Viral News: ಭಲೇ ಹುಡುಗ.. ಬಾಲ್ಯದಲ್ಲೇ ಒಲಿದಿದೆ ಲಂಚದ ಕಲೆ!

By Suvarna News  |  First Published Aug 22, 2023, 3:32 PM IST

ಈಗಿನ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಲಂಚ ಮುಕ್ತ ದೇಶವನ್ನಾಗಿ ಮಾಡುವ ಆಸೆಯನ್ನು ಸರ್ಕಾರ ಹೊಂದಿದ್ರೆ ಮುಂದಿನ ಪ್ರಜೆಗಳಾದ ಮಕ್ಕಳೇ ಲಂಚದ ದಾರಿ ಹಿಡಿಯುತ್ತಿದ್ದಾರೆ. ದುಡಿದ್ರೆ ಎಲ್ಲ ಎಂಬ ನಂಬಿಕೆ ಮಕ್ಕಳಲ್ಲಿ ಬಲವಾಗ್ತಿದೆ. 
 


ಲಂಚ ಕೊಡೋರಿದ್ದರೆ ಲಂಚ ತೆಗೆದುಕೊಳ್ಳೋರು ಮತ್ತಷ್ಟು ಹುಟ್ಟಿಕೊಳ್ತಾರೆ. ನಮ್ಮ ದೇಶದಲ್ಲಿ ಬಹುತೇಕ ಕೆಲಸ ಲಂಚವಿಲ್ಲದೆ ಆಗೋದಿಲ್ಲ. ಆಧಾರ್ ಕಾರ್ಡ್ ಮಾಡಿಸುವ ಸಂದರ್ಭದಲ್ಲಿ ದಾಖಲೆ ಅದಲ್ಲ ಇದೆಲ್ಲ ಎಂದು ಜನರನ್ನು ಅಲ್ಲಿನ ಸಿಬ್ಬಂದಿ ಅಲೆಸುತ್ತಾರೆ. ಈ ಅಲೆದಾಟದಿಂದ ತಪ್ಪಿಸಿಕೊಳ್ಳಲು ಜನರು 500 – ಸಾವಿರ ರೂಪಾಯಿಯನ್ನು ಅವರ ಜೇಬಿಗೆ ಹಾಕ್ತಾರೆ. ಈ ಹಿಂದೆ ದಾಖಲೆ ಸರಿ ಇಲ್ಲ ಎಂದ ಸಿಬ್ಬಂದಿ ಹಣ ನೋಡ್ತಿದ್ದಂತೆ ನಾನೆಲ್ಲ ಸರಿ ಮಾಡಿಕೊಳ್ತೇನೆ ಎಂದು ಕಾರ್ಡ್ ಗೆ ಸಿದ್ಧತೆ ಮಾಡ್ತಾನೆ. ಸರ್ಕಾರ ಲಂಚಕೋರರ ವಿರುದ್ಧ ನಾನಾ ಕ್ರಮಗಳನ್ನು ತೆಗೆದುಕೊಳ್ತಿದೆಯಾದ್ರೂ ಪ್ರಯೋಜನ ಶೂನ್ಯ. ಯಾಕೆಂದ್ರೆ ಲಂಚ ತೆಗೆದುಕೊಳ್ಳುವ ಜನರ ದುಪ್ಪಟ್ಟು ಜನರು ಲಂಚ ನೀಡ್ತಿದ್ದಾರೆ. 

