ಸಿಂಪಲ್, ಟೇಸ್ಟಿ ಕೇಕ್ ರೆಸಿಪಿ ಇಲ್ಲಿದೆ....

By Web DeskFirst Published Dec 25, 2018, 4:56 PM IST
Highlights

ಇನ್ನೇನು ಹೊಸ ವರ್ಷ ಬರುತ್ತಿದೆ. ಕೇಕ್ ಮಾಡಿ, ಕಟ್ ಮಾಡಿ ಸಂಭ್ರಮಿಸಿ. ಅದರಲ್ಲಿಯೂ ಮನೆಯಲ್ಲಿಯೇ ಮಾಡಿರುವ ಕೇಕ್ ಕಟ್ ಮಾಡಿದರೆ ಸಂಭ್ರಮ ಇಮ್ಮಡಿಗೊಳ್ಳುತ್ತದೆ. ಇಲ್ಲಿದೆ ಟೇಸ್ಟಿ ಕೇಕ್ ಮಾಡೋ ಸಿಂಪಲ್ ರೆಸಿಪಿ.

ಸ್ಕೂಲ್ ಶುರುವಾದ ಮೊದಲ ಒಂದು ವಾರ ಓದು ನಮಗೆ ಹೇಗೆ ತುಂಬಾ ಅಚ್ಚುಮೆಚ್ಚಾಗಿರುತ್ತದೆಯೊ, ಹಾಗೆ ಯಾವುದಾದರೂ ಹೊಸ ವಿದ್ಯೆ ಅಥವಾ ಕಲೆಯೂ ಅಷ್ಟೇ. ಕಲಿಯುವ ಹೊಸದರಲ್ಲಿ ಅದರದ್ದೇ ಧ್ಯಾನ. ಕೇಕ್ ಬೇಕಿಂಗ್ ಈಗ ಸದ್ಯಕ್ಕೆ ನಾನು ಹೊಸದಾಗಿ ಅಂಟಿಸಿಕೊಂಡಿರುವ ಹೊಸ ಹವ್ಯಾಸ. ಕಲಿಯುವ ಹೊಸತರಲ್ಲಿ ಕೇಕ್ ತಯಾರಿಸಲು ಒಂದು ಕಾರಣ ಬೇಕಷ್ಟೇ. ಹಾಗೂ ಇವತ್ತು ಕ್ರಿಸ್ಮಸ್ !!!

ಸರಿಯಾದ ಆಳತೆ, ಸ್ಪಲ್ಪ ತಾಳ್ಮೆ ಮತ್ತು ಬೇಕಿಂಗ್ ಬಗ್ಗೆ ಪ್ರೀತಿ ಇದ್ದರೆ ಸಾಕು, ಪರ್ಫೆಕ್ಟ್ ಕೇಕ್ ಮಾಡುವ ಕಲೆ ಕೈ ಹಿಡಿದ ಹಾಗೆ. ಇಲ್ಲಿದೆ ಎಮ್ಮಿ ಎನಿಸೋ ಎಗ್‌ಲೆಸ್ ಟ್ಯೂಟಿ ಫ್ರೂಟಿ ಕೇಕ್ ಮಾಡುವ ವಿಧಾನ:  

ಬೇಕಾಗುವ ಸಾಮಾಗ್ರಗಳು...
- 1.5 ಕಪ್ ಮೈದಾ ಹಿಟ್ಟು
- ½ ಕಪ್ ಟ್ಯುಟಿ ಫ್ರೂಟಿ
- 1 ¼ ಟೀ ಸ್ಪೂನ್ ಬೇಕಿಂಗ್ ಪೌಡರ್
- ½ ಟೀ ಸ್ಪೂನ್ ಬೇಕಿಂಗ್ ಸೋಡಾ
- 1 ಚಿಟಿಕೆ ಉಪ್ಪು
- ¾ ಕಪ್ ಸಕ್ಕರೆ
- ½ ಕಪ್ ಎಣ್ಣೆ/ಬೆಣ್ಣೆ
- 270 ml ಹಾಲು (ಬೆಚ್ಚಗಿರಲಿ)
- 1 ¼ ಟೀ ಸ್ಪೂನ್ ವಿನಿಗರ್ ಅಥವಾ ಲಿಂಬೆ ರಸ
- 1 ಟೀ ಸ್ಪೂನ್ ವೆನಿಲಾ ಎಸೆನ್ಸ್/ ಲೆಮನ್ ಜೆಸ್ಟ್/ ಅರೆಂಜ್ ಜೆಸ್ಟ್ ಅಥವಾ ಎಸೆನ್ಸ್

