ಪರೀಕ್ಷೆಯಲ್ಲಿ ಶೂನ್ಯ ಅಂಕ ಗಳಿಸಿದ ಮಗಳು, ಅಮ್ಮನ ರಿಯಾಕ್ಷನ್ ಫುಲ್ ವೈರಲ್!

By Suvarna News  |  First Published Aug 29, 2023, 4:37 PM IST

ಪರೀಕ್ಷೆಯಲ್ಲಿ ಮಕ್ಕಳ ಮಾರ್ಕ್ಸ್ ಈಗ ಪಾಲಕರಿಗೆ ಇಂಪಾರ್ಟೆಂಟ್. ಹತ್ತಕ್ಕೆ ಹತ್ತು ಬಿದ್ದಿಲ್ಲವೆಂದ್ರೆ ದೊಡ್ಡ ರಂಪಾಟವಾಗುತ್ತೆ. ಇನ್ನು ಸೊನ್ನೆ ಬಿದ್ರೆ ಮಕ್ಕಳ ಕಥೆ ಮುಗಿದಂತೆ. ಆದ್ರೆ ಈ ತಾಯಿ ಮಾಡಿದ ಕೆಲಸ ಮಾತ್ರ ಅಚ್ಚರಿ ಹುಟ್ಟಿಸುತ್ತೆ.
 


ವಾರದ ಪರೀಕ್ಷೆ, ತಿಂಗಳ ಪರೀಕ್ಷೆ, ಆರು ತಿಂಗಳ ಪರೀಕ್ಷೆ ಹೀಗೆ ಪರೀಕ್ಷೇ ಮೇಲೆ ಪರೀಕ್ಷೆ ನಡೆಸಿ ಮಕ್ಕಳು ಹೆಚ್ಚೆಚ್ಚು ಅಂಕ ಪಡೆಯುವಂತೆ ಶಾಲೆಗಳಲ್ಲಿ ಪ್ರಯತ್ನ ನಡೆಯುತ್ತದೆ. ಈಗಿನ ಸ್ಪರ್ಧಾಯುಗದಲ್ಲಿ ಎಲ್ಲ ವಿಷಯಕ್ಕೆ ಔಟ್ ಆಫ್ ಔಟ್ ಬಂದ್ರೂ ಪಾಲಕರಿಗೆ ಸಮಾಧಾನ ಇರೋದಿಲ್ಲ. ಮಕ್ಕಳ ಮೇಲೆ ಒತ್ತಡ ಹೇರ್ತಾನೆ ಇರ್ತಾರೆ. ಅಪ್ಪಿತಪ್ಪಿ ಮಕ್ಕಳ ಮಾರ್ಕ್ಸ್ ಕಡಿಮೆಯಾದ್ರೆ ಕೋಪ ನೆತ್ತಿಗೇರುತ್ತೆ. ಒಂದಿಷ್ಟು ಬೈಗುಳ, ಏಳು ಬಿಳೋದು ಮಾಮೂಲಿ. 

ಬಹುತೇಕ ಪಾಲಕರಿಗೆ ತಮ್ಮ ಮಕ್ಕಳ ಪರೀಕ್ಷೆ (Test) ಅಂಕ ಸೊನ್ನೆ ಬರುತ್ತೆ ಅನ್ನೋದನ್ನು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ಕನಸಿನಲ್ಲಿ ಸೊನ್ನೆ ಕಂಡ್ರೂ ಬಿಚ್ಚಿಬಿದ್ದು ಏಳೋದಲ್ಲದೆ ಮಕ್ಕಳಿಗೆ ಮತ್ತಷ್ಟು ಓದಿನ ಒತ್ತಡ ಹೇರ್ತಾರೆ. ಹೀಗಿರುವಾಗ ಮಗಳಿಗೆ ಝೀರೋ ಬಿದ್ರೂ ಒಂದೂ ಮಾತು ಬೈಯ್ಯದೆ, ಉತ್ತರ ಪತ್ರಿಕೆಗೆ ಸಹಿ ಹಾಕುವ ತಾಯಿ ಮಹಾನಳಲ್ಲದೆ ಮತ್ತೇನು? ಗಣಿತ (Mathematics) ಪರೀಕ್ಷೆಯಲ್ಲಿ 15 ಮಾರ್ಕ್ಸ್ ಗೆ ಸೊನ್ನೆ ತೆಗೆದುಕೊಂಡ ಮಗಳ ಉತ್ತರ ಪತ್ರಿಕೆಗೆ ಸೊಲ್ಲೆತ್ತದೆ ಸಹಿ ಹಾಕಿದ ತಾಯಿ, ಅದ್ರ ಪಕ್ಕದಲ್ಲಿ ಬರೆದ ನೋಟ್ ಎಲ್ಲರ ಗಮನ ಸೆಳೆದಿದೆ.

