30 ವರ್ಷವಾದರೆ, ಮುಖದಲ್ಲಿ ನೆರಿಗೆ ಬೀಳುವ ಈ ಕಾಲದಲ್ಲಿ ಜಪಾನ್‌ನ ಅಜ್ಜಿಯೊಬ್ಬರು ತಮ್ಮ 80ನೇ ವರ್ಷದಲ್ಲಿ ಕೋಮ ತ್ವಚೆಯಿಂದ ಕಂಗೊಳಿಸಿದ್ದಾರೆ. 80 ವರ್ಷವಾದರೂ ಮುಖದಲ್ಲಿ ಒಂದೇ ಒಂದು ಸುಕ್ಕು ಕಾಣಿಸಿಕೊಳ್ಳದೇ ಇರುವ ಬಗ್ಗೆ ಸ್ವತಃ ಅವರೇ ಮಾತನಾಡಿದ್ದಾರೆ.
ನವದೆಹಲಿ (ಮಾ.23): ನಮಗೆ ವಯಸ್ಸಾಗುತ್ತಿದೆ ಎನ್ನುವುದನ್ನು ಮೊದಲು ತೋರಿಸುವುದೇ ಮುಖ. ವಯಸ್ಸು ಆಗುತ್ತಿದ್ದಂತೆ ಮುಖ ಸುಕ್ಕುಗಟ್ಟುವುದು ಅಲ್ಲಲ್ಲಿ ಗಂಟುಕಟ್ಟಿಕೊಳ್ಳಲು ಆರಂಭವಾಗುತ್ತದೆ. ಇದು ಸಾಮಾನ್ಯ ಪ್ರಕ್ರಿಯೆ ಕೂಡ. ಆದರೆ, ಜಪಾನ್ ಮೂಲದ ಮಹಿಳೆಯೊಬ್ಬರಿಗೆ 80ನೇ ವಯಸ್ಸಿನಲ್ಲಿಯೂ ಮುಖದಲ್ಲಿ ಒಂದೇ ಒಂದು ಸುಕ್ಕು ಕಾಣಿಸಿಕೊಂಡಿಲ್ಲ. ಕನಿಷ್ಠ ಮುಖದಲ್ಲಿ ಚರ್ಮ ನೆರಿಗೆ ಬೀಳಬಹುದು ಎನ್ನುವ ಕುರುಹೂ ಕೂಡ ಇಲ್ಲ. ಪ್ರಸ್ತುತ ಅಮೆರಿಕದ ಲಾಸ್ ಏಂಜಲಿಸ್‌ನಲ್ಲಿ ವಾಸವಾಗಿರುವ ತೋಶಿಕೋ ಇಟೋ ಎನ್ನುವ ಮಹಿಳೆಗೆ ಈಗ ಸರಿಯಾಗಿ 80 ವರ್ಷ. ಆದರೆ, ಅವರನ್ನು ನೋಡಿದರೆ, ಯಾರೂ ಕೂಡ 80 ವರ್ಷ ಎಂದು ಹೇಳಲು ಸಾಧ್ಯವೇ ಇಲ್ಲ. ಇಳಿ ವಯಸ್ಸಿನವರಾದರೂ ಅವರ ಮುಖದಲ್ಲಿ ಒಂದೇ ಒಂದು ಸುಕ್ಕು ಕಾಣಿಸಿಕೊಂಡಿಲ್ಲ ಅದಲ್ಲದೆ, ಮುಖದಲ್ಲಿ ವಯಸ್ಸಾಗುತ್ತಿದೆ ಎನ್ನುವ ಯಾವ ಲಕ್ಷಣ ಕೂಡ ಕಂಡಿಲ್ಲ.
