ಹೊಸ ವರ್ಷ ಸಮೀಪಿಸುತ್ತಿದ್ದಂತೆ ಉದ್ಯೋಗಿಗಳು ಮತ್ತು ಟ್ರಾವೆಲ್ ಪ್ರಿಯರು ಮೊದಲು ರಜಾ ದಿನಗಳ ಕ್ಯಾಲೆಂಡರ್ ನೋಡುತ್ತಾರೆ. ಆದರೆ 2027ರ ಕ್ಯಾಲೆಂಡರ್ ಕಾರ್ಪೊರೇಟ್ ಉದ್ಯೋಗಿಗಳಿಗೆ ಕೊಂಚ ನಿರಾಸೆ ತಂದಿದೆ. ಏಕೆಂದರೆ ಬಹುತೇಕ ಪ್ರಮುಖ ಹಬ್ಬಗಳು ಶನಿವಾರ ಮತ್ತು ಭಾನುವಾರವೇ ಬಂದಿವೆ. ಆದರೂ ಬುದ್ಧಿವಂತಿಕೆಯಿಂದ ರಜೆ ಪ್ಲಾನ್ ಮಾಡಿದರೆ ವರ್ಷವಿಡೀ ಭರ್ಜರಿ ಲಾಂಗ್ ವೀಕೆಂಡ್ಗಳನ್ನು ಎಂಜಾಯ್ ಮಾಡಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ 2027ರ ಹಾಲಿಡೇ ಪ್ಲಾನರ್ಗಳು ತಿಳಿಸಿವೆ.
2027ರಲ್ಲಿ ಮಾರ್ಚ್ 6 (ಶನಿವಾರ) ಮಹಾಶಿವರಾತ್ರಿ, ಆಗಸ್ಟ್ 15 (ಭಾನುವಾರ) ಸ್ವಾತಂತ್ರ್ಯ ದಿನಾಚರಣೆ, ಸೆಪ್ಟೆಂಬರ್ 4 (ಶನಿವಾರ) ಗಣೇಶ ಚತುರ್ಥಿ, ಅಕ್ಟೋಬರ್ 2 (ಶನಿವಾರ) ಗಾಂಧಿ ಜಯಂತಿ, ಅಕ್ಟೋಬರ್ 9 (ಶನಿವಾರ) ದಸರಾ/ವಿಜಯದಶಮಿ ಹಾಗೂ ಡಿಸೆಂಬರ್ 25 (ಶನಿವಾರ) ಕ್ರಿಸ್ಮಸ್ ಹಬ್ಬಗಳು ವಾರಾಂತ್ಯದಲ್ಲೇ ಬಂದಿವೆ.
ಜನವರಿ: ಜ.14 ಮಕರ ಸಂಕ್ರಾಂತಿ ಇದ್ದು, ಜ.15ರಂದು ರಜೆ ಹಾಕಿದರೆ ಜ.16-17 ವೀಕೆಂಡ್ ಸೇರಿ 4 ದಿನ ರಜೆ ಸಿಗುತ್ತದೆ. ಹಾಗೆಯೇ ಜ.23-24 ವೀಕೆಂಡ್ ಬಳಿಕ ಜ.25ರಂದು ರಜೆ ಪಡೆದರೆ ಜ.26 (ಗಣರಾಜ್ಯೋತ್ಸವ) ಸೇರಿ 4 ದಿನಗಳ ವಿರಾಮ ಸಿಗಲಿದೆ.
ಮಾರ್ಚ್ (9 ದಿನಗಳ ಬಂಪರ್ ರಜೆ): ಮಾರ್ಚ್ 20-21 ವೀಕೆಂಡ್ ಹಾಗೂ ಮಾ.22ರಂದು ಹೋಳಿ ಇದೆ. ಮಾ.23, 24, 25ರಂದು ಕೇವಲ 3 ದಿನ ರಜೆ ಹಾಕಿದರೆ, ಮಾ.26 (ಗುಡ್ ಫ್ರೈಡೇ) ಹಾಗೂ ಮಾ.27-28 ವೀಕೆಂಡ್ ಸೇರಿ ಬರೋಬ್ಬರಿ 9 ದಿನಗಳ ದೀರ್ಘ ರಜೆ ಸಿಗುತ್ತದೆ!
