ವಧುವಿನ ಕೈಯಿಂದ ಸ್ವೀಟ್ ತಿನ್ನೋಕೆ ನಿರಾಕರಿಸಿದ ವರ, ಸರ್ಕಾರಿ ನೌಕರನಾ ಅಂತಿದ್ದಾರೆ ನೆಟ್ಟಿಗರು!

Published : Mar 19, 2023, 11:05 AM ISTUpdated : Mar 19, 2023, 01:04 PM IST
ವಧುವಿನ ಕೈಯಿಂದ ಸ್ವೀಟ್ ತಿನ್ನೋಕೆ ನಿರಾಕರಿಸಿದ ವರ, ಸರ್ಕಾರಿ ನೌಕರನಾ ಅಂತಿದ್ದಾರೆ ನೆಟ್ಟಿಗರು!

ಸಾರಾಂಶ

ಮದುವೆ ಎಲ್ಲರ ಪಾಲಿಗೂ ಸ್ಪೆಷಲ್ ಡೇ. ಖುಷಿಯ ಈ ಸಂದರ್ಭದಲ್ಲಿ ವಧು-ವರರು ಪರಸ್ಪರ ಸ್ವೀಟ್ ತಿನ್ನಿಸಿ ಖುಷಿ ಪಡುತ್ತಾರೆ. ಆದ್ರೆ ಇಲ್ಲೊಂದು ಮದ್ವೆಯಲ್ಲಿ ವರ ವಧುವಿನ ಕೈಯಿಂದ ಸ್ವೀಟ್ ತಿನ್ನೋಕೆ ನಿರಾಕರಿಸಿದ್ದಾನೆ. ಮುಂದೆ ಆಗಿದ್ದೇನು?

ಹಿಂದೆಲ್ಲಾ ಮದುವೆ ಅಂದ್ರೆ ನೂರಾರು ಜನ್ಮದ ಬಂಧ ಎಂಬಂತೆ ಇರುತ್ತಿತ್ತು. ಹಿರಿಯರು ನಿಂತು ಮಾಡಿದ ಮದುವೆಯಲ್ಲಿ ಗಂಡ-ಹೆಂಡತಿ ಸಾಯೋವರೆಗೂ ಪ್ರೀತಿ, ನಂಬಿಕೆಯಿಂದ ಜೊತೆಯಾಗಿ ಇರ್ತಾ ಇದ್ರು. ಮದುವೆಯನ್ನು ನಾಲ್ಕೈದು ದಿನಗಳ ಕಾಲ ಹಬ್ಬದಂತೆ ಆಚರಿಸಲಾಗ್ತಿತ್ತು. ಆದರೆ ಈಗಂತೂ ಬೇಕಾ ಬೇಡ್ವಾ ಎಂಬಂತೆ ಮದುವೆ ನಡೆಯುತ್ತೆ. ಈಗಾಗ್ಲೇ ಲವ್‌, ಬ್ರೇಕಪ್ ಅಂತ ಆಗಿರೋರು ಯಾರದ್ದೋ ಒತ್ತಾಯಕ್ಕೆ ಆಗುವಂತೆ ಮದುವೆ ಆಗ್ತಾರೆ. ಮನೆಯವರು ತೋರಿಸಿದ ಹುಡುಗ-ಹುಡುಗಿಗೆ ತಾಳಿ ಕಟ್ಟುತ್ತಾರೆ. ಮದುವೆಯ ಶಾಸ್ತ್ರಗಳನ್ನು ಪಾಲಿಸುವ ವ್ಯವಧಾನವೂ ಅವರಿಗಿರುವುದಿಲ್ಲ. ಅದರಲ್ಲೂ ಭಾರತೀಯ ಮದುವೆ ಯಾವಾಗಲೂ ಹಲವು ಹೈಡ್ರಾಮಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತದೆ. ಅದಕ್ಕೆ ಸಂಬಂಧಿಸಿದ ವೀಡಿಯೋಗಳು ವೈರಲ್ ಆಗುತ್ತದೆ. 

