
ಮೇಷ
ಹಳೆಯ ನೆನಪಲ್ಲಿ ಮರುಗದೆ ಭವಿಷ್ಯವನ್ನು
ಯೋಚಿಸಿ. ಸ್ನೇಹಿತರ ಸಹಕಾರವು ನಿಮಗಿದೆ.
ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಜೋಕೆ.
ವೃಷಭ
ಕಣ್ಣಿನ ದೋಷವು ಈಗ ನಿವಾರಣೆಯಾಗಲಿದೆ.
ಕೂಡಿಟ್ಟ ಹಣವು ವೈದ್ಯರ ಪಾಲಾಗುವುದು.
ಹಾಗಂತ ಯೋಚಿಸಬೇಡಿ. ನೆಮ್ಮದಿಯ ದಿನ.
ಮಿಥುನ
ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ. ಅದಕ್ಕಾಗಿ
ಹೆಚ್ಚು ಯೋಚಿಸಬೇಡಿ. ದೊಡ್ಡವರು ನಿಮಗೆ
ಸಹಕಾರ ನೀಡಲಿದ್ದಾರೆ. ಖುಷಿಯಾಗಿರಿ.
ಕಟಕ
ವ್ಯವಹಾರದಲ್ಲಿ ನಿರೀಕ್ಷಿತ ಲಾಭವಾಗಲಿದೆ.
ಆದರೂ ಇದರಿಂದಲೇ ಸಾಲಗಳು ತೀರು
ವುದಿಲ್ಲ, ಕಷ್ಟಪಡಬೇಕು. ಆಗ ಎಲ್ಲ ಸಾಧ್ಯ.
ಸಿಂಹ
ದೂರದ ಸಂಬಂಧಿಯೊಬ್ಬರು ಸಹಾಯಕ್ಕೆ
ಬಂದು ಮಗನಿಗೆ ಉತ್ತಮ ಸಂಬಂಧವನ್ನು
ಗೊತ್ತು ಮಾಡಲಿದ್ದಾರೆ. ಖುಷಿಯ ದಿನವಿದು.
ಕನ್ಯಾ
ನಿಮ್ಮ ರಾಶಿಯ ಫಲದ ಪ್ರಕಾರ ನೀವು ತುಂಬಾ
ನಿಷ್ಠೂರವಾದಿಗಳು. ಅದನ್ನು ದಿನ ಕ್ರಮೇಣ
ಕಡಿಮೆ ಮಾಡಿಕೊಳ್ಳುತ್ತಾ ಬನ್ನಿ. ಒಳಿತಾಗಲಿದೆ.
ನಿಮ್ಮ ಸೃಜನಾತ್ಮಕ ಕಲ್ಪನೆಯನ್ನು ಸೂಕ್ತ
ನಿಟ್ಟಿನಲ್ಲಿ ಬಳಸಿರಿ. ಕಲಾವಿದರಿಗೆ ಒಳ್ಳೆಯ
ತುಲಾ ದಿನ. ಹಣಕಾಸಿನ ವಹಿವಾಟುಗಳಲ್ಲಿ ಲಾಭ.
ವೃಶ್ಚಿಕ
ಮನೆಯಲ್ಲಿ ನೆಮ್ಮದಿ ಸಿಗಲಿದೆ. ಆಫೀಸಿನ
ಕೆಲಸಗಳಲ್ಲೂ ಅಷ್ಟೆ ತೃಪ್ತಿಯಿದೆ. ಇಂದು ಸ್ವಲ್ಪ
ಗೊಂದಲಗಳು ಸೃಷ್ಟಿಯಾಗಲಿವೆ. ಜೋಕೆ.
ಧನುಸ್ಸು
ನಿಮ್ಮ ಒಳ್ಳೆಯ ವಿಚಾರಗಳಿಂದ ನಿಮಗೆ ಆದರ
ಆತಿಥ್ಯಗಳು ಸಿಗಲಿವೆ. ಸುಭೋಜನವನ್ನು ಸವಿ
ಯುವ ಅವಕಾಶವಿದೆ. ಆಸೆ ಅಷ್ಟು ಸರಿಯಲ್ಲ.
ಮಕರ
ದೂರ ಪ್ರಯಾಣ ಸಂಭವ. ಕ್ರೀಡಾ ಚಟು
ವಟಿಕೆಗಳಲ್ಲಿ ಸಾಧನೆ ಮಾಡಲು ಇದು ಸೂಕ್ತ
ಸಮಯ. ಸದುಪಯೋಗ ಪಡಿಸಿಕೊಳ್ಳಿ.
ಕುಂಭ
ಇಂದಿನ ಸಮಯ ಅನುಕೂಲಕರವಾಗಿದೆ.
ಸಹಾಯಗಳು ತಂತಾನೇ ಒದಗಿ ಬರಲಿವೆ.
ಆರೋಗ್ಯದತ್ತ ಗಮನಹರಿಸುವುದು ಸೂಕ್ತ.
ಮೀನ
ಒತ್ತಡವು ನಿಮ್ಮಲ್ಲಿ ಹೆದರಿಕೆಯನ್ನುಂಟು
ಮಾಡಬಹುದು. ಧೈರ್ಯಗೆಡದಿರಿ. ಸಮಚಿತ್ತ
ಕಾಯ್ದುಕೊಂಡಲ್ಲಿ ಪರಿಸ್ಥಿತಿ ಪೂರಕವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.