ಮನೆಯಲ್ಲಿ ಲಂಚ ತೆಗೆದುಕೊಂಡು ಕೆಲಸ ಮಾಡುವವರು ಅಥವಾ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವವರಿದ್ದರೆ ಮಕ್ಕಳು ಇದನ್ನೇ ಕಲಿಯುತ್ತಾರೆ. ಹಣ (money) ನೀಡಿದ್ರೆ ಎಲ್ಲ ಕೆಲಸ ಸುಲಭವೆಂಬ ತಪ್ಪು ಕಲ್ಪನೆಗೆ ಬರುವುದಲ್ಲದೆ ಅವರೂ ದಾರಿ ತಪ್ಪುತ್ತಾರೆ. ಇದಕ್ಕೆ ಟ್ವಿಟರ್ ನಲ್ಲಿ ವೈರಲ್ ಆದ ಒಂದು ನ್ಯೂಸ್ ಸಾಕ್ಷ್ಯವಾಗಿದೆ.

Tap to resize

Latest Videos

ಗಡಿ ದಾಟಿದ ಲವ್ ಸ್ಟೋರಿ; ಪ್ರಿಯಕರನಿಗಾಗಿ ದಕ್ಷಿಣ ಕೊರಿಯಾದಿಂದ ಭಾರತಕ್ಕೆ ಬಂದ ಗೆಳತಿ

ಶಿಕ್ಷಕ (Teacher) ರಿಗೆ ಹಣ ನೀಡಿದ ವಿದ್ಯಾರ್ಥಿ : ಪರೀಕ್ಷೆ (Test) ಅಂದ್ರೆ ಮಕ್ಕಳಿಗೆ ಮಾತ್ರವಲ್ಲ ಪಾಲಕರಿಗೂ ಭಯ. ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಪಡೆಯಲು ಕಷ್ಟಪಟ್ಟು ಓದುತ್ತಾರೆ. ಆದ್ರೆ ಕೆಲ ಮಕ್ಕಳು ಪುಸ್ತಕ ಹಿಡಿಯೋದಿಲ್ಲ. ಲಂಚಕೊಟ್ಟರೆ ನಮ್ಮನ್ನು ಶಿಕ್ಷಕರು ಪಾಸ್ ಮಾಡ್ತಾರೆ ಎನ್ನುವ ಭಾವನೆಯಲ್ಲಿರುತ್ತಾರೆ. ಈ ಹಿಂದೆ ಪರೀಕ್ಷೆ ಉತ್ತರ ಪತ್ರಿಕೆಯಲ್ಲಿ ತನ್ನ ಕಷ್ಟಗಳನ್ನೆಲ್ಲ ಬರೆದು, ಪಾಸ್ ಮಾಡುವಂತೆ ವಿನಂತಿಸಿಕೊಂಡ   ಸುದ್ದಿ ವೈರಲ್ ಆಗಿತ್ತು. ವಿದ್ಯಾರ್ಥಿಗಳು ಪಾಸ್ ಆಗಲು ಉತ್ತರ ಪತ್ರಿಕೆಯಲ್ಲಿ ಚಿತ್ರವಿಚಿತ್ರ ಪ್ರಯೋಗಗಳನ್ನು ಮಾಡ್ತಾರೆ. ಕೆಲವರು ಹಣ ಇಡ್ತಾರೆ. ಈಗ ಮತ್ತೊಬ್ಬ ವಿದ್ಯಾರ್ಥಿ, ಉತ್ತರ ಪತ್ರಿಕೆಯಲ್ಲಿ ಹಣವಿಟ್ಟ ವಿಷ್ಯ ವೈರಲ್ ಆಗಿದೆ.  ಐಪಿಎಸ್ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. 100, 200 ಮತ್ತು 500 ರ ಕೆಲವು ನೋಟುಗಳನ್ನು ನಾವು ಫೋಟೋದಲ್ಲಿ ನೋಡ್ಬಹುದು. ಹಣದ ಆಸೆಗೆ ಶಿಕ್ಷಕರು ತನ್ನನ್ನು ಪಾಸ್ ಮಾಡ್ಲಿ ಎಂದು ಬೋರ್ಡ್ ಎಕ್ಸಾಮ್ ಶೀಟ್‌ನಲ್ಲಿ ವಿದ್ಯಾರ್ಥಿ ಲಂಚವಾಗಿ ಇಷ್ಟು ಹಣವನ್ನು ಇಟ್ಟಿದ್ದನಂತೆ.

