ವರ್ಜಿನ್ ಹಾಗೂ ಕನ್ಯೆಯಲ್ಲ ಎಂಬ ಪುರುಷ - ಮಹಿಳೆಯರಿಗಿರುವ ಸಂದೇಹಕ್ಕೆ ಇಲ್ಲಿದೆ ಉತ್ತರ

Published : Dec 05, 2019, 05:37 PM IST
ವರ್ಜಿನ್ ಹಾಗೂ ಕನ್ಯೆಯಲ್ಲ ಎಂಬ ಪುರುಷ - ಮಹಿಳೆಯರಿಗಿರುವ ಸಂದೇಹಕ್ಕೆ ಇಲ್ಲಿದೆ ಉತ್ತರ

ಸಾರಾಂಶ

ಮಹಿಳೆಯರಿಗೆ ಸೆಕ್ಸ್ ಸಂದರ್ಭದಲ್ಲಿ ಪುರುಷರ ಶಿಶ್ನವು ತೀರ ಸಣ್ಣದಾಗಿದ್ದರೆ ಈಗಾಗಲೆ ಹೆಚ್ಚು ಬಾರಿ ಹಾಸಿಗೆ ಸುಖ ಪಡೆದು ತನ್ನನ್ನು ತೃಪ್ತಿಪಡಿಸಲು ಈತ ಅರ್ಹನಲ್ಲ ಎಂಬ ಆಲೋಚನೆಯಿರುತ್ತದೆಯಂತೆ. 

ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರಿಗೆ ಸೆಕ್ಸ್ ಬಗ್ಗೆ ಕೆಲವು ಸಂಪ್ರದಾಯಿಕ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಈ ಸಂದೇಹಗಳಿಂದಲೇ ಕೆಲವರು ಮಾನಸಿಕವಾಗಿ ಕುಗ್ಗಿ ತಮ್ಮ ಲೈಂಗಿಕ ಜೀವನವನ್ನು ಹಾಳು ಮಾಡಿಕೊಳ್ಳುವುದು ಸಹಜ.    
ಪುರುಷರು ಮೊದಲ ಬಾರಿ ಲೈಂಗಿಕ ಕ್ರಿಯೆಗೆ ಒಳಪಡುವಾಗ ತಮ್ಮ ಶಿಶ್ನವು ಸ್ತ್ರೀಯರ ಯೋನಿಯೊಳಗೆ ಸುಲಭವಾಗಿ ಒಳ ಹೋದರೆ ಆಕೆ ವರ್ಜಿನ್ ಅಲ್ಲ ಈಗಾಗಲೇ ಹಲವು ಬಾರಿ ಲೈಂಗಿಕತೆಗೆ ಒಳಗಾಗಿದ್ದಾಳೆ ಎಂಬ ಭಾವನೆಯಿರುತ್ತದೆ. ಅದೇ ರೀತಿ ಮಹಿಳೆಯರಿಗೆ ಸೆಕ್ಸ್ ಸಂದರ್ಭದಲ್ಲಿ ಪುರುಷರ ಶಿಶ್ನವು ತೀರ ಸಣ್ಣದಾಗಿದ್ದರೆ ಈಗಾಗಲೆ ಹೆಚ್ಚು ಬಾರಿ ಹಾಸಿಗೆ ಸುಖ ಪಡೆದು ಮುಂದೆ ಈತ ತನ್ನನ್ನು ತೃಪ್ತಿಪಡಿಸಲು ಅರ್ಹನಲ್ಲ ಎಂಬ ಆಲೋಚನೆಯಿರುತ್ತದೆಯಂತೆ. ಇವೆರಡು ಕಾರಣದಿಂದ ದಂಪತಿಗಳು ಮುಂದಿನ ದಿನಗಳಲ್ಲಿ   ನೆಮ್ಮದಿಯಿಲ್ಲದೆ ಜೀವನ ಮಾಡಬೇಕಾಗುತ್ತದೆ.

ಸಂಗಾತಿಯ ಗತ ಸೆಕ್ಸ್ ಲೈಫ್ ಬಗ್ಗೆ ಗೊತ್ತಾದರೆ?

ಆದರೆ ವೈದ್ಯರ ಪ್ರಕಾರ ಇವೆರಡು ತಪ್ಪು ಅಭಿಪ್ರಾಯಗಳು
ಪುರುಷರಿಗೆ : 

ಪ್ರತಿಬಾರಿ ಸಂಭೋಗ ನಡೆಸುವಾಗಲು ಯೋನಿ ಹಿಗ್ಗುತ್ತದೆ ಹಾಗೂ ಕುಗ್ಗುತ್ತದೆ. ಮಗು ಹುಟ್ಟುವವರೆಗೂ ಯೋನಿಯ ಬಿಗಿ ಕಡಿಮೆಯಾಗುವುದಿಲ್ಲ.ಈ ಕಾರಣದಿಂದ ವಿವಾಹಪೂರ್ವದಲ್ಲಿ ಸೆಕ್ಸ್ ಸುಖ ಹೆಚ್ಚು ಪಡೆದಿದ್ದಾನೆ ಎಂದು ಸಂದೇಹಿಸುವುದು ತಪ್ಪು. ಅಲ್ಲದೆ ಕನ್ಯತ್ವವನ್ನು ಸೂಚಿಸುವ ಕನ್ಯಾಪೊರೆ ಎಂಬ ತೆಳುಪದರ ಸಂಭೋಗವಲ್ಲದೆ ಸೈಕ್ಲಿಂಗ್‌, ಬಟ್ಟೆಧರಿಸುವುದು, ಸ್ಪರ್ಶ ಮುಂತಾದ ಕಾರಣಗಳಿಂದಲೂ ಹರಿಯುತ್ತದೆ. ಇದಕ್ಕೆ ನಿಖರವಾದ ಕಾರಣವಿರುವುದಿಲ್ಲ. 

ಇಂಥ ಸೆಕ್ಸ್ ಡ್ರೀಮ್ಸ್‌ಗೆ ಏನರ್ಥ?

ಮಹಿಳೆಯರಿಗೆ: 
ಶಿಶ್ನ ಸಣ್ಣದಾಗಿದ್ದರೆ ಆತ ಈ ಮೊದಲು ಹೆಚ್ಚು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂಬ ಅನುಮಾನವನ್ನು ಮನಸ್ಸಿನಿಂದ ತೆಗೆದುಹಾಕಬೇಕು. ಕೆಲವರಿಗೆ  ಶಿಶ್ನ ಸಾಮಾನ್ಯವಾಗಿ ಸಣ್ಣದಿರುತ್ತದೆ. ಮತ್ತೂ ಕೆಲವರಿಗೆ ತೀರ ದಪ್ಪವಾಗಿರುತ್ತದೆ. ಸಣ್ಣ ಶಿಶ್ನದವರಿಗೆ ಸಂಭೋಗ ಸಂದರ್ಭದಲ್ಲಿ ಪ್ರಚೋದನೆಯಿಂದ ದಪ್ಪ ಹಾಗೂ ಉದ್ದವಾಗುತ್ತದೆ. ಕೆಲವು ಲೈಂಗಿಕ ಪ್ರಚೋದನೆಗಳಿಂದ ಹಿಗ್ಗುತ್ತದೆ ತದ ನಂತರ ಸೆಕ್ಸ್'ಗೆ ಮುಂದಾಗಬೇಕು.    

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಿನ ಈ 7 ಅಭ್ಯಾಸಗಳು ವಯಸ್ಸಾಗೋದನ್ನ ನಿಧಾನಗೊಳಿಸುತ್ತೆ!
19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