
ನೀವು ಓರ್ವ ಹುಡುಗಿಯನ್ನು ಪ್ರೀತಿಸುತ್ತಿದ್ದು, ಆಕೆಯನ್ನು ಇಂಪ್ರೆಸ್ ಮಾಡಲು ವರ್ಷಗಳಿಂದ ಶ್ರಮಪಟ್ಟರೂ ಆಕೆ ನಿಮ್ಮೆಡೆ ಆಕರ್ಷಿತಳಾಗದೆ ನಿಮ್ಮನ್ನು ಕೇವಲ ಒಬ್ಬ ಉತ್ತಮ ಗೆಳೆಯನಂತೆ ನೋಡುತ್ತಿದ್ದಾಳೆಂದರೆ ಬೇಸರಿಸದಿರಿ. ಆಕೆಗೆ ನನ್ನ ಪ್ರೀತಿಯನ್ನು ಹೇಗೆ ಅರ್ಥೈಸಲಿ ಎಂದು ಚಿಂತಿಸದಿರಿ. ಈ 6 ಸೈಕಲಾಜಿಕಲ್ ಟಿಪ್ಸ್'ಗಳನ್ನು ಬಳಸಿ ಆಕೆಯನ್ನು ಇಂಪ್ರೆಸ್ ಮಾಡುವುದರೊಂದಿಗೆ, ನಿಮ್ಮ ಗೆಳೆತನವನ್ನು ಪ್ರೀತಿಯಾಗಿ ಬದಲಾಯಿಸಬಹುದಾಗಿದೆ. ಆದರೆ ಆಕೆಯ ಮೇಲೆ ನಿಜವಾಗಿಯೂ ನಿಮಗೆ ಪ್ರೀತಿ ಇದ್ದರಷ್ಟೇ ಈ ಟಿಪ್ಸ್'ಗಳನ್ನು ಬಳಸಿ.
ಮಜದಾಯಕ ಹವ್ಯಾಸ:
ತಯಾವುದಾದರೊಂದು ಮಜದಾಯಕ ಹವ್ಯಾಸವನ್ನು ರೂಡಿಸಿಕೊಳ್ಳಿ. ಆದರೆ ಆ ಹವ್ಯಾಸದಲ್ಲಿ ನೀವಿಷ್ಟಪಡುವ ಹುಡುಗಿಗೂ ಆಸಕ್ತಿ ಇದೆಯೇ ಎಂದು ತಿಳಿದುಕೊಳ್ಳಿ. ಈ ಹವ್ಯಾಸದ ಕುರಿತಾಗಿ ಪದೇ ಪದೇ ಆಕೆಯೊಂದಿಗೆ ಚರ್ಚಿಸುತ್ತಿರಿ.
ಸ್ವಚ್ಛತೆಯ ಕುರಿತಾದ ಕಾಳಜಿ:
ನೀವೂ ಸ್ವಚ್ಛತೆಗೆ ಹೆಚ್ಚು ಗಮನ ಕೊಡದ ಯುವಕರ ಗುಂಪಿಗೆ ಸೇರಿದ್ದರೆ ಆದಷ್ಟು ಬೇಗ ಸ್ವಚ್ಛತೆಯ ಕಡೆ ಗಮನಹರಿಸುವುದನ್ನು ರೂಢಿಸಿಕೊಳ್ಳಿ. ಯಾಕೆಂದರೆ ಸ್ವಚ್ಛತೆ ಕಾಪಾಡಿಕೊಳ್ಳದ ಯುವಕರೆಡೆ ಯಾವುದೇ ಹುಡುಗಿ ಆಕರ್ಷಿತಳಾಗುವುದಿಲ್ಲ. ಹೀಗಾಗಿ ಸ್ವಚ್ಛತೆ ಕುರಿತಾಗಿ ಹೆಚ್ಚಿನ ಗಮನಹರಿಸುವುದು ಅತ್ಯಗತ್ಯ.
ನಿಮ್ಮ ಜೀವನವನ್ನು ಎಂಜಾಯ್ ಮಾಡಿ:
ಒಂದು ವೇಳೆ ನೀವು ಯಾರನ್ನಾದರೂ ಇಷ್ಟಪಡುತ್ತಿದ್ದರೆ, ಯಾವತ್ತೂ ಆಕೆಯ ಹಿಂದೆಯೇ ಅಲೆದಾಡಬೇಡಿ. ಒಂದು ವೇಳೆ ನೀವು ಯಾವತ್ತೂ ಆಕೆಯೊಂದಿಗೇ ಇದ್ದರೆ ಆಕೆ ನಿಮ್ಮ ಮೇಲಿನ ಆಕರ್ಷಣೆ ಕಳೆದುಕೊಳ್ಳಬಹುದು. ಹೀಗಾಗಿ ನಿಮ್ಮ ಲೈಫನ್ನೂ ಎಂಜಾಯ್ ಮಾಡಿಕೊಳ್ಳಿ. ಯಾವ ಮಟ್ಟಿಗೆ ನಿಮ್ಮ ಜೀವನವನ್ನು ಎಂಜಾಯ್ ಮಾಡಬೇಕೆಂದರೆ, ನೀವಿಷ್ಟಪಡುವ ಯುವತಿ ತನ್ನಿಚ್ಛೆಯಿಂದ ನಿಮ್ಮ ಲೈಫ್ ಸ್ಟೈಲ್'ನಿಂದ ಇಂಪ್ರೆಸ್ ಆಗಿ ನಿಮ್ಮೆಡೆಗೆ ಬರುವಂತಿರಬೇಕು.