ಐಶ್ವರ್ಯಾ ರೈನಂತೆ ಕಣ್ಣುಗಳನ್ನ ಪಡೆಯಲು ನೀವು ಹೀಗೆ ಮಾಡಿ: ಸಚಿವರ ಐಡಿಯಾ ಸಿಕ್ಕಾಪಟ್ಟೆ ವೈರಲ್..!

ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ ತಮ್ಮ @arunbothra ಟ್ವಿಟರ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಶಿಕ್ಷಕರೊಬ್ಬರು ಈ ಫೋಟೋವನ್ನು ಕಳುಹಿಸಿದ್ದಾರೆ. ಬೋರ್ಡ್ ಪರೀಕ್ಷೆಯಲ್ಲಿ ಪಾಸ್ ಮಾಡ್ಲಿ ಎನ್ನುವ ಕಾರಣಕ್ಕೆ ವಿದ್ಯಾರ್ಥಿ ಹಣವನ್ನು ಇಟ್ಟಿದ್ದಾನೆ. ಇದು ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಬಹಳಷ್ಟು ಹೇಳುತ್ತದೆ ಎಂದು ಅರುಣ್ ಬೋತ್ರಾ ಶೀರ್ಷಿಕೆ ಹಾಕಿದ್ದಾರೆ.  

ಅರುಣ್ ಬೋತ್ರಾ ಅವರ ಟ್ವಿಟರ್ ಪೋಸ್ಟನ್ನು 99 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಅನೇಕ ಬಳಕೆದಾರರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲವನ್ನೂ ಹಣದಿಂದ ಖರೀದಿಸಬಹುದು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಬಾಲ್ಯದಲ್ಲಿಯೇ ಈ ಮನಸ್ಥಿತಿ ಬೆಳೆದಿದೆ ಎಂದು ಇನ್ನೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕಾಯ್ದೆಗೂ ಶಿಕ್ಷಣ ವ್ಯವಸ್ಥೆಗೂ ಯಾವುದೇ ಸಂಬಂಧವಿಲ್ಲ. ಕೋವಿಡ್ ನಂತ್ರ ಮಕ್ಕಳ ಪರಿಸ್ಥಿತಿ ಚಿಂತಾಜನಕವಾಗಿದೆ. ಶೇಕಡಾ 15ರಷ್ಟು ಮಕ್ಕಳು ಮಾತ್ರ ಪರೀಕ್ಷೆಯಲ್ಲಿ ಪಾಸ್ ಆಗ್ತಿದ್ದಾರೆ. ಉಳಿದವರು ಝಿರೋ ಮಾರ್ಕ್ಸ್ ತೆಗೆದುಕೊಳ್ತಿದ್ದಾರೆ. ಒಂದು ಮಾರ್ಕ್ಸ್ ನೀಡುವಷ್ಟೂ ಅವರ ಉತ್ತರ ಪತ್ರಿಕೆ ಯೋಗ್ಯವಾಗಿರೋದಿಲ್ಲವೆಂದು ಇನ್ನೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾನೆ. ನೋಟಿಗೆ ಟೇಪ್ ಅಂಟಿಸಲಾಗಿದೆ, ಹಣವೂ ಹೋಯ್ತು, ಪಾಸೂ ಆಗ್ಲಿಲ್ಲ, 500 ರೂಪಾಯಿಗೆ ಪಾಸ್ ಮಾಡೋಕೆ ಸಾಧ್ಯವಾ ಹೀಗೆ ಅನೇಕರು  ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
 

Pic sent by a teacher. These notes were kept inside answer sheets of a board exam by students with request to give them passing marks.

Tells a lot about our students, teachers and the entire educational system. pic.twitter.com/eV76KMAI4a

— Arun Bothra 🇮🇳 (@arunbothra)
click me!