ಎರಡಕ್ಕೂ ಹೆಚ್ಚು ದಿನ ಪ್ರವಾಸ ಹೊರಟಿದ್ದೀರಾದರೆ ಮನೆಯ ಕಡೆ ಒಂದಿಷ್ಟು ಕೆಲಸಗಳನ್ನು ಮಾಡಿಡಬೇಕು. ಇದರಿಂದ ಟ್ರಿಪ್ ಜಾಲಿಯಾಗಿ ಕಳೆಯಲು ಅಡ್ಡಿಯಾಗುವುದಿಲ್ಲ. ಜೊತೆಗೆ ಮನೆಗೆ ಹಿಂದಿರುಗಿದ ಬಳಿಕವೂ ಪೀಸ್ ಆಫ್ ಮೈಂಡ್ ಇರುತ್ತದೆ.
ಮಕ್ಕಳಿಗೆ ರಜೆ, ಹವಾಮಾನವೂ ಪ್ರವಾಸಕ್ಕೆ ಪೂರಕವಾಗಿದೆ. ಸಂಬಂಧಿಕರ ಮನೆಗೆ ಅಥವಾ ದೂರದ ಪ್ರವಾಸಿ ಸ್ಥಳಗಳಿಗೆ ಹೋಗಲು ಪ್ಲ್ಯಾನ್ ಮಾಡಿದ್ದೀರಾದರೆ ಮನೆಯಲ್ಲಿ ಒಂದಿಷ್ಟು ಪೂರಕ ಕೆಲಸಗಳನ್ನು ಮಾಡಿಟ್ಟು ಹೋಗಬೇಕು. ಪ್ರವಾಸದಿಂದ ಹಿಂದಿರುಗಿದ ಬಳಿಕ ಮನೆಯನ್ನು ನೋಡಿ ತಲೆ ಚಿಟ್ಟು ಹಿಡಿಯಬಾರದಲ್ಲ, ಜೊತೆಗೆ ಮನೆಯ ಸುರಕ್ಷತೆಯತ್ತಲೂ ಗಮನ ಹರಿಸಬೇಕು. ಹಾಗಿದ್ದರೆ ಏನೇನು ಕೆಲಸ ಮಾಡಿಟ್ಟು ಹೋಗಬೇಕು ಎಂಬ ಪಟ್ಟಿ ಇಲ್ಲಿದೆ ನೋಡಿ.
ಮರೆಯಾಗುವ ಮುನ್ನ ನೋಡಲೇಬೇಕಾದ ಸ್ಥಳಗಳು
undefined
- ಬಾಕಿ ಉಳಿದ ಬಿಲ್‌ಗಳನ್ನು ಕಟ್ಟಿ. ಯಾವುದೇ ಬಿಲ್‌ಗಳನ್ನು ಅವಧಿ ಮುಗಿವ ಮುನ್ನ ಕಟ್ಟುವುದು ಮುಖ್ಯ. ಫೋನ್, ಕರೆಂಟ್, ಕೇಬಲ್, ನ್ಯೂಸ್ ಪೇಪರ್, ಇಂಟರ್ ನೆಟ್ ಗ್ಯಾಸ್ ಸಿಲಿಂಡರ್ ಸೇರಿದಂತೆ ಎಲ್ಲ ಬಿಲ್ ಗಳನ್ನು ಕಟ್ಟಿ ಮುಗಿಸಿ.
- ಮನೆಯ ಎಲ್ಲ ಡಸ್ಟ್ ಬಿನ್‌ಗಳನ್ನೂ ಖಾಲಿ ಮಾಡಿ. ನೀವು ಮನೆಯಲ್ಲಿಲ್ಲ ಎಂದು ತಿಳಿಯದಂತೆ ಮನೆ ಹೊರಗೆ ಕೂಡ ಸ್ವಚ್ಛ ಮಾಡಿಡಿ. ಹುಲ್ಲುಹಾಸಿದ್ದರೆ ಅದನ್ನು ಕಟಾವು ಮಾಡಿಸಿ. ಏಣಿಯಂಥ ವಸ್ತುಗಳನ್ನು ಇಟ್ಟಿದ್ದರೆ, ಅವನ್ನು ತೆಗೆದಿಡಿ. ಕಳ್ಳರಿಗೆ ಆಹ್ವಾನ ಕೊಡುವಂತೆ ಮನೆ ಇಲ್ಲದಿರಲಿ.
- ಮನೆ ಹೊರಗಿನ ಲೈಟ್ ಸ್ವಿಚ್‌ಗೆ ಕತ್ತಲೆಯಾದೊಡನೆ ಬಲ್ಬ್ ಹತ್ತಿಕೊಳ್ಳುವಂತೆ ಟೈಮರ್ ಸೆಟ್ ಮಾಡಿಸಿ.
