
ಡೇಟಿಂಗ್ ಆ್ಯಪ್ಸ್ , ಮ್ಯಾಟ್ರಿಮೋನಿ ಸೈಟ್ ಮೂಲಕ ವರನ ಹುಡುಕಾಡಕ್ಕೆ ಯುವತಿ ಮನಸ್ಸು ಮಾಡಲಿಲ್ಲ. ಆ್ಯಪ್‌ಗಳಿಂದ ಯುವತಿ ಬೇಸತ್ತಿದ್ದರು. ಇಷ್ಟೇ ಅಲ್ಲ ಜೀವನ ಸಂಗಾತಿಯನ್ನು ಡೇಟಿಂಗ್ ಆ್ಯಪ್, ಹೀಗಾಗಿ ಗೂಗಲ್ ಫಾರಂ ಮೂಲಕ ವರನ ಹುಡುಕಾಟದ ಹೊಸ ಪ್ರಯೋಗ ಮಾಡಿದ್ದಾರೆ. ಈ ತಂತ್ರ ಬಳಸಿ ಯಶಸ್ವಿಯಾಗಿದ್ದಾರೆ. ಕಾರಣ ಈಗೆಯ ಗೂಗಲ್ ಫಾರಂನಲ್ಲಿ 240 ಹುಡುಗರು ಮದುವೆಗೆ ಆ್ಯಪ್ಲಿಕೇಶನ್ ಹಾಕಿದ್ದಾರೆ. ಯುವತಿಯ ಹೊಸ ತಂತ್ರ ಇದೀಗ ಹಲವರಿಗೆ ಮಾದರಿಯಾಗಿದೆ.
36 ವರ್ಷದ ಯುವತಿ ಆ್ಯರಿನ್ ಪ್ಯಾಟರ್ನಸ್ ಉತ್ತರ ಕ್ಯಾರೋಲಿನಾ ನಿವಾಸಿ. ಪೋಷಕರಿಲ್ಲ, ಸಂಬಂಧಿಕರ ಆರೈಕೆಯಲ್ಲಿ ಬೆಳೆದ ಈಕೆಗೆ ಮದುವೆಗೆ ವರ ಹುಡುಕುವುದು ಸವಾಲಾಗಿ ಪರಿಣಮಿಸಿತು. ಸಂಬಂಧಿಕರು ಈಕೆಯ ಮದುವೆ ಕುರಿತು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಕೆಲಸದ ನಡುವೆ ಈಕೆಗೆ ವರನ ಹುಡುಕಾಟ, ಅವರ ಆಸಕ್ತಿ, ಕುಟುಂಬ ಸೇರಿದಂತೆ ಎಲ್ಲಾ ವಿಚಾರಗಳನ್ನು ಪರಿಶೀಲಿಸುವುದು ಕಷ್ಟವಾಗಿತ್ತು. ಹಾಗಂತ ಡೇಟಿಂಗ್ ಆ್ಯಪ್, ಮ್ಯಾಟ್ರಿಮೋನಿ ಸೈಟ್ ಮೂಲಕ ವರನ ಹುಡುಕಾಟದ ಆಸಕ್ತಿ ಇರಲಿಲ್ಲ. ಮೋಸ ಹೋಗುವ ಸಾಧ್ಯತೆ ಹೆಚ್ಚು ಅನ್ನೋದು ಆ್ಯರಿನ್ ನಿಲುವಾಗಿತ್ತು. ಹೀಗಾಗಿ ಗೂಗಲ್ ಫಾರಂ ತಂತ್ರ ಪ್ರಯೋಗಿಸಿದ್ದಾಳೆ.
