
ನನ್ನ ಅಣ್ಣನ ಗೆಳೆಯನ ಜೊತೆಗೆ ನನಗೆ ಪ್ರೀತಿಯಾಗಿದೆ. ಅವನು ಅಣ್ಣನ ಜೊತೆಗೆ ಆಗಾಗ ನಮ್ಮ ಮನೆಗೆ ಬರುತ್ತಿದ್ದಾಗ ಅವನನ್ನು ಮತ್ತೆ ಮತ್ತೆ ನೋಡಿ ತುಂಬಾ ಇಷ್ಟವಾಗಿಬಿಟ್ಟಿದ್ದಾನೆ. ಆದರೆ ಇದನ್ನು ಅವನಿಗೆ ನಾನಾಗಿಯೇ ಹೇಳುವ ಧೈರ್ಯವಿಲ್ಲ. ಅವನಿಗೆ ನಾನೆಂದರೆ ಇಷ್ಟವಾ? ಅದೂ ಗೊತ್ತಿಲ್ಲ. ಮನೆಗೆ ಅತಿಥಿಯಾಗಿ ಬಂದವರ ಬಗ್ಗೆ ಹೀಗೆಲ್ಲಾ ಯೋಚನೆ ಮಾಡಬಾರದು, ನನ್ನ ಮನೆಯವರಿಗೆ ಈ ವಿಚಾರ ಗೊತ್ತಾದರೆ ಏನು ಅಂದುಕೊಳ್ಳುತ್ತಾರೋ?
ಆ ಹುಡುಗನಿಗೆ ಗೊತ್ತಾದರೆ ನನ್ನ ಬಗ್ಗೆ, ನನ್ನ ಅಣ್ಣನ ಬಗ್ಗೆ, ನಮ್ಮ ಮನೆಯವರ ಬಗ್ಗೆ ಏನೆಂದುಕೊಂಡಾನು ಎನ್ನುವ ಭಯ ಕಾಡುತ್ತಲೇ ಇದೆ. ಈಗ ನನ್ನ ಪ್ರೀತಿ ಉಳಿಸಿಕೊಳ್ಳುವುದಾ? ಎಲ್ಲವನ್ನೂ ಮರೆತು ಸುಮ್ಮನಾಗುವುದಾ? ಗೊತ್ತಾಗುತ್ತಿಲ್ಲ. ದಯವಿಟ್ಟು ಏನಾದರೂ ಸಲಹೆ ನೀಡಿ.
- ಹೆಸರು ಬೇಡ
ನಿಮ್ಮಲ್ಲಿ ಅವಳ ಮನಸ್ಸಿಗೆ ಮುದ ನೀಡುವಂಥ ಸಲಹೆಗಳಿದ್ದರೆ suvarnanewsindia@gmail.com ಇಲ್ಲಿಗೆ ಮೇಲ್ ಮಾಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.