ಮಾಡುವ ವಿಧಾನ:
- ಮೊದಲು ಕೇಕ್ ಮಾಡುವ ಪಾತ್ರೆಗೆ ಎಣ್ಣೆ/ಬೆಣ್ಣೆ ಸವರಿ  ಗ್ರೀಸ್ ಮಾಡಿ.
- ಒವನ್ ಅನ್ನು ಕೆಲವು ನಿಮಿಷಗಳಷ್ಟು ಕಾಲ ನಲ್ಲಿ ಪ್ರೀ ಹೀಟ್ ಮಾಡಿ.
- ಟ್ಯುಟಿ ಫ್ರೂಟಿಯನ್ನು ಒಂದು ಚಮಚ ಮೈದಾ ಹಿಟ್ಟಿನಲ್ಲಿ ಹೂಡಿ ಬದಿಗಿಡಿ.
- ಒಂದು ಬೌಲಿಗೆ ಮೈದಾ, ಉಪ್ಪು, ಬೇಕಿಂಗ್ ಸೋಡಾ ಮತ್ತು ಪೌಡರ್ ಜರಡಿ ಹಿಡಿದು ರೆಡಿ ಮಾಡಿಕೊಳ್ಳಿ.
- ಇನ್ನೊಂದು ಬೌಲಿಗೆ ಬೆಚ್ಚಗಿನ ಹಾಲು ಮತ್ತು ಲಿಂಬೆ ರಸ ಅಥವಾ ವಿನೆಗರ್ ಹಾಕಿ ಕಲೆಸಿ.
- ನಂತರ ಅದಕ್ಕೆ ಎಸೆನ್ಸ್ ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
- ಸಕ್ಕರೆ ಕರಗಿದ ನಂತರ ಎಣ್ಣೆ ಅಥವಾ ಬೆಣ್ಣೆ ಬೆರೆಸಿ.
- ಈ ಮಿಶ್ರಣಕ್ಕೆ ಹಿಟ್ಟು ಸೇರಿಸಿ, ನಿಧಾನವಾಗಿ ಮಿಕ್ಸ್ ಮಾಡಿ. 
- ಕೊನೆಯಲ್ಲಿ ಟ್ಯೂಟಿ ಫ್ರೂಟಿ ಹಾಕಿ ಕೈಯಾಡಿಸಿ.
- ತಯಾರಾದ ಕೇಕ್ ಹಿಟ್ಟನ್ನು ಗ್ರೀಸ್ ಮಾಡಿ ಇಟ್ಟಿರುವ ಪಾತ್ರೆಗೆ ಸುರಿಯಿರಿ. ಕೊನೆಯಲ್ಲಿ ಹಿಟ್ಟಿನ ಮೇಲ್ಭಾಗಕ್ಕೆ ಹಾಲು ಸವರಿ. ಇದು ಕೇಕಿಗೆ ಗೋಲ್ಡನ್ ಕಲರ್ ನೀಡುತ್ತದೆ. 
- ಪ್ರೀಹೀಟ್ ಮಾಡಿದ ಒವನ್‌ನಲ್ಲಿ ಬೇಕ್ ಮಾಡಲು ಇಡಿ. ನಿಮಿಷಗಳಲ್ಲಿ ಮೃದುವಾದ ಕೇಕ್ ಸವಿಯಲು ರೆಡಿ.

ರುಚಿ ರುಚಿಯಾದ ತಿಂಡಿ ಮಾಡೋ ರೆಸಿಪಿ ಇಲ್ಲಿದೆ

(**ಟೂತ್ ಪಿಕ್ ಚುಚ್ಚಿ ನೋಡಿ. ಅಂಟದೇ ಸರಾಗವಾಗಿ ಟೂತ್ ಪಿಕ್ ಹೊರ ಬಂದರೆ ಕೇಕ್ ರೆಡಿ ಎಂದರ್ಥ. ಇಲ್ಲವಾದರೆ ಇನ್ನೂ ಹತ್ತು ನಿಮಿಷ ಬೇಕ್ ಮಾಡಿ)

- ರಶ್ಮಿ ಕಾರ್ಗಲ್, ಮೇಲಿನಕೊಪ್ಪ

click me!