ಬೇಡದ ಕೂದಲ ಮುಕ್ತಿಗೆ ರೇಜರ್ ಬಳಸುವುದೇ ಆದಲ್ಲಿ....?

By Web DeskFirst Published Jul 28, 2019, 12:06 PM IST
Highlights

ಸದಾ ಬ್ಯೂಟಿ ಪಾರ್ಲರ್‌ಗೆ ತಡಕಾಡಲು ಸಾಧ್ಯವಿಲ್ಲವಾದಾಗ ಹುಡುಗಿಯರು ಸಾಮಾನ್ಯವಾಗಿ ರೇಜರ್ ಬಳಸುತ್ತಾರೆ. ಇದರಿಂದ ಖರ್ಚು ಉಳಿಯುತ್ತದೆ, ಬೇಗನೆ ಕೆಲಸವೂ ಮುಗಿಯುತ್ತದೆ. ಆದರೆ ರೇಜರ್ ಮೂಲಕ ಶೇವ್ ಮಾಡೋದು ಸರಿಯೇ? 

ಸಮೃದ್ಧ ಕೇಶ ರಾಶಿಗೆ ಮರುಳಾಗದ ಹೆಣ್ಣು ಯಾರಿದ್ದಾರೆ ಹೇಳಿ? ಆದರದು ಬೇಡದ ಜಾಗದಲ್ಲಿ ಬಂದರೆ, ಹೆಣ್ಣಿಗೆ ಹಿಂಸೆ. ತನ್ನ ಸೌಂದರ್ಯಕ್ಕೇ ಕುತ್ತೆಂದು ಭಾವಿಸುತ್ತಾಳೆ. ಸ್ಲೀವ್‌ಲೆಸ್ ಬ್ಲೌಸ್ ಹಾಕಿಕೊಳ್ಳಲು ಆಗೋದಿಲ್ಲ, ಕೇಪ್ರಿಗಂತೂ ಗುಡ್ ಬೈ ಹೇಳುವುದು ಅನಿವಾರ್ಯ.  ಅರ್ಜೆಂಟಾಗಿ ರೇಸರ್ ಮೊರೆ ಹೋಗುವುದೇ ಹೆಚ್ಚು. ಆದರೆ, ಇದನ್ನೇ ಬೇಡವೆನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್‌ಗಳು.  ಆದರೂ, ರೇಸರ್ ಬಳಸುವುದಾದರೆ, ಹೀಗ್ ಮಾಡಿ...

ಶೇವಿಂಗ್ ಬಳಿಕ ತ್ವಚೆ ತುರಿಸುತ್ತದೆಯೇ? ಹೀಗ್ ಮಾಡಿ

- ಡಬಲ್ ಬ್ಲೇಡ್ ಇರುವ ರೇಜರ್ ಬಳಸಬೇಡಿ. ಇದರಿಂದ ಸ್ಕಿನ್‌ ಡ್ಯಾಮೇಜ್ ಆಗಿ, ಇರಿಟೇಷನ್ ಅಗುತ್ತದೆ. 

- ರೇಸರ್ ಶಾರ್ಪ್ ಇರಲಿ.  ಹಳೇ ರೇಜರ್ ಬೇಡ. ಎಲೆಕ್ಟ್ರಿಕ್ ಟ್ರಿಮ್ಮರ್ ಓಕೆ. 

- ರೇಜರ್ ಸ್ಕಿನ್ ಮೇಲೆ ಸ್ಮೂತ್ ಆಗಿ ಹೋಗೋದಿಲ್ಲ ಅಥವಾ ಕೂದಲು ಸರಿಯಾಗಿ ತೆಗೆಯಲೂ ಆಗುತ್ತಿಲ್ಲ ಎಂದಾದರೆ ಹೊಸ ರೇಜರ್ ಬಳಸಿ.. 

- ಅಂಡರ್ ಆರ್ಮ್ ಒಣಗಿರುವಾಗ ಶೇವ್ ಮಾಡಬೇಡಿ.  ಬಿಸಿ ನೀರಿನಿಂದ ಮೊದಲಿಗೆ ಒದ್ದೆ ಮಾಡಿ ಮೂರು ನಿಮಿಷದ ನಂತರ ಶೇವ್ ಮಾಡಿ. 

ಶೇವ್ ಮಾಡಿದ್ಮೇಲೆ ಹೀಗ್ ಮಾಡಬೇಕಾ?

- ಶೇವಿಂಗ್ ಜೆಲ್ ಬಳಸಿ. ಇದರಿಂದ ಶೇವ್ ಮಾಡಲು ಸುಲಭ. ಯಾವುದೇ ಗಾಯ, ಇರಿಟೇಷನ್ ಸಹ ಆಗುವುದಿಲ್ಲ. 

- ಅಂಡರ್ ಆರ್ಮಿನಲ್ಲಿ ಎಲ್ಲಾ ದಿಕ್ಕಿನಲ್ಲಿಯೂ ಕೂದಲು ಬೆಳೆಯುತ್ತದೆ. ಆದುದರಿಂದ ಎಲ್ಲಾ ದಿಕ್ಕಿನಿಂದಲೂ ಶೇವ್ ಮಾಡಿದರೊಳಿತು.

- ಆಫ್ಟರ್ ಶೇವ್, ಇತರೆ ಆಲ್ಕೋಹಾಲ್ ಅಂಶ ಹೊಂದಿದ ಜೆಲ್ ಬಳಕೆ ಬೇಡ. ಬೇಕಿದ್ದಲ್ಲಿ ಕ್ರೀಮ್ ಅಥವಾ ಎಣ್ಣೆ ಹಚ್ಚಿ.

click me!