
ನರಿಗೆ ಹುಲಿ ವೇಷ ಹಾಕಿದ ಮಾತ್ರಕ್ಕೆ ನರಿಯೇನೂ ಹುಲಿಯಾಗುವುದಿಲ್ಲ. ಇದೀಗ ಈ ಮಾತೇಕೆ ಅಂದರೆ, ಅಮೆರಿಕದಲ್ಲಿ ಡಿಸ್ಕೌಂಟ್ ದರಕ್ಕೆ ಶೂಗಳನ್ನು ಮಾರಾಟ ಮಾಡುವ ಕಂಪನಿಯೊಂದು ಪ್ರಸಿದ್ಧ ಬ್ರ್ಯಾಂಡ್ ಹೆಸರಿನಲ್ಲಿ ಅಂಗಡಿ ತೆರೆದು ತನ್ನ ಶೂಗಳನ್ನು ದುಬಾರಿ ದರಕ್ಕೆ ಮಾರಾಟ ಮಾಡಿ ಭರ್ಜರಿ ಲಾಭಗಳಿಸಿದೆ.
ಪೇಲೆಸ್ ಕಂಪನಿಯ ಶೂಗಳು ಸಾಮಾನ್ಯವಾಗಿ ರಿಯಾಯಿತಿ ದರದಲ್ಲಿ 20 ರಿಂದ 50 ಡಾಲರ್(1395 ರು.ನಿಂದ 3488 ರು.)ಗೆ ಸಿಗುತ್ತವೆ. ಆದರೆ, ಅದೇ ಶೂಗಳನ್ನು ಪಾಲೆಸ್ಸಿ ಬ್ರ್ಯಾಂಡ್ ಶೋ ರೂಮ್‌ನಲ್ಲಿ ಇಟ್ಟು ಭಾರೀ ಪ್ರಚಾರ ನೀಡಲಾಗಿತ್ತು. ಜನರು ಡಿಸ್ಕೌಂಟ್ ಆಸೆಗೆ ಶೂ ಖರೀದಿಸಲು ಮುಗಿಬಿದ್ದಿದ್ದು, 20 ಡಾಲರ್‌ಗೆ ಸಿಗುವ ಶೂಗಳನ್ನು 600 ಡಾಲರ್(41862 ರು.)ಕೊಟ್ಟು ಖರೀದಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.