Friendship Dayಗೆ ಬೆಸ್ಟಿಗೆ ಸರ್ಪ್ರೈಸ್ ಕೊಡಬೇಕಾ? ಈ ಡಿಜಿಟಲ್ ಐಡಿಯಾಗಳನ್ನು ಟ್ರೈ ಮಾಡಿ!

Published : Aug 01, 2026, 09:27 PM IST
Friendship Day 2026

ಸಾರಾಂಶ

ಫ್ರೆಂಡ್‌ಶಿಪ್ ಡೇ 2026ಕ್ಕೆ ನಿಮ್ಮ ಗೆಳೆಯ/ಗೆಳತಿಯನ್ನು ಭೇಟಿ ಮಾಡಲು ಸಾಧ್ಯವಾಗದಿದ್ದರೆ, ಚಿಂತೆ ಬೇಡ. Teleparty, Plato, Snapchat, Locket, ಮತ್ತು Canva ನಂತಹ ಆ್ಯಪ್‌ಗಳನ್ನು ಬಳಸಿ.

ಫ್ರೆಂಡ್‌ಶಿಪ್ ಡೇ 2026ಕ್ಕೆ ನಿಮ್ಮ ಗೆಳೆಯ/ಗೆಳತಿಯನ್ನು ಭೇಟಿ ಮಾಡಲು ಸಾಧ್ಯವಾಗದಿದ್ದರೆ, ಚಿಂತೆ ಬೇಡ. Teleparty, Plato, Snapchat, Locket, ಮತ್ತು Canva ನಂತಹ ಆ್ಯಪ್‌ಗಳನ್ನು ಬಳಸಿ ದೂರದಲ್ಲಿದ್ದರೂ ಹತ್ತಿರವಿದ್ದಂತೆ ಸಂಭ್ರಮಿಸಬಹುದು. ಒಟ್ಟಿಗೆ ಸಿನಿಮಾ ನೋಡಿ, ಗೇಮ್ಸ್ ಆಡಿ, ನಿಮ್ಮ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸಿ.

ಫ್ರೆಂಡ್‌ಶಿಪ್ ಡೇ 2026 ಬಂತು, ಆದರೆ ನಿಮ್ಮ ಬೆಸ್ಟೀನಾ ಮೀಟ್ ಮಾಡೋಕೆ ಆಗ್ತಿಲ್ವಾ? ಬೇಜಾರ್ ಮಾಡ್ಕೋಬೇಡಿ, ಸ್ವಲ್ಪ ಸ್ಮಾರ್ಟ್ ಆಗಿ ಯೋಚಿಸಿ! ಈಗಿನ ಡಿಜಿಟಲ್ ಯುಗದಲ್ಲಿ, ದೂರದಲ್ಲಿದ್ದರೂ ಫ್ರೆಂಡ್ ಜೊತೆ ಕ್ವಾಲಿಟಿ ಟೈಮ್ ಕಳೆಯೋಕೆ ತುಂಬಾ ಆ್ಯಪ್‌ಗಳಿವೆ. ಒಟ್ಟಿಗೆ ಸಿನಿಮಾ ನೋಡುವುದರಿಂದ ಹಿಡಿದು, ಗೇಮ್ಸ್ ಆಡುವುದು ಮತ್ತು ಪರ್ಸನಲೈಸ್ಡ್ ಗಿಫ್ಟ್ ಕಳುಹಿಸುವವರೆಗೆ, ನಿಮ್ಮ ದೂರದ ಸ್ನೇಹವನ್ನು ಸಂಭ್ರಮಿಸಲು ಕೆಲವು ಟೆಕ್-ಸ್ಮಾರ್ಟ್ ಐಡಿಯಾಗಳು ಇಲ್ಲಿವೆ.

