ಬ್ಲ್ಯಾಕ್ ಅಲ್ಲ, ಆರೋಗ್ಯಕ್ಕೆ ಬ್ಲೂ ಟೀ

By Web Desk  |  First Published Nov 11, 2018, 9:10 AM IST

 ಗ್ರೀನ್ ಟೀ ಗೊತ್ತು. ಅದರ ಹೆಲ್ತ್ ಬೆನಫಿಟ್ ಸಹ ಗೊತ್ತು.  ಆದರೆ, ಎಂದಾದರೂ ಬ್ಲೂ ಟೀ ರುಚಿ ನೋಡಿದ್ದೀರಾ? ಆರೋಗ್ಯದ ದೃಷ್ಟಿಯಿಂದಲಾದರೂ ನೀವೊಮ್ಮೆ ಕುಡಿಯಲೇ ಬೇಕು..........


ಫಿಟ್ ಆ್ಯಂಡ್ ಫೈನ್ ಆಗರಿಲು ಬ್ಲ್ಯಾಕ್ ಟೀ ಕುಡಿಯೋದು ಗೊತ್ತು. ಆದರೆ, ಆ್ಯಂಟಿ ಆ್ಯಕ್ಸಿಡೆಂಟ್ ಅಂಶ ಹೆಚ್ಚಿರುವ ಬ್ಲೂ ಟೀಯಲ್ಲೂ ಬಯೋ ಕಾಂಪೌಂಡ್ ಇದ್ದು, ಎಂಗ್ ಆ್ಯಂಡ್ ಎನರ್ಜೆಟಿಕ್ ಲುಕ್ ಕೊಡುತ್ತದೆ. ಇದನ್ನು ವಾರಕ್ಕೊಮ್ಮೆಯಾದರೂ ಸೇವಿಸಿದರೆ, ಉಪಯೋಗ ಅಪಾರ.

  • ಊಟದ ನಂತರ ಸೇವಿಸಿದರೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಅನೇಕ ಸೋಂಕುಗಳನ್ನು ತಡೆಯುವಲ್ಲಿಯೂ ಯಶಸ್ವಿಯಾಗಬಲ್ಲದು. ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
  • ಕೂದಲು ಸದೃಢವಾಗಲು ಬ್ಲೂ ಟೀ ನೆರವಾಗುತ್ತದೆ. ಕೂದಲನ್ನು ಗಟ್ಟಿಗೊಳಿಸುವ ಹಾಗೂ ಅದರ ನೈಸರ್ಗಿಕ ಬಣ್ಣ ಕಾಪಾಡಲು ನೆರವಾಗುವ ವಿಟಮಿನ್ ಮತ್ತು ಮಿನರಲ್ಸ್ ಇದರಲ್ಲಿದೆ.
  • ದಿನವಿಡೀ ಕಾಡುವ ಸುಸ್ತು, ಕೆಲಸ ಮಾಡಲು ಮನಸ್ಸಿಲ್ಲವೆಂದರೆ ಇದು ಸೂಕ್ತ ಮದ್ದು. ಹೆಚ್ಚಿನ ಒತ್ತಡದಿಂದ ಬಳಲುತ್ತಿದ್ದರೆ, ಖಿನ್ನತೆಯನ್ನು ಹೊರ ಹಾಕಲೂ ಬ್ಲೂ ಟೀ ನೆರವಾಗುತ್ತದೆ. ಕ್ಯಾನ್ಸರ್ ಹಾಗೂ ಮಧುಮೇಹಕ್ಕೂ ಒಳ್ಳೆ ಮದ್ದು. 
  • ಇಂಥ ನೀಲಿ ಬಣ್ಣದ ಟೀ ಕುಡಿಯೋದು ಹೇಗೆ ಎಂಬ ಚಿಂತೆ ಬೇಡ. ಇದನ್ನು ನಾಗ್ದಾಲಿ ಹೂವು ಹಾಗೂ ನಾಗ್ ದೇಡೆ ಹೂವಿನಿಂದ ತಯಾರಿಸಲಾಗುತ್ತದೆ.
click me!