ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ. ಆದರೆ ಸುತ್ತ-ಮುತ್ತ ಯಾರಿದ್ದಾರೆ ಎನ್ನದೇ ಗೊರೆಕೆ ಹೊಡೆಯುವರಿಗೆ ಅದನ್ನು ತಡೆಯಲು ಎಷ್ಟು ಯತ್ನಿಸಿದರೂ ಅಸಾಧ್ಯ. ಅದಕ್ಕೆ ಇಲ್ಲಿದೆ ಪರಿಹಾರ.
ಪಕ್ಕದಲ್ಲಿ ಬೇರೆಯವರು ಮಲಗಿದರೆ ಎಲ್ಲಿ ನಿದ್ರೆಗೆ ಡಿಸ್ಟರ್ಬ್ ಮಾಡುತ್ತೇವೋ ಎಂಬ ಭಯ ಗೊರಕೆ ಹೊಡಿಯುವವರಿಗೆ. ಕೆಲ ಮಂದಿ ಸಂತೇಲೂ ನಿದ್ದೆ ಮಾಡ್ತಾರೆ. ದಣಿದ ದೇಹ ಹಾಸಿಗೆ ಮೇಲೆ ತಲೆ ಇಟ್ಟಾಗ ಗೊರಕೆ ಹೊಡೆಯುವುದು ಸಹಜ. ಆದರೆ, ಕೆಲವರಿಗೆ ಆಯಾಸವಾಗದೇ ಮಲಗಿದರೂ ಗೊರಕೆ ಬರುತ್ತೆ. ಅದಕ್ಕೇನು ಸಿಂಪಲ್ ಮನೆ ಮದ್ದು ಇಲ್ಲಿವೆ....
ಅರಿಶಿಣ
undefined
ಒಂದು ಗ್ಲಾಸ್ ಹಾಲಿಗೆ ಎರಡು ಚಮಚ ಅರಿಶಿಣ ಬೆರೆಸಿ, ಮಲಗುವ 30 ನಿಮಿಷ ಮುನ್ನ ಸೇವಿಸಬೇಕು.
ಸೋಯಾ ಹಾಲು
ಹಸುವಿನ ಹಾಲಿಗಿಂತ ಬೆಸ್ಟ್ ಸೋಯಾ ಹಾಲು. ಸೋಯಾ ಹಾಲು ಮೂಗಿನ ಬ್ಲಾಕ್ ಸರಿ ಮಾಡಿ, ಸುಗಮ ಉಸಿರಾಟಕ್ಕೆ ಸಹಕರಿಸುತ್ತದೆ.
ಪುದೀನಾ
ನೀರಿನಲ್ಲಿ ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಗೊರಕೆ ಕಡಿಮೆಯಾಗಿ, ಡೀಪ್ ಸ್ಲೀಪಿಗೆ ಜಾರುವಂತೆ ಮಾಡುತ್ತದೆ.
ಈರುಳ್ಳಿ
ಈರುಳ್ಳಿಯನ್ನು ಊಟಕ್ಕೆ, ತಿಂಡಿಯೊಂದಿಗೆ ತಿಂದರೆ, ಇದರ ವಾಸನೆಗೆ ಗೊರೆಕೆ ಕಂಟ್ರೋಲ್‌ಗೆ ಬರುತ್ತೆ.
ಆಲಿವ್ ಎಣ್ಣೆ
ಇದನ್ನು ಆಹಾರಕ್ಕ ಬೆರೆಸಿ ಅಥವಾ ತಲೆಗೆ ಹಚ್ಚಿಗೊಂಡರೆ ಗೊರಕೆ ಸಮಸ್ಯೆ ದೂರವಾಗುತ್ತದೆ.
ಜೇನು ತುಪ್ಪ
ಟೀ ಅಥವಾ ಬಿಸಿ ನೀರಿಗೆ ಜೇನು ಬೇರೆಸಿ ಕುಡಿಯುವುದರಿಂದ ಗಂಟಲು ಕೆರೆತ, ಅರ್ಜೀಣದೊಂದಿಗೆ ಗೊರಕೆಗೂ ಮದ್ದಾಗಬಲ್ಲದು.
ಮೀನು
ಪ್ರಾಣಿ ಮಾಂಸ (ರೆಡ್ ಮೀಟ್) ತಿನ್ನುವವರು ಹೆಚ್ಚಾಗಿ ಗೊರಕೆ ಹೊಡೆಯುತ್ತಾರೆ. ಅಂಥವರು ಮೀನು ಸೇವಿಸಿದರೊಳಿತು. ಗೊರಕೆ ಕಡಿಮೆಯಾಗುತ್ತದೆ.