ಗೂಗಲ್‌ನಲ್ಲಿ ಲಭ್ಯವಿರುವ ಆನ್‌ಲೈನ್ ಫಾರಂನ್ನು ತನ್ನ ಮದುವೆಗೆ ವರನ ಹುಡುಕಾಟಕ್ಕೆ ಕ್ರಿಯೇಟ್ ಮಾಡಿದ್ದಾಳೆ. ಆ್ಯರಿನ್ ಫಾರಂ ವಿಶೇಷವಾಗಿತ್ತು. ಹೆಸರು, ವಿಳಾಸ, ವಯಸ್ಸು, ವೃತ್ತಿ ಸೇರಿದಂತೆ ಕೆಲ ಮೂಲಭೂತ ಕಾಲಂಗಳನ್ನು ಹೊರತು ಪಡಿಸಿದೆ ಕೆಲ ಪ್ರಶ್ನೆಗಳು ಈ ಫಾರಂನಲ್ಲಿತ್ತು. ಮ್ಯಾಟ್ರಿಮೋನಿ ಸೈಟ್‌ನಲ್ಲಿರುವ ಕರಿಯರ್ ಗೋಲ್, ರಿಲೇಶನ್‌ಶಿಪ್ ಪ್ರಶ್ನೆಗಳನ್ನು ಬಿಟ್ಟು, ಮದುವೆ, ಫ್ಯಾಮಿಲಿ ಲೈಫ್, ರಿಲೇಶನ್‌ಶಿಪ್ ನಿರೀಕ್ಷೆಗಳು ಸೇರಿದಂತೆ ಕೆಲ ಪ್ರಶ್ನೆಗಳಿತ್ತು. ಈ ಮೂಲಕ ಮದುವೆಯಾಗಲು ಬಯಸುವ ವ್ಯಕ್ತಿಯ ಅಂತರಂಗ, ಅವರ ಜೀವನ ಶೈಲಿ, ಮದುವೆ ಹಾಗೂ ಕುಟುಂಬದ ಪರಿಕಲ್ಪನೆ ಕುರಿತು ತಿಳಿಯುವ ಪ್ರಯತ್ನ ಮಾಡಲಾಗಿತ್ತು.
ಸಂಗಾತಿಯಿಂದ ನಿರೀಕ್ಷಿಸುವ ಗುಣ, ನಿರ್ಧಾರ, ನಿಲುವುಗಳು, ಸಂಗಾತಿ ಯಾವ ವಿಚಾರದಲ್ಲಿ ಹೀಗೆ ಇರಬೇಕು ಎಂದು ಬಯಸುವ ಗುಣಗಳು ಹಲವು ಪ್ರಶ್ನೆಗಳು ಈ ಫಾರಂನಲ್ಲಿ ಕೇಳಲಾಗಿತ್ತು. ಒರ್ವ ವ್ಯಕ್ತಿಯನ್ನು ತಿಳಿದುಕೊಳ್ಳುವ, ಆತನ ಮುಂದಿನ ದಾರಿ, ಜೀವನ, ಮದುವೆ ಕುರಿತು ಇರುವ ಆಲೋಚನೆಗಳ ಕುರಿತು ತಿಳಿದುಕೊಳ್ಳುವ ಪ್ರಯತ್ನವನ್ನು ಆ್ಯರಿನ್ ಮಾಡಿದ್ದರು.
ಆನ್‌ಲೈನ್ ಗೂಗಲ್ ಫಾರಂ ಕ್ರಿಯೇಟ್ ಮಾಡಿದ ಆ್ಯರಿನ್ ಈ ಫಾರಂನ್ನು ತನ್ನ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾಳೆ. ಲಿಂಕ್ ಕೂಡ ನೀಡಿದ್ದಾಳೆ. ಆಸಕ್ತ ಹಾಗೂ ಅರ್ಹ ವರರು ಈ ಫಾರಂ ಭರ್ತಿ ಮಾಡಿದರೆ ಸಾಕು. ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಕೆಲವೇ ದಿನಗಳಲ್ಲಿ ಈಕೆಗೆ 240 ಆ್ಯಪ್ಲಿಕೇಶನ್ ಬಂದಿದೆ. ಇದೀಗ ಶಾರ್ಟ್ ಲಿಸ್ಟ್ ಮಾಡುತ್ತಿದ್ದಾಳೆ. ಇನ್ನು ಅಂತಿಮ ಆಯ್ಕೆ ಪ್ರಕ್ರಿಯೆ ಮುಗಿದಿಲ್ಲ. ಹಲವರು ಆ್ಯರಿನ್ ಪ್ರಯತ್ನಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.