
ಗೊಜ್ಜು ತಯಾರಿಸಲು ಬೇಕಾಗುವ ಸಾಮಗ್ರಿಗಳು:
- ನೆನಸಿ ನುಣ್ಣಗೆ ಅರೆದ ಮೆಂತ್ಯೆ ಹಿಟ್ಟು - 2 ಚಮಚ (1 ಚಮಚ ಹುರಿದು ಪುಡಿ ಮಾಡಿದ ಮೆಂತ್ಯೆ ಪುಡಿಯನ್ನು ಬಳಸಬಹುದು)
- ಸಣ್ಣಗೆ ಹೆಚ್ಚಿದ ಈರುಳ್ಳಿ - 2 ಚಮಚ
- ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು - 1 ಚಮಚ
- ಮೊಸರು- 1 ರಿಂದ ಒಂದೂವೆರೆ ಬಟ್ಟಲು
- ನೀರು - 1 / 2 ಬಟ್ಟಲು
- ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು:
- 1 ದೊಡ್ಡ ಚಮಚ ಎಣ್ಣೆ
- 1 ಚಮಚ ಸಾಸಿವೆ
- 1 ಚಮಚ ಉದ್ದಿನಬೇಳೆ
- 2 ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ
- 1 / 2 ಚಮಚ ಸಣ್ಣಗೆ ಹೆಚ್ಚಿದ ಶುಂಠಿ
- 6 ರಿಂದ 7 ಕರಿಬೇವಿನ ಎಲೆಗಳು
- 1 ಚಿಟಿಕೆ ಇಂಗು(ಬೇಕಾದರೆ ರುಚಿಗೆ ತಕ್ಕಷ್ಟು ಬೆಳ್ಳುಳ್ಳಿ ಮತ್ತು ಒಣಮೆಣಸಿನ ಕಾಯಿಯನ್ನು ಬಳಸಬಹುದು. )
ತಯಾರಿಸಲು ಬೇಕಾಗುವ ಸಮಯ -10 ರಿಂದ 15 ನಿಮಿಷ
ತಯಾರಿಸುವ ವಿಧಾನ
ನುಣ್ಣಗೆ ಅರೆದಿಟ್ಟುಕೊಂಡ ಮೆಂತ್ಯೆ ಹಿಟ್ಟನ್ನು ಗೊಜ್ಜಿನ ಪಾತ್ರೆಗೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ. ನಂತರ ಕೊತ್ತಂಬರಿ ಸೊಪ್ಪು, ಹಸಿ ಈರುಳ್ಳಿ, ಗಟ್ಟಿ ಮೊಸರು ಮತ್ತು ನೀರನ್ನು ಸೇರಿಸಿ ಚಮಚದಿಂದ ಚೆನ್ನಾಗಿ ಕಲಸಿ. ಗಮನಿಸಿ ಈ ಮಿಶ್ರಣವನ್ನು ಒಲೆಯ ಮೇಲೆ ಬೇಯಿಸಬಾರದು. ಈಗ ಮೇಲೆ ತಿಳಿಸಿದ ಸಾಮಗ್ರಿಗಳಿಂದ ಒಗ್ಗರಣೆ ಹಾಕಿ. ರುಚಿರುಚಿಯಾದ ಮೆಂತ್ಯೆ ಹಿಟ್ಟಿನ ಗೊಜ್ಜನ್ನು ಬಿಸಿಬಿಸಿ ಅನ್ನದ ಜೊತೆಗೆ ಸವಿದು ನೋಡಿ.
ಆಗುಂಬೆ ವಿದ್ಯಾ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.