ದೇಹ ಅಗತ್ಯ ವಿಟಮಿನ್‌ಗಳನ್ನು ಬಯಸುತ್ತದೆ. ಎಲ್ಲ ಪೋಷಕಾಂಶಗಳೂ ಸಮನಾಗಿ ದೇಹ ಸೇರಿದರೆ ಮಾತ್ರ ಮನುಷ್ಯ ಆರೋಗ್ಯವಾಗಿರಲು ಸಾಧ್ಯ. ಕೆಲವು ವಿಟಮಿನ್‌ಗಳು ಕೊರತೆಯಾದರೆ ಒಂದಲ್ಲ ಒಂದು ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಏನವು?
ಯಾವುದೇ ರೋಗ ಕಾಣಿಸಿಕೊಳ್ಳುವ ಮುನ್ನ ಅದರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅದಕ್ಕೆ ಸರಿಯಾಗಿ ಚಿಕಿತ್ಸೆ ಮಾಡಿಸುತ್ತೇವೆ. ದೇಹದಲ್ಲಿ ಅನಾರೋಗ್ಯ ಲಕ್ಷಣಗಳು ಕಂಡು ಬರಲು ಮುಖ್ಯ ಕಾರಣ ವಿಟಮಿನ್ ಕೊರತೆ. ಯಾವ ವಿಟಮಿನ್ ಕೊರತೆಯಿಂದ ಯಾವ ರೋಗ ಕಾಣಿಸಿಕೊಳ್ಳುತ್ತದೆ ಹಾಗೂ ಅದನ್ನು ದೂರ ಮಾಡುವುದು ಹೇಗೆ ತಿಳಿಯೋಣ....
ಸಿಹಿ ತಿನ್ನುವ ಬಯಕೆ: ಒಂದು ವೇಳೆ ಪದೇ ಪದೇ ಸಿಹಿ ತಿನ್ನುವ ಮನಸ್ಸಾದರೆ ದೇಹದಲ್ಲಿ ಗ್ಲೂಕೋಸ್ ಅಂಶ ಕಡಿಮೆಯಾಗಿದೆ ಎಂದರ್ಥ. ಈ ಸಮಸ್ಯೆ ನಿವಾರಿಸಲು ಹೆಚ್ಚು ಹೆಚ್ಚು ಸಿಹಿ ತಿನ್ನುವುದು ತಪ್ಪು. ಇದಕ್ಕಾಗಿ ಜೇನನ್ನು ಸೇವಿಸಿದರೆ ಒಳಿತು. ಇದರಿಂದ ಹೆಚ್ಚಿನ ಪ್ರಮಾಣದ ಗ್ಲೂಕೋಸ್ ಸಿಗುತ್ತದೆ. ಜೊತೆಗೆ ಹಣ್ಣುಗಳನ್ನು ಸೇವಿಸುವುದೂ ಒಳಿತು. ಹಣ್ಣುಗಳಲ್ಲೂ ಗ್ಲುಕೋಸ್ ಅಂಶ ಇವೆ.
ಒಣ ತ್ವಚೆ: ತ್ವಚೆ ತುಂಬಾ ಡ್ರೈ ಆಗುತ್ತಿದ್ದರೆ ಇದು ವಿಟಮಿನ್ ಇ ಕೊರತೆಯಿಂದ ಕಾಡೋ ಸಮಸ್ಯೆ. ಇದನ್ನು ನಿವಾರಿಸಲು ಪಾಲಕ್ ಮತ್ತು ಬಾದಾಮಿ ಸೇವಿಸಬೇಕು. ಇವೆರಡರಲ್ಲೂ ವಿಟಮಿನ್ ಇ ಹೆಚ್ಚಿನ ಪ್ರಮಾಣದಲ್ಲಿವೆ.
ನಿದ್ರಾ ಹೀನತೆ: ಹಾಸಿಗೆ ಮೇಲೆ ಮಲಗಿ, ಗಂಟೆಯಾದರೂ ನಿದ್ರೆ ಬಾರದಿದ್ದರೆ ಶರೀರದಲ್ಲಿ ಪೊಟ್ಯಾಷಿಯಂ ಕೊರತೆ ಇದೆ ಎಂದರ್ಥ. ಪೊಟ್ಯಾಷಿಯಂ ಕೊರತೆ ಇರುವ ಇನ್ನೊಂದು ಸಂಕೇತ ಮಾಂಸ ಖಂಡಗಳಲ್ಲಿ ನೋವು. ಪೊಟ್ಯಾಷಿಯಂ ಕೊರತೆ ನಿವಾರಿಸಲು ಬಾಳೆಹಣ್ಣು, ಎಳನೀರು ಮತ್ತು ಬೀಟ್ ರೂಟ್ ಸೇವಿಸಬಹುದು. ಇದಲ್ಲದೆ ಕಲ್ಲಂಗಡಿ ಹಣ್ಣು, ಖರಬೂಜವೂ ಒಳ್ಳೆಯದು.
ಸೂರ್ಯನಲ್ಲಿ ಸಿಗೋ ಪೋಷಕಾಂಶವೂ ಈ ತರಕಾರಿಯಲ್ಲಿದೆ...
ಐಸ್ ತಿನ್ನೋ ಬಯಕೆ: ಐಸ್ ತಿನ್ನಬೇಕು ಎನ್ನೋ ಅಥವಾ ತಂಪು ಸೇವಿಸಬೇಕೆಂಬ ಮನಸಾದರೆ ಅದು ಕಬ್ಬಿನಾಂಶದ ಕೊರತೆಯ ಲಕ್ಷಣ. ಇದು ಎರಡು ಮೂರು ತಿಂಗಳು ಮುಂದುವರಿದರೆ ಐರನ್ ಡೆಫಿಷಿಯನ್ಸಿ ಇದೆ ಎಂದರ್ಥ. ಇದಕ್ಕೆ ಒಣ ದ್ರಾಕ್ಷಿ, ಕಡ್ಲೆ, ಹೆಸರು ಕಾಳು ಸೇವಿಸಿದರೆ ಒಳಿತು.