Teleparty ಅಲ್ಲಿ ಒಟ್ಟಿಗೆ ಸಿನಿಮಾ ನೋಡಿ

ನೀವು ಮತ್ತು ನಿಮ್ಮ ಫ್ರೆಂಡ್ ಇಬ್ಬರಿಗೂ ಒಂದೇ ತರಹದ ಸಿನಿಮಾ ಇಷ್ಟನಾ? ಹಾಗಿದ್ರೆ Teleparty ಒಂದು ಸೂಪರ್ ಆಪ್ಶನ್. ಈ ಪ್ಲಾಟ್‌ಫಾರ್ಮ್ ಬಳಸಿ ನೀವು ಬೇರೆ ಬೇರೆ ಕಡೆ ಇದ್ದರೂ ಒಟ್ಟಿಗೆ ಸಿನಿಮಾ ಅಥವಾ ಶೋಗಳನ್ನು ನೋಡಬಹುದು. ಇದು Netflix, YouTube, Disney+, Max, ಮತ್ತು Amazon Prime Video ನಂತಹ ಸರ್ವೀಸ್‌ಗಳಲ್ಲಿ ಕೆಲಸ ಮಾಡುತ್ತೆ. ಇದರಲ್ಲಿ ಚಾಟ್ ಮಾಡುವ ಫೀಚರ್ ಕೂಡ ಇದೆ. ಆದರೆ, ಆಯಾ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗೆ ನೀವು ಚಂದಾದಾರರಾಗಿರಬೇಕು.

Plato ಆ್ಯಪ್‌ನಲ್ಲಿ ಮಜಾ ಮಾಡಿ

ಬರೀ ಸಿನಿಮಾ ಯಾಕೆ, ಗೇಮ್ಸ್ ಕೂಡ ಆಡಬಹುದು! ನಿಮಗೆ ಗೇಮಿಂಗ್ ಇಷ್ಟ ಅಂದ್ರೆ Plato ಟ್ರೈ ಮಾಡಿ. ಇದರಲ್ಲಿ ಚೆಸ್, ಕ್ಯಾರಂ, ಲೂಡೋ, ಪೋಕರ್, ವೇರ್‌ವೂಲ್ಫ್, ಪೂಲ್, ಮತ್ತು ಬೌಲಿಂಗ್‌ನಂತಹ ಸಿಂಪಲ್ ಗೇಮ್‌ಗಳಿವೆ. ಗೇಮ್ ಆಡುವಾಗ ನೀವು ಚಾಟ್ ಅಥವಾ ವಾಯ್ಸ್ ಕಾಲ್ ಮೂಲಕ ಮಾತನಾಡಬಹುದು. ಇದರಿಂದ ಆಟ ಇನ್ನಷ್ಟು ಮಜವಾಗಿರುತ್ತದೆ.

Snapchat ಅಲ್ಲಿ ನಿಮ್ಮ ಫ್ರೆಂಡ್‌ಶಿಪ್ ಚೆಕ್ ಮಾಡಿ

ಇದು ಸ್ವಲ್ಪ ವಿಚಿತ್ರ ಅನಿಸಬಹುದು, ಆದರೆ ಮಜಾ ಕೊಡುತ್ತೆ! Snapchat ಅಲ್ಲಿ 'Friend Solar System' ಫೀಚರ್ ಬಳಸಿ ನಿಮ್ಮ ಫ್ರೆಂಡ್‌ಶಿಪ್ ಎಷ್ಟು ಸ್ಟ್ರಾಂಗ್ ಇದೆ ಅಂತ ನೋಡಬಹುದು. ಇದು ನಿಮ್ಮ ಟಾಪ್ 8 ಸ್ನೇಹಿತರ ಲಿಸ್ಟ್ ತೋರಿಸುತ್ತೆ. ಇದರಿಂದ ನಿಮ್ಮಿಬ್ಬರ ನಡುವಿನ ಬಾಂಧವ್ಯದ ಬಗ್ಗೆ ಒಂದು ತಮಾಷೆಯ ಕಲ್ಪನೆ ಸಿಗುತ್ತೆ.

