ಬೆಂಗಳೂರಿನ ದೀಪಾವಳಿ ಲಂಡನ್ ಡೌನಿಂಗ್ ಸ್ಟ್ರೀಟ್‌ವೆರಗೆ, ಮನದಾಳ ಹಂಚಿದ ಸುಧಾಮೂರ್ತಿ ಪುತ್ರಿ

Published : Nov 10, 2026, 09:01 PM IST
Akshata Murthy Heartfelt Diwali Memories

ಸಾರಾಂಶ

ಬೆಂಗಳೂರಿನಲ್ಲಿ ಆಚರಿಸುತ್ತಿದ್ದ ದೀಪಾವಳಿ ಹಬ್ಬ ಲಂಡನ್‌ನ ಡೌನಿಂಗ್ ಸ್ಟ್ರೀಟ್‌ ವರೆಗಿನ ದೀಪಾವಳಿ ಸಂಭ್ರಮದ ನೆನಪು ಹಂಚಿಕೊಂಡಿದ್ದಾರೆ. ಸುಧಾಮೂರ್ತಿ-ನಾರಾಯಣ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿ ಹಂಚಿಕೊಂಡ ಮನದಾಳ

ಲಂಡನ್ (ನ.10) ದೇಶ ವಿದೇಶಗಳಲ್ಲಿ ದೀಪಾವಳಿ ಹಬ್ಬ ಸಂಭ್ರಮದಿಂದ ಆಚರಿಸಲಾಗುತ್ತಿದೆ. ವಿದೇಶದಲ್ಲಿ ನೆಲೆಸಿರುವ ಭಾರತೀಯರು ದೀಪಾವಳಿ ಹಬ್ಬವನ್ನು ಆಚರಿ ಖುಷಿ ಹಂಚಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಕುಟುಂಬದ ಜೊತೆ ದೀಪಾವಳಿ ಆಚರಿಸುತ್ತಿದ್ದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಪುತ್ರಿ ಅಕ್ಷತಾ ಮೂರ್ತಿ ಇದೀಗ ಲಂಡನ್‌ನ ದೀಪಾವಳಿ ಸಂಭ್ರಮ ಹಂಚಿಕೊಂಡಿದ್ದಾರೆ. ಬ್ರಿಟನ್ ಮಾಜಿ ಪ್ರಧಾನಿ ಋಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಕುಟುಂಬದ ಜೊತೆ ಲಂಡನ್‌ನ ದೀಪಾವಳಿಯ ಹಲವ ವಿಶೇಷತೆ, ಬೆಂಗಳೂರಿನ ನೆನಪು ಹಂಚಿಕೊಂಡಿದ್ದಾರೆ.

ಬಾಲ್ಯದ ದಿನಗಳಲ್ಲಿ ಬೆಂಗಳೂರಿನಲ್ಲಿ ಬಳಿಕ ಅಮೆರಿಕದ ಕ್ಯಾಲಿಫೋರ್ನಿಯಾ, ಬ್ರಿಟನ್ ಪ್ರಧಾನಿ ಅಧಿಕೃತ ನಿವಾಸ ಲಂಡನ್‌ನ 10 ಡೌನಿಂಗ್ ಸ್ಟ್ರೀಟ್‌ವರೆಗೆ ದೀಪಾವಳಿ ಹಬ್ಬದ ಆಚರಣೆ ಕುರಿತು ಅಕ್ಷತಾ ಮೂರ್ತಿ ಹೇಳಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ದೀಪಾವಳಿ ಎಂದರೆ ಮನೆಮಂದಿಯೆಲ್ಲಾ ಸೇರಿ ಸಾಂಪ್ರದಾಯಿಕ ಶೈಲಿಯಲ್ಲಿ ಹಣತೆ ಬೆಳಗಿಸುವುದು, ಮನೆ ಮುಂದೆ ರಂಗೋಲಿ ಬಿಡಿಸುವುದು ಹಾಗೂ ಸಿಹಿತಿಂಡಿಗಳನ್ನು ಪರಸ್ಪರ ಹಂಚಿಕೊಂಡು ಸಂಭ್ರಮಿಸುವುದಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ಶಿಕ್ಷಣಕ್ಕಾಗಿ ಅಮೆರಿಕಾದ ಕ್ಯಾಲಿಫೋರ್ನಿಯಾಗೆ ತೆರಳಿದಾಗ ಹಬ್ಬದ ದಿನಗಳಲ್ಲಿ ಮನೆಯಿಂದ ದೂರವಿದ್ದೇವೆ ಎಂದು ಪದೇ ಪದೇ ಕಾಡುತ್ತಿತ್ತು. ವಿದೇಶದಲ್ಲಿರುವ ಭಾರತೀಯ ಸಮುದಾಯದ ಜೊತೆ ಹಬ್ಬ ಆಚರಿಸುತ್ತಿದ್ದೆವು. ಹೀಗಾಗಿ ನಮ್ಮ ಸಾಂಸ್ಕೃತಿ ಬೇರುಗಳು ಗಟ್ಟಿಗೊಂಡಿತ್ತು. ಹಬ್ಬಗಳು ಸಂಬಂಧಗಳನ್ನು ಗಟ್ಟಿಗೊಳಿಸಿತ್ತು.

