ಬ್ಲಾಕ್ ಕಾಫಿ ಇಷ್ಟ ಪಡೋರು ಸೈಕೋಗಳಂತೆ?

By Suvarna NewsFirst Published Dec 6, 2018, 3:00 PM IST
Highlights

ಕಾಫಿ ಬಗ್ಗೆ ಹಲವರು ತುಂಬಾ ಪರ್ಟಿಕ್ಯುಲರ್ ಆಗಿರುತ್ತಾರೆ. ಬಿಸಿ, ಸಕ್ಕರೆ ಎಲ್ಲವೂ ಸರಿಯಾಗಿದ್ದರೆ ಮಾತ್ರ ಅವರಿಗೆ ಕುಡಿದಿದ್ದು ಕಾಫಿ ಎನಿಸುತ್ತೆ. ಆದರೆ, ಬ್ಲ್ಯಾಕ್ ಕಾಫಿ ಕುಡಿಯೋರ ಬಗ್ಗೆ ಒಂದು ಇಂಟರೆಸ್ಟಿಂಗ್ ಮಾಹಿತಿ ಹೊರ ಬಿದ್ದಿದೆ. ಏನದು?

ಕಡಿಮೆ ಸಕ್ಕರೆ, ಜಾಸ್ತಿ ಹಾಲಿರುವ ಕಾಫಿ ಎಂದರೆ ಕೆಲವರಿಗೆ ಪ್ರಾಣ. ಇನ್ನು ಕೆಲವರಿಗೆ ಕಾಫಿಗೆ ಹಾಲೇ ಬೇಡ. ಬ್ಲ್ಯಾಕ್ ಕಾಫಿ ಕುಡಿಯೋ ಅಭ್ಯಾಸವಿರುತ್ತದೆ. ಆದರೆ, ಇಂಥ ಕಾಫಿಯನ್ನು ಸ್ವಾದಿಸುವವರು ಮಾನಸಿಕ ಅಸ್ವಸ್ಥರಂತೆ!

ಪಾಂಡಾ ಲದ್ದಿಯ ಒಂದು ಕಪ್ ಗ್ರೀನ್ ಟೀಗೆ 2.5 ಲಕ್ಷ ರೂ.

ಹೌದು. ಇಂಥದ್ದೊಂದು ವರದಿಯನ್ನು ಆಸ್ಟ್ರೇಲಿಯಾದ ಸಂಶೋಧನೆಯೊಂದು ನೀಡಿದೆ. ಡಿಕಾಕ್ಷನ್, ಹಾಲು, ಸಕ್ಕರೆ..ಎಲ್ಲವೂ ಸಮ ಪ್ರಮಾಣದಲ್ಲಿದ್ದರೆ ಕಾಫಿ ರುಚಿ ಹೆಚ್ಚಾಗುತ್ತದೆ. ಆದರೆ, ಏನೂ ಇಲ್ಲದ ಬ್ಲ್ಯಾಕ್ ಕಾಫಿಯೂ ಮನುಷ್ಯನಿಗೆ ರುಚಿ ಎನಿಸಿದರೆ, ಅವನಿಗೆ ಏನೋ ಮಾನಸಿಕ ಸಮಸ್ಯೆ ಕಾಡುತ್ತಿದೆ ಎಂದರ್ಥ ಎನ್ನುತ್ತದೆ, ಈ ವರದಿ.

ಸಂಶೋಧನೆಯಲ್ಲಿ ಸಾವಿರ ಜನರನ್ನು ಒಂದೆಡೆ ಸೇರಿಸಲಾಗಿತ್ತು. ವಿಧ ವಿಧವಾದ ಕಾಫಿ ನೀಡುವ ಮೂಲಕ ಅವರ ಮನಃಸ್ಥಿತಿಯನ್ನು ಪರೀಕ್ಷಿಸಲಾಯಿತು. ಕಹಿಯಾಗಿರೋ ಬ್ಲ್ಯಾಕ್ ಕಾಫಿಯನ್ನು ಆಸ್ವಾಧಿಸುವವರ ಮನಸ್ಸೂ ಕಹಿ ಕಹಿಯಾಗಿಯೇ ಇರುತ್ತದೆ ಎಂದು ಈ ಸಂಶೋಧನೆ ಹೇಳಿದೆ. ಅವರು ವಿಕೃತ ಮನಸ್ಸಿನವರೂ ಆಗಿರಬಹುದು, ಎಂಬುವುದು ಈ ಸಂಶೋಧನೆಯಿಂದ ತಿಳಿದು ಬಂದಿದೆ. ಆದರೆ, ಸಿಹಿ ಸಿಹಿ ಕಾಫಿ ಕುಡಿಯೋರ ಮನಸ್ಸೂ ಸಿಹಿಯಾಗಿದ್ದು, ಮೃದು ಸ್ವಭಾವಿಗಳಾಗಿರುತ್ತಾರೆಂದು ಸಂಶೋಧನೆ ಹೇಳುತ್ತದೆ.

ಫಿಲ್ಟರ್ ಕಾಫಿಯಿಂದ ಕ್ಯಾಪಿಚೋನೋ ತನಕ: ಅಹಾ ಕಾಫಿ ರುಚಿ

ನಮ್ಮ ಆಯ್ಕೆ, ಇಷ್ಟವಾಗುವ ರುಚಿಗೂ, ಮನಸ್ಸಿಗೂ ಸಂಬಂಧವಿರುತ್ತದೆ. ನಮ್ಮ ಆಸೆ, ಆಕಾಂಕ್ಷೆಗಳು ನಮ್ಮ ಮನಃಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ, ಎಂಬುವುದು ಈ ಸಂಶೋಧನೆಯ ಫಲ. 

click me!