗಡಾಯಿಸುತ್ತದೆ. ಅದುದರಿಂದ ರಕ್ತಕಣ ದಾನಿಗಳ ಸಮುದಾಯವನ್ನು ಕಟ್ಟುವುದು ಅತೀ ಅವಶ್ಯವಾಗಿದೆ.

7878782020 ಹಿಟ್ ರಕ್ತಕಣ [ಪ್ಲೇಟ್‌ಲೆಟ್] ಸಹಾಯವಾಣಿ ಬಗ್ಗೆ

ಡೆಂಗ್ಯೂ ಪೀಡಿತ ರೋಗಿಗಳಿಗೆ ಸಕಾಲದಲ್ಲಿ ನೆರವಾಗುವ ನಿಟ್ಟಿನಲ್ಲಿ ಗೋದ್ರೆಜ್ ಹಿಟ್ ಮತ್ತು ಅಪೋಲೋ ಆಸ್ಪತ್ರೆ ಜಂಟಿಯಾಗಿ ರಕ್ತಕಣದಾನಿಗಳ ಆನ್‌ಲೈನ್ ಸಮುದಾಯವನ್ನು ಕಟ್ಟಿದೆ.  ಈಗಾಗಲೇ ಸುಮಾರು 1 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಇದರಲ್ಲಿ ನೋಂದಾಯಿಸಿಕೊಂಡಿದ್ದಾರೆ.  ಈ ಕಾರ್ಯಕ್ರಮದ ಭಾಗವಾಗಿ  ಹಿಟ್, ರಕ್ತಕಣ ಸಹಾಯವಾಣಿಯನ್ನು [7878782020] ಆರಂಭಿಸಿದೆ. ಸದ್ಯಕ್ಕೆ ದೇಶದ 6 ಮಹಾನಗರಗಳಲ್ಲಿ- ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್- ಈ ಸಹಾಯವಾಣಿಯು ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ.  ರಕ್ತಕಣದ ಅಗತ್ಯವಿರುವವರು ಹಾಗೂ ರಕ್ತಕಣ ದಾನಿಗಳಾಗಬಯಸುವವರು ಈ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ.

ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ , ಹಿಟ್ ರಕ್ತಕಣ ಸಹಾಯವಾಣಿಯು ಆಪದ್ಭಾಂದವನಂತಿದೆ.  ಡೆಂಗ್ಯೂ ರೋಗಿಗಳಿಗೆ ರಕ್ತಕಣಗಳ ಅವಶ್ಯಕತೆಯಿದ್ದಾಗ ಈ ಸಹಾಯವಾಣಿಗೆ ಕರೆ ಮಾಡಬಹುದು.

ಈ ಸಂಖ್ಯೆಯನ್ನು ನಿಮ್ಮ ಬಳಿಯೂ ಸೇವ್ ಮಾಡಿಟ್ಟುಕೊಳ್ಳಿ, ಹಾಗೂ ನಿಮ್ಮ ಗೆಳೆಯರು ಮತ್ತು ಸಂಬಂಧಿಕರೊಂದಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ #HitDengueBack
 
ರಕ್ತಕಣ ದಾನಿಗಳಾಗಿ ನೋಂದಾಯಿಸಲು http://www.godrejhit.com/trackthebite/ ಇಲ್ಲಿ ಕ್ಲಿಕ್ ಮಾಡಿ!

click me!