ಸ್ವೀಟ್ ನಿರಾಕರಿಸಿದ ವರ, ಮದುವೆ ದಿನಾನೂ ಇದೆಂಥಾ ವರ್ತನೆ!
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಮದುವೆ (Wedding) ಔತಣದಲ್ಲಿ ವಧು, ವರನಿಗೆ ಸಿಹಿಯನ್ನು ತಿನ್ನಿಸಲು ಯತ್ನಿಸುತ್ತಾಳೆ. ಆದರೆ ಇದನ್ನು ವರ (Groom) ನಿರಾಕರಿಸುವುದನ್ನು ನೋಡಬಹುದು. ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ವಧು (Bride) ಮತ್ತು ವರರು ತಮ್ಮ ಕುಟುಂಬ ಸದಸ್ಯರ ಸುತ್ತಲೂ ಮದುವೆಯ ವೇದಿಕೆಯಲ್ಲಿ ನಿಂತಿರುವುದನ್ನು ಕಾಣಬಹುದು. ವರಮಾಲಾ ಶಾಸ್ತ್ರದ ನಂತರ ವಧು ನಗುತ್ತಾ ವರನಿಗೆ ಸ್ಪೂನ್‌ನಲ್ಲಿ  ಸಿಹಿ (Sweet) ತಿನ್ನಿಸಲು ಪ್ರಯತ್ನಿಸುತ್ತಾಳೆ. ಆದರೆ ವರನ ಮುಖದಲ್ಲಿ ಯಾವುದೇ ಭಾವನೆ (Feelings) ವ್ಯಕ್ತವಾಗುವುದಿಲ್ಲ. ಮಾತ್ರವಲ್ಲ ಆತ ಸಿಹಿಯನ್ನು ತಿನ್ನಿಸಲು ನಿರಾಕರಿಸುತ್ತಾನೆ. 

ವರದಕ್ಷಿಣೆಯಾಗಿ ಫಾರ್ಚೂನರ್ ಕಾರೇ ಬೇಕಂತೆ, ಮಂಟಪದಿಂದ್ಲೇ ಎದ್ದು ಹೋದ ವರ !

ವರನ ವರ್ತನೆಯಿಂದ ಮುಜುಗರಕ್ಕೊಳಗಾದ ವಧು
ದಂಪತಿಗಳ ಪಕ್ಕದಲ್ಲಿ ನಿಂತಿರುವ ಸಂಬಂಧಿ ಸಿಹಿತಿಂಡಿಯನ್ನು ತಿನ್ನುವಂತೆ ವರನಿಗೆ ಹೇಳುವುದನ್ನು ನೋಡಬಹುದು. ಆದರೆ ವರನು ಅವರ ಮಾತಿನಂತೆ ನಡೆಯುವುದಿಲ್ಲ ಮತ್ತು ವಧುವಿನ ಕೈಯಿಂದ ಸಿಹಿ ತಿನ್ನುವುದಿಲ್ಲ. ಇದರಿಂದ ವಧು ಮುಜುಗರಕ್ಕೊಳಗಾಗುತ್ತಾಳೆ. ನಂತರ ಸ್ವೀಟ್‌ನ್ನು ಟ್ರೇ ಮೇಲೆ ಇಡುವುದನ್ನು ನೋಡಬಹುದು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆದ ಕೂಡಲೇ ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ವರನಿಗೆ ಏನಾಗಿದೆ ಎಂದು ಜನ ಪ್ರಶ್ನಿಸಿದ್ದಾರೆ. ಒಬ್ಬ ಬಳಕೆದಾರ ಹೀಗೆ ಮಾಡುವುದು ತಪ್ಪು ಎಂದು ಹೇಳಿದ್ದಾನೆ. ಮತ್ತೊಬ್ಬ'ಇದು ಖಂಡಿತಾ ಸರ್ಕಾರಿ ನೌಕರಿಯಿರುವ ವರ' ಎಂದು ಕಾಮೆಂಟ್ ಮಾಡಿದ್ದಾನೆ. ಇನ್ನೊಬ್ಬ ವ್ಯಕ್ತಿ ಮದುವೆ ದಿನವೇ ಹುಡುಗ ಇಂಥಾ ವರ್ತನೆ ತೋರಿಸಬೇಕಿತ್ತಾ ಎಂದು ಹೀಗಳೆದಿದ್ದಾರೆ.