Tap to resize

Latest Videos

undefined

ಹೊಸ ರೂಲ್ಸ್‌: ಇನ್ಮುಂದೆ ಫ್ಲೈಟ್ ಹತ್ತೋ ಮೊದ್ಲು ಲಗೇಜ್‌ ಮಾತ್ರವಲ್ಲ, ನಿಮ್ಮ ತೂಕನೂ ಪರೀಕ್ಷೆ ಮಾಡ್ಕೊಳ್ಳಿ!

ಇತ್ತೀಚೆಗೆ ಹುಡುಗಿಯೊಬ್ಬಳು ತನ್ನ ಉತ್ತರ ಪತ್ರಿಕೆಯನ್ನು ಟ್ವಿಟರ್‌ (Twitter) ನಲ್ಲಿ ಹಂಚಿಕೊಂಡಿದ್ದಾಳೆ. ಜೈನಬ್ ಎಂಬ ಈ ಹುಡುಗಿ ತನ್ನ ಆರನೇ ತರಗತಿಯ ಗಣಿತ ಪತ್ರಿಕೆಯಲ್ಲಿ 15ಕ್ಕೆ 0 ಅಂಕ ಪಡೆದಿರುವುದನ್ನು ಇದರಲ್ಲಿ ಕಾಣಬಹುದು. ಶಾಲೆಯ ವತಿಯಿಂದ ಪಾಲಕರ ಸಹಿ ಪಡೆದು ತರಬೇಕು ಎಂದು ಪೇಪರ್ ಮೇಲೆ ಬರೆಯಲಾಗಿದೆ. 

ಸೊನ್ನೆ ಅಂಕ ಕಾಣ್ತಿದ್ದಂತೆ ಮಕ್ಕಳು ಮೊದಲು ಕಂಗಾಲಾಗ್ತಾರೆ. ಅನೇಕ ಬಾರಿ ಇದನ್ನು ಪಾಲಕರಿಗೆ ತೋರಿಸದೆ ನಕಲಿ ಸಹಿ ಹಾಕಿಕೊಂಡು ಹೋಗುವವರಿದ್ದಾರೆ. ಆದ್ರೆ ಜೈನಬ್ ಹಾಗೆ ಮಾಡಿಲ್ಲ. ಇದನ್ನು ತಾಯಿಗೆ ನೀಡಿದ್ದಾಳೆ. ತಾಯಿ ಸೊನ್ನೆ ಹಾಕಿದ ಪಕ್ಕದಲ್ಲಿ ಪ್ರಿಯರೇ, ಈ ಫಲಿತಾಂಶವನ್ನು ಒಪ್ಪಿಕೊಳ್ಳುವುದು ತುಂಬಾ ಧೈರ್ಯದ ವಿಷಯ ಎಂದು ಬರೆದಿರೋದನ್ನು ನಾವು ಫೋಟೋದಲ್ಲಿ ನೋಡಬಹುದು. 

ಬೊಂಬೆ ಕಳ್ಕೊಂಡ ಬಾಲೆ ಮುಖದಲ್ಲಿ ಸಂತೋಷ ಮೂಡಿದ್ದು ಹೇಗೆ?