- ಹಳೆ ಆಹಾರಗಳನ್ನು ಖಾಲಿ ಮಾಡಿ. ಒಮ್ಮೆ ಮನೆಯಲ್ಲಿ ಯಾವೆಲ್ಲ ಆಹಾರ ಪದಾರ್ಥಗಳಿವೆ ಎಂದು ಗಮನಿಸಿ. ನೀವು ಹಿಂತಿರುಗಿ ಬರುವುದರೊಳಗೆ ಹಣ್ಣು ತರಕಾರಿ, ಹಾಲಿನ ಪದಾರ್ಥಗಳು ಇತ್ಯಾದಿ ಕೆಟ್ಟು ಮನೆಯೇ ಗಬ್ಬು ನಾರಲಾರಂಭಿಸಿರುತ್ತದೆ. ಕ್ರಿಮಿಕೀಟಗಳೂ ನಿಮ್ಮ ಮನೆಯನ್ನು ತಮ್ಮದಾಗಿಸಿಕೊಂಡು ಬಿಡುತ್ತವೆ. ಹೀಗಾಗಿ, ಅವುಗಳನ್ನು ಖಾಲಿ ಮಾಡಿಟ್ಟು ಹೊರಡಿ. ಜೊತೆಗೆ, ಎಲ್ಲ ಬಳಸಿದ ಪಾತ್ರೆಗಳನ್ನೂ ತೊಳೆದಿಡಿ.
- ನಿಮ್ಮ ಮಾತ್ರೆ ಔಷಧಗಳನ್ನು ಪ್ಯಾಕ್ ಮಾಡಿಕೊಳ್ಳಿ. ಕುಟುಂಬದ ಯಾವುದೇ ಸದಸ್ಯರು ಯಾವುದಾದರೂ ಆರೋಗ್ಯ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಅವುಗಳನ್ನು ಸರಿಯಾಗಿ ಪ್ಯಾಕ್ ಮಾಡಿಕೊಳ್ಳಿ.
- ಕುಟುಂಬದ ಇತರರು ಅಥವಾ ನಂಬಿಕಸ್ಥ ನೆರೆ ಮನೆಯವರು ಹಾಗೂ ಗೆಳೆಯರಿಗೆ ವಿಷಯ ತಿಳಿಸಿ. ಆಗಾಗ ಮನೆ ಕಡೆ ಗಮನ ಹರಿಸಿ, ಏನಾದರೂ ಏರುಪೇರಾಗಿದೆಯೇ ಎಂದು ಕಣ್ಣಿಡಲು ತಿಳಿಸಿ.
- ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ ಅವನ್ನು ಗೆಳೆಯರ ಮನೆಯಲ್ಲಿ ಬಿಡುವುದೋ ಅಥವಾ ಸಾಕುಪ್ರಾಣಿಗಳ ಕೇರ್ ಸೆಂಟರ್‌ನಲ್ಲಿ ಬಿಡುವ ವ್ಯವಸ್ಥೆಯನ್ನು ಮಾಡಿ. ಬೌಲ್ ನಲ್ಲಿರುವ ಮೀನಿನ ದಿನಚರಿ ಕೂಡಾ ಏರುಪೇರಾಗದಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ. ಇನ್ನು ಗಿಡಗಳನ್ನು ಬೆಳೆಸಿದ್ದರೆ ನೀವು ಹಿಂದಿರುಗುವವರೆಗೆ ಅವುಗಳಿಗೆ ನೀರುಣಿಸಲು ಬದಲಿ ವ್ಯವಸ್ಥೆ ಮಾಡಿ.
- ಎಲ್ಲ ಎಲೆಕ್ಟ್ರಾನಿಕ್ ವಸ್ತುಗಳನ್ನು ಅನ್ ಪ್ಲಗ್ ಮಾಡಿ. ಅಚಾನಕ್ ಸಿಡಿಲು ಬಂದರೆ ಇಲ್ಲವೇ ಇನ್ಯಾವುದೋ ಕಾರಣಕ್ಕೆ ಎಲೆಕ್ಟ್ರಾನಿಕ್ ವಸ್ತುಗಳು ಬ್ಲ್ಯಾಸ್ಟ್ ಆಗಬಹುದು. ಇದರಿಂದ ದೊಡ್ಡ ಅನಾಹುತವೇ ಆದೀತು. ಹೀಗಾಗಿ ಟಿವಿ, ಫ್ರಿಡ್ಜ್, ಯುಪಿಎಸ್, ಗೀಸರ್ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಅನ್‌ಪ್ಲಗ್ ಮಾಡಿ.
- ಎಲ್ಲ ಕಿಟಕಿ ಬಾಗಿಲುಗಳನ್ನು ಕ್ಲೋಸ್ ಮಾಡಿರುವುದನ್ನು ಎರಡೆರಡು ಬಾರಿ ಚೆಕ್ ಮಾಡಿ.
- ಪತ್ರ, ಕೊರಿಯರ್, ಪೇಪರ್ ಇತರೆ ಸೇವೆಗಳ ವಿತರಕರಿಗೆ ಇಷ್ಟು ದಿನ ಇರುವುದಿಲ್ಲ ಎಂದು ತಿಳಿಸಿ.
- ಮನೆಯಲ್ಲಿರುವ ಒಡವೆ ಹಾಗೂ ಹಣವನ್ನು ಬ್ಯಾಂಕ್ ಲಾಕರ್‌ನಲ್ಲಿಡಿ. ನಂತರ ನಂಬಿಕಸ್ಥ ಗೆಳೆಯನಿಗೆ ಮನೆಯ ಕೀಗಳನ್ನು ನೀಡಿ.
ಟ್ರಾವೆಲ್‌ಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