ಬಿಗಿಯಾದ ಫ್ಲ್ಯಾಟ್ ಹೊಟ್ಟೆ ಯಾರಿಗೆ ಬೇಡ ಹೇಳಿ? ಕ್ರಾಪ್ ಟಾಪ್ ಹಾಕಿಕೊಂಡು, ಸೀರೆಯಲ್ಲಿ ಉದ್ದನೆ ಸೊಂಟ ತೋರಿಸಿಕೊಂಡು ಓಡಾಡುವ ಹುಡುಗಿಯರನ್ನು ಕಂಡಾಗೆಲ್ಲ ಹೊಟ್ಟೆಯ ನೆಪಕ್ಕಾಗಿ ಗರತಿ ಗೌರಮ್ಮನಂತೆ ವೇಷ ಹಾಕುವ ಯುವತಿಯರಿಗೆ ಹೊಟ್ಟೆಯೊಳಗೆ ಒನಕೆ ಕುಟ್ಟಿದಂತಾಗದಿದ್ದೀತೆ? ಹಾಗಿದ್ದರೆ ಫ್ಲ್ಯಾಟ್ ಹೊಟ್ಟೆಗಾಗಿ ಯಾವ ಆಹಾರ ಬೆಸ್ಟ್ ಎಂದು ತಿಳಿದುಕೊಂಡು ಡಯಟ್‌ನಲ್ಲಿ ಸೇರಿಸಿ.
ನಮ್ಮ ಇಂದಿನ ಜೀವನಶೈಲಿ ಆಹಾರ ಪದ್ಧತಿಯನ್ನೇ ಹೆಚ್ಚೂಕಮ್ಮಿ ಬದಲಿಸಿಬಿಟ್ಟಿದೆ. ಇದರಿಂದ ದೇಹ ಗೊಂದಲಕ್ಕೊಳಗಾಗಿದೆ. ಹೊಟ್ಟೆಯಂತೂ ನಮ್ಮೆಲ್ಲ ನೆಗೆಟಿವ್ ಜೀವನಶೈಲಿಯ ಭಾರವನ್ನು ತಾನು ಹೊತ್ತು ಆಕಾರ ಕಳೆದುಕೊಂಡು ತಿರುಗಾಡುತ್ತಿದೆ. ಈ ಬಾಣಲೆಯಂತಿರುವ ಗುಡುಗುಡಾಣವನ್ನು ಹಾಟ್ ತವಾದಂತೆ ಫ್ಲ್ಯಾಟ್ ಆಗಿಸುವ ಕನಸು ನನಸಾಗಲು ಒಂದಿಷ್ಟು ಪ್ರಯತ್ನ ಬೇಕೇ ಬೇಕು. ಎಲ್ಲಕ್ಕಿಂತ ಮೊದಲು ಆಹಾರ ಪದ್ಧತಿ ಬದಲಾಗಬೇಕು. ಹಣ್ಣುಗಳು, ತರಕಾರಿ, ಬೇಳೆಕಾಳುಗಳು, ತೆಳು ಪ್ರೋಟೀನ್ ಹೊಂದಿರುವ ಆಹಾರಗಳನ್ನು ಡಯಟ್‌ನಲ್ಲಿ ಬಳಸಿ. ಅದಕ್ಕೂ ಮುನ್ನ ಸರಳವಾಗಿ ಹೊಟ್ಟೆ ಬಿಗಿಯಾಸುವ ಗಿಈ ಆಹಾರಗಳನ್ನು ಸೇವಿಸುವುದನ್ನು ರೂಢಿಸಿಕೊಳ್ಳಿ.
ದ್ರಾಕ್ಷಿಹಣ್ಣು
undefined
ವಿಟಮಿನ್ ಎ ಹಾಗೂ ಸಿಯಿಂದ ಶ್ರೀಮಂತವಾಗಿರುವ ದ್ರಾಕ್ಷಿಹಣ್ಣು ಹೊಟ್ಟೆಯ ಬೊಜ್ಜನ್ನು ಕರಗಿಸಲು ಸಹಕಾರಿ. ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಕಡಿಮೆಗೊಳಿಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು.