ಸೀಕ್ರೆಟ್'ಗಳನ್ನು ಶೇರ್ ಮಾಡಿಕೊಳ್ಳಿ:
ಒಂದು ವೇಳೆ ನೀವು ನಿಮ್ಮ ಗೆಳತಿಯನ್ನು ಇಂಪ್ರೆಸ್ ಮಾಡಲು, ಆಕೆ ನಿಮ್ಮ ಜೀವನದಲ್ಲಿ ಎಷ್ಟು ಮಹತ್ವ ಪಡೆದಿದ್ದಾಳೆ ಎಂದು ಅರಿವು ಮೂಡಿಸುವುದು ಕೂಡಾ ಅತ್ಯಗತ್ಯ. ಇದಕ್ಕಾಗಿ ನೀವು ಈವರೆಗೆ ಯಾರೊಂದಿಗೂ ಹಂಚಿಕೊಳ್ಳದ ನಿಮ್ಮ ಕೆಲವೊಂದು ಸೀಕ್ರೆಟ್'ಗಳನ್ನು ಅಕೆಯೊಂದಿಗೆ ಹಂಚಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಆಕೆ ವಿಶೇಷ ಸ್ಥಾನ ಪಡೆದಿದ್ದಾಳೆ ಎಂದು ಅರಿತುಕೊಳ್ಳುತ್ತಾರೆ.
ಕೆಲಸದಲ್ಲಿ ಆಕೆಯ ಸಹಾಯ ಪಡೆಯಿರಿ:
ನೀವು ನಿಮ್ಮ ಗೆಳತಿಯ ಪ್ರತಿಯೊಂದು ಕೆಲಸ ಮಾಡಲು ತಯಾರಿರುತ್ತೀರಾ? ಈ ಅಭ್ಯಾಸವೇನೋ ಒಳ್ಳೆಯದು ಆದರೆ ಇದೇ ಅಭ್ಯಾಸವನ್ನು ಸ್ವಲ್ಪ ಹೆಚ್ಚಿಸುವ ಅಗತ್ಯವಿದೆ. ಕೆಲವೊಂದು ಬಾರಿ ಆಕೆಯಿಂದ ನಿಮ್ಮ ಕೆಲಸಗಳನ್ನೂ ಮಾಡಿಸಿಕೊಳ್ಳಿ. ಹೀಗೆ ಮಾಡುವುದರಿಂದ ಆಕೆಗೂ ಸಮಾನತೆಯ ಅರಿವು ಮೂಡುತ್ತದೆ ಅಲ್ಲದೇ ಸಂಬಂಧದಲ್ಲಿ ಗೌರವ ಸಿಗುತ್ತಿರುವುದನ್ನು ಕಂಡು ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ. ಯಾವತ್ತೂ ಆಕೆ ಹುಡುಗಿ ಹೀಗಾಗಿ ಆಕೆಯಿಂದ ಯಾವುದೇ ಕೆಲಸ ಮಾಡಿಸುವುದಿಲ್ಲ ಎಂಬ ಭಾವನೆ ಮೂಡಿಸದಿರಿ.
ಸ್ಪರ್ಶದ ಸಿಹಿ ಅನುಭವ:
ಗೆಳೆಯ, ಯಾವತ್ತಿನವರೆಗೆ ಗೆಳೆತನದ ಮಿತಿಯಲ್ಲಿ ಇರುತ್ತೀಯಾ? ಒಂದು ವೇಳೆ ಗೆಳೆತನಕ್ಕೆ ಹೊಸ ಹೆಸರು ಕೊಡಬೇಕೆಂದಿದ್ದರೆ ಕೆಲವು ಮಿತಿಗಳನ್ನು ನಿಧಾನವಾಗಿ ದಾಟಬೇಕಾಗುತ್ತದೆ. ನಿಧಾನವಾಗಿ ಆಕೆಯನ್ನು ಸ್ಪರ್ಶಿಸಲಾರಂಭಿಸಿ, ಇದರರ್ಥ ನೀವು ಇದ್ದಕ್ಕಿದ್ದಂತೆ ಆಕೆಯನ್ನು ಕಿಸ್ ಮಾಡುವುದು ಇಲ್ಲವೇ ನಿಮ್ಮ ಗೆಳೆತನವನ್ನೇ ಅಳಿಸಿ ಹಾಕುವ ಕೆಲಸ ಮಾಡುವುದಲ್ಲ. ಉದಾಹರಣೆಗೆ ರಸ್ತೆ ದಾಟುವಾಗ ಆಕೆಯ ಕೈ ಹಿಡಿದರೆ, ಜನಜಂಗುಳಿ ಇದ್ದಾಗ ಆಕೆಯನ್ನು ರಕ್ಷಿಸಲು ಆಕೆಯನ್ನು ಹೆಗಲು ಮುಟ್ಟುವುದು ಹೀಗೆ.
ಆದ್ರೆ ನೀವು ನಿಜಕ್ಕೂ ನಿಮ್ಮ ಗೆಳತಿಯನ್ನು ಪ್ರೀತಿಸುತ್ತಿರುವಿರೆಂದಾರೆ ಮಾತ್ರ ಈ ಟಿಪ್ಸ್'ಗಳನ್ನು ಬಳಸಿ ಆಕೆಯ ಮನಗೆಲ್ಲುವ ಪ್ರಯತ್ನ ಮಾಡಿ, ಆಕೆಯ ಭಾವನೆಗಳೊಂದಿಗೆ ಆಟವಾಡದಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.