ಪ್ರಧಾನಿ ನಿವಾಸದಲ್ಲಿ ದೀಪಾವಳಿ

ಋಷಿ ಸುನಕ್ (Rishi Sunak) ಬ್ರಿಟನ್ ಪ್ರಧಾನಿಯಾದ ಬಳಿಕ ಲಂಡನ್‌ನ 10 ಡೌನಿಂಗ್ ಸ್ಟ್ರೀಟ್‌‌ನಲ್ಲಿ ದೀಪಾವಳಿ ಮತ್ತೊಂದು ಹಂತ ತಲುಪಿತ್ತು. ಬ್ರಿಟನ್ ಪ್ರಧಾನಿ ನಿವಾಸದ ಮುಂದೆ ದೀಪಾವಳಿಯ ದೀಪಗಳನ್ನು ಬೆಳಗಲಾಗಿತ್ತು.ಬ್ರಿಟನ್‌ನ ತೀವ್ರ ಚಳಿಯ ನಡುವೆಯೂ ಮೈತುಂಬಾ ದಪ್ಪನೆಯ ಕೋಟ್ ಧರಿಸಿ, ಡೌನಿಂಗ್ ಸ್ಟ್ರೀಟ್ ಬಾಗಿಲಲ್ಲಿ ಹಣತೆ ದೀಪಗಳನ್ನು ಸಾಲಾಗಿ ಜೋಡಿಸಿ ಬೆಳಗುತ್ತಿದ್ದ ಕ್ಷಣಗಳು ಅತೀವ ಹೆಮ್ಮೆ ತಂದಿದ್ದವು" ಎಂದು ಅಕ್ಷತಾ ಮೂರ್ತಿ ಹೇಳಿಕೊಂಡಿದ್ದಾರೆ.

ನಾವು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ, ಹವಾಮಾನ ಬದಲಾಗಿದ್ದರೂ, ಆಚರಿಸುವ ಸ್ಥಳಗಳು ಬೇರೆಯಾಗಿದ್ದರೂ ದೀಪಾವಳಿ ನೀಡುವ ಸಂದೇಶ ಮತ್ತು ಅದಕ್ಕೆ ಸಂಬಂಧಿಸಿದ ಕಥೆಗಳು ಎಂದಿಗೂ ಬದಲಾಗುವುದಿಲ್ಲ. ಕತ್ತಲೆಯನ್ನು ಸರಿಸಿ ಬೆಳಕನ್ನು ತರುವ ಹಾಗೂ ಸತ್ಯಕ್ಕೆ ಜಯ ತಂದುಕೊಡುವ ಈ ಹಬ್ಬದ ಆಂತರಿಕ ಚೈತನ್ಯ ಜಾಗತಿಕವಾಗಿ ಒಂದೇ ಆಗಿದೆ" ಎಂದು ಅಕ್ಷತಾ ಮೂರ್ತಿ ತಮ್ಮ ಭಾವುಕ ಸಾಲುಗಳನ್ನು ಕೊನೆಗೊಳಿಸಿದ್ದಾರೆ. ಅವರ ಈ ಸಾಂಸ್ಕೃತಿಕ ಪಯಣದ ಬರವಣಿಗೆ ನೆಟ್ಟಿಗರ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕ್ರಿಕೆಟಿಗ ಪೃಥ್ವಿ ಶಾ ಲವ್​ಸ್ಟೋರಿಯಲ್ಲಿ ಮತ್ತೆ ಟ್ವಿಸ್ಟ್​: ಒಂದಾದ ದಂಪತಿ- ಹುಚ್ಚು ಹಿಡೀತಿದೆ ಅಂತಿರೋ ಫ್ಯಾನ್ಸ್​​
ಅಪ್ಪ ರಾಜೀವ್ ಗಾಂಧಿ ಸಾವಿನ 2 ತಿಂಗಳು ಮುಂಚೆಯೇ ಅನಾಹುತ ಸೂಚನೆ ನೀಡಿದ್ದ ಮಗ ರಾಹುಲ್; ಸೋನಿಯಾ ಗಾಂಧಿ