
ಮನೆಯಲ್ಲಿ ರಸಂ ಮಾಡುವಾಗ ಸಾಮಾನ್ಯವಾಗಿ ಘಮಘಮ ಎನ್ನುವುದು ಇದ್ದೇ ಇದೆ. ಅದರಲ್ಲಿಯೂ ರಸಂಗೆ ಕಾಳುಮೆಣಸು, ಜೀರಿಗೆ ಪೌಡರ್ ಹಾಕಿದಾಗ, ಅದರ ಘಮಲೇ ಬೇರೆ. ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿದಾಗ ಬರುವ ಘಮಲು ಮತ್ತೊಂದು ರೀತಿ. ಈ ಘಮಘಮ ಪರಿಮಳ ಮೂಗಿಗೆ ಬಡಿಯುತ್ತಿದ್ದಂತೆಯೇ ಅದನ್ನು ಟೇಸ್ಟ್ ಮಾಡೋಣ ಎನ್ನುವ ಹಾಗೆ ಇರುತ್ತದೆ. ಆದರೆ ಕ್ರಮೇಣ ಪರಿಮಳ ಹೋಗಿಯೇ ಬಿಡುತ್ತದೆ. ಕೆಲವೇ ನಿಮಿಷ ಇರುವ ಈ ಘಮಲು ದಿಢೀರನೆ ಮಾಯವಾಗಲು ಏನು ಕಾರಣ ಎನ್ನೋದು ತಿಳಿಯದೇ ಮಹಿಳೆಯರು ತಲೆಕೆಡಿಸಿಕೊಳ್ಳುವುದು ಇದೆ.
ಅದಕ್ಕಾಗಿ ನೀವು ಈ ಟಿಪ್ಸ್ ಫಾಲೋ ಮಾಡಬೇಕು. ಇಲ್ಲಿ ಮುಖ್ಯವಾಗಿ ಹೆಚ್ಚಿನವರು ಮಾಡುವ ತಪ್ಪು ಏನೆಂದರೆ, ಕಾಳು ಮೆಣಸು, ಜೀರಿಗೆ ಪೌಡರ್ ಎಲ್ಲವನ್ನೂ ಹಾಕಿದ ಮೇಲೆ ರಸಂ ಅನ್ನು ಹೆಚ್ಚು ಕುದಿಯುಸುವುದು. ಆ ತಪ್ಪು ಮಾಡಬೇಡಿ. ಒಂದೇ ಒಂದು ಕುದಿ ಬಂದ ಮೇಲೆ ಗ್ಯಾಸ್ ಆಫ್ ಮಾಡಿ ಒಂದು ಮುಚ್ಚಳದಿಂದ ಅದನ್ನು ಮುಚ್ಚಿಬಿಡಿ. ದೀರ್ಘಕಾಲ ಕುದಿಸಿದರೆ ಅಥವಾ ತುಂಬಾ ಕುದಿ ಬರಿಸಿದರೆ, ರಸಂನಲ್ಲಿ ಇರುವ ಘಮಲು ಹಾರಿ ಹೋಗುತ್ತದೆ. ಇದೇ ಕಾರಣಕ್ಕೆ, ಒಂದೇ ಕುದಿಗೆ ಅದನ್ನು ಆಫ್ ಮಾಡಿಬಿಡಿ.
ಇನ್ನೊಂದು ಟಿಪ್ಸ್ ಏನೆಂದರೆ, ರಸಂ ಒಂದು ಕುದಿ ಬಂದ ಮೇಲೆ ನೀವು ಅದಕ್ಕೆ, ಸಾಸಿವೆ, ಜೀರಿಗೆ, ಒಣಮೆಣಸು, ಕರಿಬೇವು, ಬಳ್ಳುಳ್ಳಿ (Optional)... ಹೀಗೆ ಒಗ್ಗರಣೆ ಹಾಕಿದಾಗ, ಆ ಒಂದು ಕುದಿ ಬಂದ ತಕ್ಷಣವೇ ಆಗಿ ಕೂಡಲೇ ಪ್ಲೇಟ್ ಮುಚ್ಚಿಬಿಡಿ. ಮತ್ತೆ ಯಾವುದೇ ಕಾರಣಕ್ಕೂ ಅದನ್ನು ಕುದಿಸಲು ಹೋಗಬೇಡಿ.
ಹೀಗೆ ಮಾಡಿದರೆ, ರಸಂನ ಘಮಲು ದೀರ್ಘಕಾಲ ಇರುತ್ತದೆ. ಇಲ್ಲದೇ ಹೋದರೆ, ಕುದಿಯುವ ವೇಳೆ ಬರುವ ಪರಿಮಳ ಊಟ ಮಾಡುವವರೆಗೆ ಇರುವುದೇ ಇಲ್ಲ. ನೀವು ಈ ರೀತಿ ಒಮ್ಮೆ ಟ್ರೈ ಮಾಡಿ ಆ ಬಳಿಕ ಮ್ಯಾಜಿಕ್ ನೋಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.