Zainab ಟ್ವಿಟರ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಲ್ಲದೆ ಜೈನಬ್, ಮುಂದೆ ಹೀಗೆ ಬರೆದಿದ್ದಾರೆ, ತನ್ನ ತಾಯಿಯ ಈ ಪ್ರತಿಕ್ರಿಯೆಯು ತನಗೆ ತುಂಬಾ ಧೈರ್ಯವನ್ನು ನೀಡಿತು. ನಾನು ನನ್ನ ಗಣಿತ ಅಧ್ಯಯನವನ್ನು ಮುಂದುವರೆಸಿದೆ. ಕಠಿಣ ಪರಿಶ್ರಮದ ನಂತ್ರ ಉತ್ತಮ ಫಲಿತಾಂಶ ಬರಲು ಶುರುವಾಯ್ತು. ಕೆಲವೇ ವರ್ಷಗಳಲ್ಲಿ ಗಣಿತದಲ್ಲಿ  ಉತ್ತಮ ಅಂಕಗಳನ್ನು ನಾನು ಪಡೆದೆ ಎಂದು ಜೈನಾಬ್ ಬರೆದಿದ್ದಾರೆ.  ಅಷ್ಟೇ ಅಲ್ಲ ನಿಮ್ಮ ಮಗು ವಿಫಲವಾದಾಗ ನೀವು ಅವರಿಗೆ ಹಿಂಸಿಸದಿದ್ದರೆ ಮತ್ತು ಮುಜುಗರಕ್ಕೊಳಗಾಗದಿದ್ದರೆ ಮಾತ್ರ ಮುಂದೆ ಅವರು ಸಾಧನೆ ಮಾಡಲು ಸಾಧ್ಯವೆಂದು ಜೈನಬ್ ಬರೆದಿದ್ದಾರೆ.

ಜೈನಬ್ ಟ್ವಿಟರ್ ಗೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಕೆಲವರು ತಮಾಷೆಯಾಗಿ ಕಮೆಂಟ್ ಮಾಡಿದ್ರೆ ಮತ್ತೆ ಕೆಲವರು ತಾಯಿ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಈವರೆಗೆ 97 ಲಕ್ಷಕ್ಕೂ ಹೆಚ್ಚು ಬಾರಿ ಇದನ್ನು ವೀಕ್ಷಿಸಲಾಗಿದ್ದು, ಸಾವಿರಕ್ಕೂ ಹೆಚ್ಚು ಲೈಕ್ಸ್, ಕಮೆಂಟ್ ಬಂದಿದೆ. 

ನಾನು ಯಾವಾಗಲೂ ತರಗತಿಯಲ್ಲಿ ಫೇಲ್ ಆಗುತ್ತಿದ್ದೆ. ನನಗಿಂತ ಕಡಿಮೆ ಅಂಕ ಯಾರಿಗೆ ಬಂದಿದೆ ಅಂತಾ ಅಮ್ಮ ಕೇಳ್ತಾ ಇದ್ರು. ನನಗಿಂತಲೂ  ಕಡಿಮೆ ಅಂಕ ಪಡೆದುಕೊಳ್ಳುವವರು ಇದ್ದಾರೆ ಎಂಬುದನ್ನು ಹೇಳುವ ಮೂಲಕ ನನಗೆ ನನ್ನ ಬಗ್ಗೆ ಕೆಟ್ಟ ಭಾವನೆ ಬರದಂತೆ ಮಾಡೋದು ಅವರ ಉದ್ದೇಶವಾಗಿತ್ತು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಪಾಲಕರ ಪ್ರೋತ್ಸಾಹ ಮಕ್ಕಳಲ್ಲಿ ಬದಲಾವಣೆ ತರಲು ಸಾಧ್ಯ. ಮಕ್ಕಳು ಎಲ್ಲರಿಗಿಂತ ಹೆಚ್ಚಾಗಿ ತಮ್ಮ ಪಾಲಕರನ್ನು ನಂಬುತ್ತಾರೆಂದು ಇನ್ನೊಬ್ಬರು ಹೇಳಿದ್ದಾರೆ. 
 

found my grade 6 math notebook and love how precious mother was signing every bad test with an encouraging note for me! pic.twitter.com/AEJc3tUQon

— zainab (Taylor’s version) (@zaibannn)
click me!