ಮೊಸರು
ಫ್ಯಾಟ್‌ರಹಿತ ಮೊಸರು ಕ್ಯಾಲ್ಶಿಯಂ ಹಾಗೂ ಪ್ರೊಬೈಯೋಟಿಕ್ಸ್ ಅನ್ನು ಹೇರಳವಾಗಿ ಹೊಂದಿದ್ದು, ಜೀರ್ಣಕ್ರಿಯೆಗೆ ನೆರವಾಗಿ ಆರೋಗ್ಯಯುತ ತೂಕ ಪಡೆದುಕೊಳ್ಳಲು ಸಹಾಯಕ. ಇದರಲ್ಲಿರುವ ಪ್ರೋಟೀನ್ ನಿಮ್ಮ ಸ್ನಾಯುಗಳನ್ನು ಉಳಿಸಿಕೊಂಡು, ಫ್ಯಾಟ್ ಕರಗಿಸುತ್ತದೆ.
ಬೆಣ್ಣೆ ಹಣ್ಣು
ಬೆಣ್ಣೆಹಣ್ಣಿನಲ್ಲಿ ಉತ್ತಮ ಫ್ಯಾಟ್ ಇದ್ದು, ಅದು ನಿಮ್ಮ ದೇಹವನ್ನು ಆರೋಗ್ಯವಾಗಿರಿಸುತ್ತದೆ. ಜೊತೆಗೆ, ನಿಮ್ಮ ತ್ವಚೆಯ ಕಾಂತಿ ಹೆಚ್ಚಿಸುತ್ತದೆ. ಇದು ಹಸಿವನ್ನು ಕಡಿಮೆಗೊಳಿಸಿ, ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ.
ಸೌತೆಕಾಯಿ
ಲೋ ಫ್ಯಾಟ್ ಹಾಗೂ ಹೆಚ್ಚು ನೀರಿನಂಶ ಹೊಂದಿರುವ ಸೌತೆಕಾಯಿಯಲ್ಲಿ ಹೇರಳವಾದ ಆ್ಯಂಟಿ ಆಕ್ಸಿಡೆಂಟ್ಸ್ ಹಾಗೂ ಫೈಬರ್ ಇವೆ. ಇವು ಬೇಡದ ಅಪಾಯಕಾರಿ ವಸ್ತುಗಳು ದೇಹದಲ್ಲಿ ಜಮೆಯಾಗುವುದನ್ನು ತಡೆಗಟ್ಟುತ್ತದೆ.
ಬಾಳೆಹಣ್ಣು
ಹೆಚ್ಚು ಫೈಬರ್ ಹೊಂದಿರುವ ಬಾಳೆಹಣ್ಣು ಬಹುಬೇಗ ನಿಮ್ಮ ಹಸಿವು ನೀಗಿಸಿ, ಹೊಟ್ಟೆ ತುಂಬಿರುವ ಸೂಚನೆ ನೀಡುತ್ತದೆ. ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಅಧಿಕವಾಗಿದ್ದು, ಇದು ದೇಹದಲ್ಲಿ ಅತಿಯಾಗಿ ನೀರು ನಿಲ್ಲುವುದನ್ನು ಕಡಿಮೆ ಮಾಡುತ್ತದೆ.
ಸಾಲ್ಮೋನ್
ಸಾಲ್ಮೋನ್‌ನಲ್ಲಿ ಲೀನ್ ಪ್ರೋಟೀನ್ ಅಧಿಕವಾಗಿದ್ದು, ಮಸಲ್ ಮಾಸ್ ಮೇಂಟೇನ್ ಮಾಡಲು ಸಹಕಾರಿ. ಇದರಲ್ಲಿ ವಿಟಮಿನ್ ಡಿ ಹಾಗೂ ಒಮೆಗಾ 3 ಫ್ಯಾಟಿ ಆ್ಯಸಿಡ್ ಇದ್ದು, ಇವು ಹೊಟ್ಟೆಯ ಬೊಜ್ಜಿಗೆ ಡಬಲ್ ಪಂಚ್ ನೀಡುತ್ತವೆ. ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ.
ಹಸಿಮೆಣಸು
ಈ ಉದ್ದುದ್ದ ಉರಿಮುಖದ ಮುದ್ದುಕುಮಾರ ನಮ್ಮ ದೇಹದ ಚಯಾಪಚಯ ಕ್ರಿಯೆ ಹೆಚ್ಚಿಸಿ, ಫ್ಯಾಟ್ ಕರಗಿಸಲು ಸಹಾಯ ಮಾಡುತ್ತದೆ.
