
ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷದ ಪ್ರಭಾವ ಎಷ್ಟರ ಮಟ್ಟಿಗೆ ಇದೆ ಅಂದರೆ ವೀರ್ಯದಾನಿಗಳೂ ಕಮ್ಯುನಿಸ್ಟ್ ಪಕ್ಷಕ್ಕೆ ನಿಷ್ಠೆ ಹೊಂದಿರಬೇಕು. ಹೌದು, ಕಮ್ಯುನಿಸ್ಟ್ ಸಿದ್ಧಾಂತವನ್ನು ಗರ್ಭದಲ್ಲೇ ಬೆಳೆಸಬೇಕು ಎಂಬ ಸಂದೇಶವನ್ನು ರವಾನಿಸಲು ಬೀಜಿಂಗ್‌ನ ಏಕೈಕ ವೀರ್ಯ ಬ್ಯಾಂಕ್ ಆಗಿರುವ ಪೇಕಿಂಗ್ ಯೂನಿವರ್ಸಿಟಿ ಥರ್ಡ್ ಹಾಸ್ಪಿಟಲ್ ವೀರ್ಯದಾನಿಗಳಿಗೆ ಇಂಥದ್ದೊಂದು ನಿಯಮವನ್ನು ರೂಪಿಸಿದೆ. ಅಲ್ಲದೇ ವೀರ್ಯದಾನಿಗಳು ಆನುವಂಶಿಕ ಅಥವಾ ಸಾಂಕ್ರಾಮಿಕ ಕಾಯಿಲೆಗಳಿಂದ ಹೊರತಾಗಿರುವುದರ ಜೊತೆಗೆ ಬಲವಾದ ಸೈದ್ಧಾಂತಿಕ ಗುಣಗಳನ್ನೂ ಅಳವಡಿಸಿಕೊಂಡಿರಬೇಕು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. ಎರಡು ಸುತ್ತಿನ ವೈದ್ಯಕೀಯ ಪರೀಕ್ಷೆಯ ಬಳಿಕ ಯಶಸ್ವಿಯಾಗಿ ವೀರ್ಯದಾನ ಮಾಡಿದ ದಾನಿಗಳಿಗೆ 58,500 ರು. ನೀಡಲಾಗುವುದು ಎಂದು ಆಸ್ಪತ್ರೆ ಆಮಿಷವೊಡ್ಡಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.