ನಿಮ್ಮ ಫ್ರೆಂಡ್‌ನ ಹೋಮ್ ಸ್ಕ್ರೀನ್‌ನಲ್ಲೇ ಇಟ್ಟುಕೊಳ್ಳಿ

ದಿನಪೂರ್ತಿ ನಿಮ್ಮ ಫ್ರೆಂಡ್‌ನ ನೋಡಬೇಕು ಅನಿಸಿದ್ರೆ, Locket Widget ಆ್ಯಪ್ ಬಳಸಿ. ಈ ಆ್ಯಪ್, ನಿಮ್ಮ ಫ್ರೆಂಡ್ಸ್ ಕಳುಹಿಸಿದ ಫೋಟೋಗಳನ್ನು ನೇರವಾಗಿ ನಿಮ್ಮ ಸ್ಮಾರ್ಟ್‌ಫೋನ್ ಹೋಮ್ ಸ್ಕ್ರೀನ್ ಮೇಲೆ ತೋರಿಸುತ್ತೆ. ಇದಕ್ಕಾಗಿ ಪದೇ ಪದೇ ಸೋಶಿಯಲ್ ಮೀಡಿಯಾ ಓಪನ್ ಮಾಡುವ ಅಗತ್ಯವಿಲ್ಲ.

Canva ಬಳಸಿ ಡಿಜಿಟಲ್ ಗಿಫ್ಟ್ ಮಾಡಿ

ನಿಮಗೆ ಕ್ರಿಯೇಟಿವ್ ಆಗಿರೋದು ಇಷ್ಟನಾ? ಹಾಗಿದ್ರೆ ಬರೀ ಮೆಸೇಜ್ ಕಳಿಸೋ ಬದಲು Canva ಬಳಸಿ. ನಿಮ್ಮ ಹಳೆಯ ನೆನಪುಗಳನ್ನು ಬಳಸಿ ಫೋಟೋ ಕೊಲಾಜ್, ಸ್ಕ್ರಾಪ್‌ಬುಕ್, ಆನಿಮೇಟೆಡ್ ವಿಡಿಯೋ, ಅಥವಾ ಗ್ರೀಟಿಂಗ್ ಕಾರ್ಡ್‌ಗಳಂತಹ ಪರ್ಸನಲೈಸ್ಡ್ ಗಿಫ್ಟ್‌ಗಳನ್ನು ಡಿಸೈನ್ ಮಾಡಬಹುದು. Canva ನಿಮ್ಮ ಅಗತ್ಯಕ್ಕೆ ತಕ್ಕಂತೆ ಉಚಿತ ಮತ್ತು ಪಾವತಿ ಆಯ್ಕೆಗಳನ್ನು ನೀಡುತ್ತದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ಫ್ರೆಂಡ್‌ಶಿಪ್ ಡೇ ಯಾವಾಗ ಆಚರಿಸಲಾಗುತ್ತೆ?: ಪ್ರತಿ ವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಫ್ರೆಂಡ್‌ಶಿಪ್ ಡೇ ಆಚರಿಸಲಾಗುತ್ತೆ. 2026ರಲ್ಲಿ ಇದು ಆಗಸ್ಟ್ 2 ರಂದು ಬರುತ್ತೆ.

ಫ್ರೆಂಡ್‌ಶಿಪ್ ಡೇ ಯಾಕೆ ಆಚರಿಸಲಾಗುತ್ತೆ?: ಜೀವನದ ಬೇರೆ ಸಂಬಂಧಗಳಂತೆ ಸ್ನೇಹ ಕೂಡ ಒಂದು ವಿಶೇಷವಾದ ಬಂಧ. ಈ ಪ್ರೀತಿ, ನಂಬಿಕೆ ಮತ್ತು ಬಾಂಧವ್ಯವನ್ನು ಗೌರವಿಸಲು ಜನರು ಶುಭಾಶಯ, ಉಡುಗೊರೆಗಳ ಮೂಲಕ ಈ ದಿನವನ್ನು ಸಂಭ್ರಮಿಸುತ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

45 ನಿಮಿಷದಲ್ಲಿ 5 ಪ್ಲೇಟ್ ಮಟನ್ ಬಿರಿಯಾನಿ ತಿಂದ.. ಆಮೇಲೆ ಏನಾದ ಗೊತ್ತಾ..?
ದೇವರ ಪೂಜೆಯ ಹೂವುಗಳನ್ನು ಏನು ಮಾಡಬೇಕು? ನೀರಿಗೆ ಅಥವಾ ಗಿಡದ ಮೇಲೆ ಹಾಕುವುದು ಧಾರ್ಮಿಕ ಶಾಪವೇ?