ಮದ್ವೆಯಾದ ಒಂದೇ ಗಂಟೆಯಲ್ಲಿ ಡಿವೋರ್ಸ್‌, ವಧುವಿಗೆ ತನ್ನ ತಮ್ಮನ ಜೊತೆಯೇ ಮದ್ವೆ ಮಾಡಿಸಿದ ವರ!

ಎಣ್ಣೆ ಏಟಿಗೆ ತನ್ನದೇ ಮದುವೆಯನ್ನು ಮರೆತ ವರ!
ಕುಡಿದ ಮತ್ತಿನಲ್ಲಿ ಮನೆ ದಾರಿ, ಮತ್ತೊಬ್ಬರ ಪರಿಚಯ ಮರೆತು ಹೋಗೋದು ಸಹಜ. ಆದ್ರೆ ಇಲ್ಲೊಬ್ಬಾತ ಅದೆಷ್ಟರಮಟ್ಟಿಗೆ ಎಣ್ಣೆ ಮತ್ತಿನಲ್ಲಿದ್ದ ಅಂದ್ರೆ ಡ್ರಿಂಕ್ಸ್ ಆಗಿ ಟೈಟಾಗಿ ಬಿಟ್ಟು ಇವತ್ತು ತನ್ನ ಮದ್ವೆ (Marriage) ಅನ್ನೋದನ್ನೇ ಮರೀತಿದ್ದಾನೆ. ಬಿಹಾರದಲ್ಲಿ ಇಂಥಾ ವಿಲಕ್ಷಣ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ಸಿಕ್ಕಾಪಟ್ಟೆ ಡ್ರಿಂಕ್ಸ್ ಮಾಡಿದ ಪರಿಣಾನ ತನ್ನ ಸ್ವಂತ ಮದುವೆಗೆ ಹಾಜರಾಗಲು ಮರೆತಿದ್ದಾನೆ. ಬಿಹಾರದ ಭಾಗಲ್ಪುರದ ಸುಲ್ತಂಗಂಜ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆಯ ಹಿಂದಿನ ರಾತ್ರಿ ವರ ಮದ್ಯ (Alcohol) ಸೇವಿಸಿದ್ದ. ಮದ್ಯದ ಅಮಲಿನಲ್ಲಿ ಎಲ್ಲವೂ ಮರೆತು ಹೋಗಿದ್ದು, ಅದರಲ್ಲಿ ತನ್ನ ಮದುವೆಯೇ ಇವತ್ತು ಎಂಬುದು ಸಹ ಮರೆತುಹೋಗಿದೆ. 

ವರನಿಗೆ ಪ್ರಜ್ಞೆ ಬಂದಾಗ ವಧು (Bride) ಆತನನ್ನು ಮದುವೆಯಾಗಲು ನಿರಾಕರಿಸಿದಳು. ತನ್ನ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳದ ವ್ಯಕ್ತಿಯೊಂದಿಗೆ ತನ್ನ ಜೀವನವನ್ನು ಕಳೆಯಲು ಸಾಧ್ಯವಿಲ್ಲ ಎಂದು ವಧು (Bride) ಹೇಳಿದಳು. ಮಾತ್ರವಲ್ಲ, ವಧುವಿನ ಮನೆಯವರು ಮದುವೆಯ ವ್ಯವಸ್ಥೆಗೆ ಖರ್ಚು ಮಾಡಿದ ಹಣವನ್ನು ಹಿಂದಿರುಗಿಸುವಂತೆ ವರನ (Groom) ಕುಟುಂಬಕ್ಕೆ ಒತ್ತಾಯಿಸಿದರು. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಸಮಸ್ಯೆಯನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಯರ್ ಆಂಡ್ ಬ್ಯಾಕ್ ಟು ಬ್ಯಾಕ್ ಪಾರ್ಟಿ ಮೋಜಿನ ಜೊತೆ ಡಬಲ್ ನೋವು ನೀಡುತ್ತೆ
ದಿನಕ್ಕೆರಡೇ ಸಿಗರೇಟ್ ಸೇದೋದು ಮಗಾ, ಇಷ್ಟು ಧಮ್ಮೆಳೆದ್ರೆನಾಗುತ್ತೆ ಅನ್ನೋರಿಗೆ ಉತ್ತರ ಇಲ್ಲಿದೆ