ಆಕೆಯ 36 ವರ್ಷದ ಮೊಮ್ಮಗಳು ಯುರಿ ಲೀ ಪ್ರಖ್ಯಾತ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್, ಈಕೆ ಹೇಳುವ ಪ್ರಕಾರ ಅವರ ಅಜ್ಜಿ ತೋಶಿಕೋ ಇಟೋ ಇಲ್ಲಿಯವರೆಗೂ ತಮ್ಮ ಚರ್ಮಕ್ಕೆ ಬೋಟೆಕ್ಸ್ ಅಥವಾ ಫಿಲ್ಲರ್ಸ್‌ಗಳನ್ನು ಬಳಕೆ ಮಾಡಿಯೇ ಇಲ್ಲ ಎನ್ನುತ್ತಾರೆ. ಈ ವಯಸ್ಸಿನಲ್ಲೂ ಅವರ ಚರ್ಮ ಹೊಳಪು ಉಳಿಸಿಕೊಂಡಿರಲು ಇದೇ ಕಾರಣವಿರಬಹುದು ಎಂದೂ ಹೇಳುತ್ತಾರೆ. ತಮ್ಮ 20ನೇ ವರ್ಷದಿಂದಲೂ ಅಜ್ಜಿ ಚರ್ಮದ ಬಗ್ಗೆ ವಿಶೇಷ ಕಾಳಜಿ ತೋರುತ್ತಿದ್ದರು ಎಂದು ಯೂರಿ ಹೇಳಿದ್ದಾರೆ.
ಅವರು ತಮ್ಮ ಚರ್ಮಕ್ಕೆ ವಿಟಮಿನ್ ಸಿ ಹೇರಳವಾಗಿ ಹೊಂದಿರುವ ಲೋಷನ್‌ಅನ್ನು ಪ್ರತಿನಿತ್ಯ ಹಚ್ಚುತ್ತಾರೆ. ಇದು ದೇಹದಲ್ಲಿ ಕೊಲೋಜಿನ್ ಮಟ್ಟವನ್ನು ಏರಿಸಲು ಕಾರಣವಾಗುತ್ತದೆ ಎನ್ನುತ್ತಾರೆ. ಸೂರ್ಯನ ನೇರಳಾತೀತ ಕಿರಣಗಳಿಂದ ಹಾಳಾದ ಚರ್ಮದ ಸೆಲ್‌ಗಳನ್ನೂ ಕೂಡ ಇದೇ ರಿಪೇರಿ ಮಾಡುತ್ತದೆ ಎನ್ನುತ್ತಾರೆ. ಸಾಮಾನ್ಯವಾಗಿ ದೇಹದಲ್ಲಿ ಸರಿಯಾದ ಪ್ರಮಾಣದ ಕೊಲೊಜಿನ್ ಮಟ್ಟವನ್ನು ಕಾಯ್ದುಕೊಳ್ಳುವುದರಿಂದ ವಯಸ್ಸಾಗುತ್ತಿದ್ದರೂ ಚರ್ಮ ಮಾತ್ರ ಹೊಳಪು ಕಳೆದುಕೊಳ್ಳುವುದಿಲ್ಲ. ಇನ್ನ ತಮ್ಮ ತ್ವಚೆ ಸುಕ್ಕು ಕಾಣದೇ ಇರಲು ನಾನು ತಿನ್ನುವ ಆಹಾರ ಪದಾರ್ಥಗಳೂ ಪ್ರಮುಖ ಕಾರಣ ಎಂದು ತೊಶಿಕೋ ಹೇಳುತ್ತಾರೆ. ಬೆಳಗಿನ ತಿಂಡಿಯ ವೇಳೆ ಹೆಚ್ಚಿನ ಆಹಾರವನ್ನು ತಿನ್ನುತ್ತೇನೆ ಎನ್ನುವ ತೋಶಿಕೋ, ಎಲ್ಲಾ ಆಹಾರಗಳನ್ನು ಮನೆಯಲ್ಲಿಯೇ ಸಿದ್ಧ ಮಾಡುತ್ತೇನೆ ಎಂದಿದ್ದಾರೆ.
ಮುಖಕ್ಕೆ ರಿಸ್ಟೋರ್ & ರಿಂಕಲ್ ಜೆಲ್ ಕೂಡ ಹಚ್ಚಿಕೊಳ್ಳುತ್ತೇನೆ ಎಂದು ತೋಶಿಕೋ ಹೇಳುತ್ತಾರೆ. ಇದು ನನ್ನ ಮುಖ ಇನ್ನಷ್ಟು ಹೊಳೆಯಲು ಕಾರಣವಾಗುತ್ತದೆ ಎಂದಿದ್ದಾರೆ. ಅದಲ್ಲದೆ, ಅವರು ಸುಡುವ ಬಿಸಿಲಿನ ಸಮಯದಲ್ಲಿ ಮನೆಯಿಂದ ಹೊರಗಡೆ ಕಾಲಿಡೋದಿಲ್ಲ. ಇದೂ ಕೂಡ ಚರ್ಮದ ಆರೋಗ್ಯಕ್ಕೆ ಕಾರಣ ಎಂದಿದ್ದಾರೆ.