ಏಪ್ರಿಲ್-ಮೇ: ಏ.3-4 ವೀಕೆಂಡ್ ಬಳಿಕ ಏ.5, 6 ರಜೆ ಹಾಕಿದರೆ ಏ.7ರ ಯುಗಾದಿ ಸೇರುತ್ತದೆ. ಏ.15 ರಾಮನವಮಿ ಬಳಿಕ ಏ.16 ರಜೆ ಪಡೆದರೆ 4 ದಿನ ರಜೆ ಸಿಗಲಿದೆ. ಮೇ 15-16 ವೀಕೆಂಡ್ ಜೊತೆ ಮೇ 17 (ಬಕ್ರೀದ್), ಮೇ 20 (ಬುದ್ಧ ಪೂರ್ಣಿಮೆ) ರಜೆಗಳಿದ್ದು, ಮೇ 21ಕ್ಕೆ ರಜೆ ಹಾಕಿದರೆ ಮೇ 22-23 ವೀಕೆಂಡ್ವರೆಗೆ ವಿಸ್ತರಿಸಬಹುದು.
ಜೂನ್-ಆಗಸ್ಟ್: ಜೂ.16 ಮೊಹರಂ ಬಳಿಕ ಜೂ.17, 18 ರಜೆ ಪಡೆದರೆ ಜೂ.19-20 ಸೇರಿ 5 ದಿನ ರಜೆ ಸಿಗುತ್ತದೆ. ಆಗಸ್ಟ್ 14-15 ವೀಕೆಂಡ್ ಬಳಿಕ ಆ.16ಕ್ಕೆ ರಜೆ ಹಾಕಿದರೆ ಆ.17 (ರಕ್ಷಾ ಬಂಧನ) ವರೆಗೆ 4 ದಿನ ಹಾಗೂ ಆ.25 ಜನ್ಮಾಷ್ಟಮಿ ಬಳಿಕ ಆ.26, 27 ರಜೆ ಪಡೆದರೆ ಆ.28-29 ವೀಕೆಂಡ್ ಸೇರಿ 5 ದಿನಗಳ ಬ್ರೇಕ್ ಸಿಗಲಿದೆ.
ಅಕ್ಟೋಬರ್-ಡಿಸೆಂಬರ್: ಅ.29 ದೀಪಾವಳಿ ಜೊತೆ ಅ.30-31 ವೀಕೆಂಡ್ ಹಾಗೂ ನ.1 ಸೇರಿ ಬರುತ್ತದೆ. ಡಿಸೆಂಬರ್ 24ರಂದು ಒಂದು ದಿನ ರಜೆ ಹಾಕಿದರೆ ಕ್ರಿಸ್ಮಸ್ (ಡಿ.25) ಹಾಗೂ ಡಿ.26 ಭಾನುವಾರ ಸೇರಿ 3 ದಿನಗಳ ವೀಕೆಂಡ್ ಆನಂದಿಸಬಹುದು.
ಟಿಕೆಟ್ ದರ ಏರಿಕೆ: ಮಾರ್ಚ್ನ 9 ದಿನಗಳ ರಜೆ ಹಾಗೂ ಅಕ್ಟೋಬರ್-ನವೆಂಬರ್ ದೀಪಾವಳಿ ವೀಕೆಂಡ್ನಲ್ಲಿ ದೇಶಾದ್ಯಂತ ಪ್ರವಾಸಿಗರ ದಟ್ಟಣೆ ಹೆಚ್ಚಾಗಿ ವಿಮಾನ ದರ ಮತ್ತು ಹೋಟೆಲ್ ಬಾಡಿಗೆ 2 ರಿಂದ 3 ಪಟ್ಟು ಹೆಚ್ಚಾಗುತ್ತದೆ.
ಸ್ಮಾರ್ಟ್ ಟಿಪ್: ಪ್ರವಾಸಕ್ಕೆ 4-5 ತಿಂಗಳು ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡುವುದು ಒಳ್ಳೆಯದು. ಹಾಗೆಯೇ ಗೋವಾ, ಕೊಡಗು, ಊಟಿಯಂತಹ ಜನಪ್ರಿಯ ತಾಣಗಳ ಬದಲು ಕಡಿಮೆ ಜನಸಂದಣಿ ಇರುವ ಆಫ್ಬೀಟ್ (Offbeat) ತಾಣಗಳನ್ನು ಆಯ್ಕೆ ಮಾಡಿದರೆ ಕಡಿಮೆ ಬಜೆಟ್ನಲ್ಲಿ ನೆಮ್ಮದಿಯ ಟ್ರಿಪ್ ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.