ಹಸುಗೂಸಿಗೆ ಹಸುವಿನ ಹಾಲು ಕುಡಿಸಬಹುದಾ?

By Suvarna Web DeskFirst Published Mar 19, 2018, 1:45 PM IST
Highlights

ಕೆಲವೊಮ್ಮೆ ಹಸುಗೂಸಿಗೆ ಅಮ್ಮನ ಎದೆಹಾಲು ಸಿಗುವುದಿಲ್ಲ. ಆಗ ಅಮ್ಮನ ಹಾಲಿಗೆ ಸಂವಾದಿಯಾಗಿ ಲ್ಯಾಕ್ಟೋಜಿನ್‌ನಂಥ ಪೇಯವನ್ನು ಕುಡಿಸುತ್ತಾರೆ.

ಕೆಲವೊಮ್ಮೆ ಹಸುಗೂಸಿಗೆ ಅಮ್ಮನ ಎದೆಹಾಲು ಸಿಗುವುದಿಲ್ಲ. ಆಗ ಅಮ್ಮನ ಹಾಲಿಗೆ ಸಂವಾದಿಯಾಗಿ ಲ್ಯಾಕ್ಟೋಜಿನ್‌ನಂಥ ಪೇಯವನ್ನು ಕುಡಿಸುತ್ತಾರೆ.

ಅದೇ ರೀತಿ ಹಸುವಿನ ಹಾಲನ್ನು ಕುಡಿಸುವವರೂ ಇದ್ದಾರೆ. ಆದರೆ ಇತ್ತೀಚೆಗೆ ಬಂದ ವರದಿಗಳ ಪ್ರಕಾರ, ಮಗುವಿಗೆ 1 ವರ್ಷ ತುಂಬುವ ಮೊದಲೇ ಹಸುವಿನ ಹಾಲು ಕುಡಿಸುವುದು ಆರೋಗ್ಯಕರವಲ್ಲ. ಇದರಿಂದ ಅಲರ್ಜಿ, ಉಸಿರಾಟದ ಸಮಸ್ಯೆ,ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳಬಹುದು.

ಡಾಕ್ಟರ್ಸ್ ಹೇಳೋ ಪ್ರಕಾರ, ಎಳೆಯ ಕೂಸಿಗೆ ಹಸುವಿನ ಹಾಲಿನಲ್ಲಿರುವ ಪ್ರೊಟೀನ್ ಅನ್ನು ಅರಗಿಸಿಕೊಳ್ಳುವ ಶಕ್ತಿ ಇರೋದಿಲ್ಲ. ಹೀಗಾಗಿ ಹಸುವಿನ ಹಾಲಿಗೆ ಒಂದೊಂದು ಮಗುವಿನ ದೇಹ ಒಂದೊಂದು ಥರ ಪ್ರತಿಕ್ರಿಯಿಸಬಹುದು. ಮಗುವಿನ ಕಿಡ್ನಿಗೂ ಇದರಿಂದ ಹಾನಿಯಿದೆ. ಪ್ರತಿರೋಧ ಶಕ್ತಿ ಕ್ಷೀಣಿಸುವ ಸಾಧ್ಯತೆ ಇರುತ್ತದೆ.

click me!