ಬೀಟ್‌ರೂಟ್ ದೈನಂದಿನ ಅಡುಗೆಗೆ ಬಳಸುವ ಮುಖ್ಯ ತರಕಾರಿಗಳಲ್ಲಿ ಒಂದು. ಇದನ್ನು ಕೇವಲ ಪಲ್ಯ, ಸಾರು ಮಾಡಿ ಮಾತ್ರವಲ್ಲ ಹಸಿಯಾಗಿ ತಿಂದರೂ ಆರೋಗ್ಯಕ್ಕೆ ಉತ್ತಮ, ಜೊತೆಗೆ ಜ್ಯುಸ್ ಮಾಡಿ ಕುಡಿದರೂ ಉತ್ತಮ. ಇದರ ಪ್ರಯೋಜನಗಳು ಸಾವಿರಾರು....ಏನವು?
- ರಕ್ತದೊತ್ತಡ ನಿಯಂತ್ರಿಸಲು ಬೀಟ್‌ರೂಟ್ ರಸ ಉತ್ತಮ. ಇದರಲ್ಲಿರುವ ನೈಸರ್ಗಿಕ ನೈಟ್ರೇಟ್ ಅಂಶ ರಕ್ತನಾಳಗಳಲ್ಲಿ ನೈಟ್ರಿಕ್ ಆಕ್ಸೈಡ್ ಅಂಶ ಹೆಚ್ಚಿಸಲು ನೆರವಾಗುತ್ತದೆ.
- ಈ ತರಕಾರಿಯಲ್ಲಿ ಕಾರ್ಬೋಹೈಡ್ರೇಟ್ ಅಧಿಕವಿರುವುರುವುದರಿಂದ ಇದನ್ನು ತಿಂದರೆ ದೇಹದ ಶಕ್ತಿ ಹೆಚ್ಚುತ್ತದೆ.
- ಬೀಟ್‌ರೂಟ್‌ನಲ್ಲಿ ರಕ್ತ ಶುದ್ಧೀಕರಿಸುವ ಅಂಶ ಹೆಚ್ಚಿದೆ. ಅಲ್ಲದೆ ಇದರಲ್ಲಿ ವಿಟಮಿನ್ ಸಿ ಅಂಶವೂ ಇದ್ದು, ಚರ್ಮದ ಕಾಂತಿಯನ್ನು ದ್ವಿಗುಣಗೊಳಿಸುತ್ತದೆ.
- ಬೀಟ್‌ರೂಟ್ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಅಲ್ಲದೆ ಬೀಟ್‌ರೂಟ್ ದೇಹದಲ್ಲಿ ರಕ್ತಸಂಚಾರ ಸುಗಮವಾಗುವಂತೆ ನೋಡಿಕೊಳ್ಳುತ್ತದೆ.
- ಇದರಲ್ಲಿ ಫೈಬರ್ ಅಂಶವೂ ಹೇರಳವಾಗಿರುವುದರಿಂದ ಜೀರ್ಣಕ್ರಿಯೆಗೂ ಒಳ್ಳೆಯದು. ಅಲ್ಲದೆ, ಮಲಬದ್ಧತೆ ಇರುವವರಿಗೂ ಇದರ ಸೇವನೆ ಉತ್ತಮ.
- ಫೋಲಿಕ್ ಆ್ಯಸಿಡ್ ಕೊರತೆ ಕಾಡುತ್ತಿದ್ದರೆ, ಮಾತ್ರೆ ತೆಗೆದುಕೊಳ್ಳುವ ಬದಲು ಪ್ರತಿನಿತ್ಯ ಬೀಟ್‌ರೂಟ್ ಜ್ಯೂಸ್ ಕುಡಿದರೆ ಸಾಕು.
- ಬೀಟ್‌ರೂಟ್‌ನಲ್ಲಿ ವಿಟಮಿನ್ ಎ, ಸಿ, ಬೇಟೈನ್, ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ರಂಜಕ, ನೈಸಿನ್ ಮತ್ತು ಕಬ್ಬಿಣಾಂಶ ಅಧಿಕವಿರುತ್ತದೆ.