ಆ್ಯಸ್ಪರ್ಜಸ್
ಗ್ರೀನ್ ಟೀ ಆಯ್ತು ಈಗ ಗ್ರೀನ್ ಕಾಫಿ!: ದೇಹದ ತೂಕ ಇಳಿಕೆಗೆ ಬೆಸ್ಟ್!
ಜೀರ್ಣಕ್ರಿಯೆ ಉತ್ತಮಗೊಳಿಸುವ ಆ್ಯಸ್ಪರ್ಜಸ್, ವಿಟಮಿನ್ ಎ ಹಾಗೂ ಸಿಯಿಂದ ಶ್ರೀಮಂತವಾಗಿದ್ದು, ಬೊಜ್ಜನ್ನು ಬಡಿದೋಡಿಸುತ್ತದೆ.
ಸೋಂಪು
ಫೈಬರ್, ಮೆಗ್ನೀಶಿಯಂ, ಕ್ಯಾಲ್ಶಿಯಂ ಹಾಗೂ ಐರನ್ ರಿಚ್ ಇರುವ ಸೋಂಪಿನ ಕಾಳು ಗ್ಯಾಸ್ಟ್ರೋಇಂಟಸ್ಟೈನಲ್ ಮಸಲ್ಸ್ ರಿಲ್ಯಾಕ್ಸ್ ಮಾಡಿ, ಗ್ಯಾಸ್ಟಿಕ್ ಶಮನಗೊಳಿಸುತ್ತದೆ. ಇದನ್ನು ಪ್ರತಿ ಬಾರಿ ಊಟದ ಬಳಿಕ ಸೇವಿಸುವುದರಿಂದ ಹೊಟ್ಟೆ ಉಬ್ಬರಿಸುವುದು ತಪ್ಪುತ್ತಲ್ಲದೆ, ಫ್ಯಾಟ್ ಕರಗಿಸುತ್ತದೆ.
ತೂಕ ಇಳಿಸಿಕೊಳ್ಳೋದು ಕಷ್ಟ ಎನ್ನೋರಿಗೆ ಇಲ್ಲಿವೆ ಟಿಪ್ಸ್...
ಬಾದಾಮಿ
ಬಾದಾಮಿಯಲ್ಲಿ ಫೈಬರ್ ಹೇರಳವಾಗಿದ್ದು, ರಕ್ತದ ಸಕ್ಕರೆ ಮಟ್ಟವನ್ನು ಇಳಿಸಲು ಇದು ಸಹಕಾರಿ. ಇವುಗಳಲ್ಲಿ ಆರೋಗ್ಯಕರ ಫ್ಯಾಟ್ ಹಾಗೂ ಆ್ಯಂಟಿಆಕ್ಸಿಡೆಂಟ್ಸ್ ಅಧಿಕವಾಗಿದೆ. ಹಾಗಿದ್ದರೆ ಮತ್ತೇಕೆ ತಡ, ಈ ಟಮ್ಮಿ ಟೈಟ್ ಮಾಡುವ ಆಹಾರಗಳನ್ನು ಡಯಟ್‌ಗೆ ಸೇರಿಸಿ ಸ್ವಲ್ಪ ವ್ಯಾಯಾಮ ಅಭ್ಯಾಸ ಮಾಡಿಕೊಳ್ಳಿ. ವರ್ಷವಾಗುವಷ್ಟರಲ್ಲಿ ನಿಮ್ಮ ಕನಸಿನ ಹಾಟ್ ತವಾದಂಥ ಹೊಟ್ಟೆ ನಿಮ್ಮದಾಗುತ್ತದೆ. ಮತ್ತೆ ಕ್ರಾಪ್ ಟಾಪ್ ಏಕೆ, ಬಿಕಿನಿ ಧರಿಸಲೂ ಬೇಕಾದ ಆತ್ಮವಿಶ್ವಾಸ ನಿಮ್ಮದಾಗುತ್ತದೆ. ಇವೆಲ್ಲದರ ನಡುವೆ ದೇಹದಲ್ಲಿ ಸ್ಟೋರ್ ಆದ ಫ್ಯಾಟ್ ಕರಗಿಸಲು ನೀರು ಎಲ್ಲಕ್ಕಿಂತ ಹೆಚ್ಚು ಕೆಲಸ ಮಾಡುತ್ತದೆ ಎಂಬುದನ್ನು ಮರೆಯಬೇಡಿ.