ಸೆಲೆಬ್ರಿಟಿಗಳ ಮುಖ ಫಳಫಳ ಹೊಳೆಯೋದು ಸುಮ್ನೆ ಏನಲ್ಲ, ಸ್ಕಿನ್ ರೊಟೀನ್ ಹೇಗಿರುತ್ತೆ ನೋಡಿ
ಅದರೊಂದಿಗೆ ಸೋಯಾಬಿನ್ ಪ್ರೋಟೀನ್ ಪೌಡರ್ ಹಾಗೂ ವಿಟಮಿನ್ ಸಿ ಪೌಡರ್‌ನಿಂದ ಮಾಡಿದ ಪಾನೀಯವನ್ನು ಪ್ರತಿದಿನ ಸೇವನೆ ಮಾಡುತ್ತಾರೆ. ಮಿಕಿ ಇಕೋ 37 ಎನ್ನುವ ಸಪ್ಲಿಮೆಂಟ್‌ಅನ್ನು ತಾವು ಸೇವಿಸುತ್ತಿರುವುದಾಗಿ ತಿಳಿಸಿದ್ದಾರೆ. ಇದು ಅವಕಾಡೋ ಎಣ್ಣೆಯ ಸಪ್ಲಿಮೆಂಟ್ ಆಗಿದೆ. ಅದರೊಂದಿಗೆ ಹಲವು ವಿಧಧ ತರಕಾರಿಗಳು, ಯೋಗರ್ಟ್‌ನಂಥ ಆಹಾರಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಇದು ACE2 ಎಂಬ ಪ್ರಮುಖ ಕಿಣ್ವದ ಮಟ್ಟವನ್ನು ದೇಹದಲ್ಲಿ ಕಡಿಮೆ ಮಾಡಿ ಚರ್ಮದ ಆರೋಗ್ಯವನ್ನು ರಕ್ಷಿಸುತ್ತದೆ.
ಹುಡುಗರು, ಗರ್ಲ್ಸ್ ಬ್ಯೂಟಿ ಪ್ರಾಡಕ್ಟ್ ಬಳಸ್ಬೋದಾ,ತಜ್ಞರು ಏನಂತಾರೆ?
ತಮ್ಮ ಟಿಕ್‌ಟಾಕ್ ವಿಡಿಯೋದಲ್ಲಿ ತೋಶಿಕೋ ಇಟೋ ತಮ್ಮ ಹೊಳಯುವ ಚರ್ಮದ ಬಗ್ಗೆ ಮಾತನಾಡಿದ್ದಾರೆ. ಬ್ಯೂಟಿ ಪ್ರಾಡಕ್ಟ್‌ಗಳಿಗಿಂತ ಹೆಚ್ಚಾಗಿ ಆರೋಗ್ಯಕರ ಆಹಾರವನ್ನು ಸೇವನೆ ಮಾಡಬೇಕು ಎಂದಿದ್ದಾರೆ. ವಾಷಿಂಗ್ಟನ್ ಇನ್ಸ್‌ಟಿಟ್ಯೂಟ್ ಆಫ್ ಡರ್ಮಟಾಲಾಜಿಕ್‌ನಲ್ಲಿ ಲೇಸರ್ ಸರ್ಜರಿ ತಜ್ಞರಾಗಿರುವ ಡಾ. ಟೀನಾ ಎಲಾಸ್ಟೆರ್ ಹೇಳುವ ಪ್ರಕಾರ, ಸೂರ್ಯನ ಕಿರಣಗಳಿಂದ ರಕ್ಷಣೆ ಹಾಗೂ ಅವರ ಜೀನ್ಸ್, 80 ವಯಸ್ಸಿನಲ್ಲೂ ತೋಶಿಕೋ ಇಟೋ ತ್ವಚೆ ಸುಕ್ಕಾಗದೇ ಇರಲು ಕಾರಣ ಎಂದಿದ್ದಾರೆ.